ಕಜೆ ಮಾರಿಗುಡಿಯಲ್ಲಿಶೋಭಾಯಾತ್ರೆ

Contributed bymundkursridevistudio@gmail.com|Vijaya Karnataka

ಬೆಳ್ಮಣ್ ಮುಂಡ್ಕೂರು ಕಜೆ ಶ್ರೀಮಹಾಮ್ಮಾಯಿ ದೇವಸ್ಥಾನದಲ್ಲಿ ಮಾರಿ ಪೂಜೆ ನಡೆಯಿತು. ದೇವಿಯ ಶೋಭಾಯಾತ್ರೆ ಸಚ್ಚೇರಿಪೇಟೆ ಮಹಾಮ್ಮಾಯಿ ಕಟ್ಟೆಯವರೆಗೆ ಸಾಗಿತು. ಕುಣಿತ ಭಜನೆ, ಹುಲಿ ವೇಷ ಮೆರವಣಿಗೆಯನ್ನು ಆಕರ್ಷಿಸಿದವು. ಕಟ್ಟೆಯಲ್ಲಿ ವಿಶೇಷ ಪೂಜೆ, ಮಹಾ ಮಂಗಳಾರತಿ ಜರುಗಿತು. ಬಳಿಕ ಗುಳಿಗೆ ಪಂಜುರ್ಲಿ ದೈವಗಳ ನೇಮೋತ್ಸವ ನಡೆಯಿತು.

grand festival procession at kaje marigudi kukka

ವೀಕ ಸುದ್ದಿ ಲೋಕ ಬೆಳ್ಮಣ್

ಮುಂಡ್ಕೂರು ಕಜೆ ಶ್ರೀಮಹಾಮ್ಮಾಯಿ ದೇವಸ್ಥಾನ ಕುಕ್ಕದಡಿ ಮಾರಿಗುಡಿಯಲ್ಲಿಮಾರಿ ಪೂಜೆ ಪ್ರಯುಕ್ತ ದೇವಿಯ ಶೋಭಾಯಾತ್ರೆ ವಿಜೃಂಣೆಯಿಂದ ನೆರವೇರಿತು .

ಶ್ರೀ ಕ್ಷೇತ್ರದಿಂದ ಹೊರಟ ದೇವಿಯ ಮೆರವಣಿಗೆ ಸಚ್ಚೇರಿಪೇಟೆ ಮಹಾಮ್ಮಾಯಿ ಕಟ್ಟೆಯವರಿಗೆ ಸಾಗಿ ಬಂತು. ನಾನಾ ಭಜನಾ ಮಂಡಳಿಗಳಿಂದ ಕುಣಿತ ಭಜನೆ, ಹುಲಿ ವೇಷ ಮೆರವಣಿಗೆಯ ಆಕರ್ಷಣೆಯಾಗಿತ್ತು. ಕಟ್ಟೆಯಲ್ಲಿದೇವಿಗೆ ವಿಶೇಷ ಪೂಜೆ, ಮಹಾ ಮಂಗಳಾರತಿ ನೆರವೇರಿತು. ರಾತ್ರಿ ಪೇಟೆಯಿಂದ ಶ್ರೀ ಕ್ಷೇತ್ರಕ್ಕೆ ಮೆರವಣಿಗೆ ನಿರ್ಗಮಿಸಿ ಬಳಿಕ ಗುಳಿಗೆ -ಪಂಜುರ್ಲಿ ದೈವಗಳ ನೇಮೋತ್ಸವ ನಡೆಯಿತು.

ಬೆಳ್ಮಣ್ 11 03 ಕಜೆ ಮಾರಿಗುಡಿ ಶೋಭಾಯಾತ್ರೆ