ಚುರುಮುರಿ, ಟಾಪ್ ಬಿಟ್ 12032026

Contributed byKiran Mr. Kumar|Vijaya Karnataka

ನಟಿ ತಾಪ್ಸಿ ಪನ್ನು ಅವರು ಸಾಮಾಜಿಕ ಜಾಲತಾಣಗಳಲ್ಲಿ ಸೆಲೆಬ್ರಿಟಿಗಳ ಮೇಲಿನ ಒತ್ತಡ ಹೆಚ್ಚುತ್ತಿದೆ ಎಂದು ಹೇಳಿದ್ದಾರೆ. ಕಲಾವಿದರು ಈಗ ಟ್ರೋಲ್ ಮಾಡುವವರನ್ನು ತೃಪ್ತಿಪಡಿಸಬೇಕಿದೆ. 'ನದೃಸಾ' ಎಂಬ ಹೊಸ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ರವಿತೇಜ ಅಭಿನಯದ 'ಇರುಮುಡಿ' ಚಿತ್ರದಲ್ಲಿ ತಮನ್ನಾ ನಟಿಸಲಿದ್ದಾರೆ. ನಾಗಾರ್ಜುನ ಅವರ ನೂರನೇ ಚಿತ್ರದಲ್ಲಿ ಅವರು ಸ್ಟೈಲಿಶ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಕಂಗನಾ ಅಭಿನಯದ 'ಭಾರತ ಭಾಗ್ಯ ವಿಧಾತ' ಚಿತ್ರ 26/11 ದಾಳಿಯ ಕುರಿತು ಹೇಳಲಿದೆ.

celebrity backlash on social media taapsee pannu

ಕಲಾವಿದರನ್ನು ಕಮೆಂಟಿಸುವ ಕಾಯಿಲೆ

ಸೋಶಿಯಲ್ ಮೀಡಿಯಾದಲ್ಲಿಸೆಲೆಬ್ರಿಟಿಗಳಿಗೆ ಒತ್ತಡ ಹೆಚ್ಚುತ್ತಿದೆ ಎಂದಿದ್ದಾರೆ ನಟಿ ತಾಪ್ಸಿ ಪನ್ನು .

ಕಲಾವಿದರು ಈಗ ವಿಮರ್ಶಕರು, ಟ್ರೋಲ್ ಮಾಡುವ, ಕಮೆಂಟ್ ಮಾಡುವ ಅನಾಮಧೇಯರನ್ನು ತೃಪ್ತಿ ಪಡಿಸಬೇಕಿದೆ. ನಾವು ಯಾರನ್ನು ನಮ್ಮ ಕೆಲಸದಿಂದ ಮೆಚ್ಚಿಸಬೇಕು ಎನ್ನುವ ಪ್ರಶ್ನೆ ನನ್ನ ಎದುರಿಗಿದೆ. ಮೊದಲೆಲ್ಲಾಅನಾಮಧೇಯರು ಕಮೆಂಟ್ ಮಾಡುತ್ತಿದ್ದರು. ಈಗ ಟೀಕೆ ಮಾಡಲೆಂದೇ ವೇದಿಕೆಗಳಿವೆ. ಈಗ ಅದೊಂದು ಕಾಯಿಲೆæಯಾಗಿದೆ ಎಂದಿದ್ದಾರೆ.

ನದೃಸಾ ಟೈಟಲ್ ಲಾಂಚ್

ಹೊಸ ಪ್ರತಿಭೆಗಳ ‘ನದೃಸಾ’ ಸಿನಿಮಾದ ಮೊದಲ ಟೀಸರ್ ಬಿಡುಗಡೆಯಾಗಿದೆ. ಮಣಿರಾಜ್ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು

ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರಕ್ಕೆ ‘ನಿಜವಲ್ಲದ ನಿಜವಾದ ಹಾದಿ’ ಎಂಬ ಅಡಿಬರಹವಿದೆ. ನಯನಾ, ಧೃತಿ ಮತ್ತು ಸಾನ್ವಿ ಪಾತ್ರಗಳ ಸುತ್ತ ಸಿನಿಮಾ ಸಾಗುತ್ತದೆ. ಅದಕ್ಕಾಗಿ ಹೆಸರಿನ ಮೊದಲ ಅಕ್ಷರವನ್ನು ಬಳಸಿಕೊಂಡು ‘ನದೃಸಾ’ ಶೀರ್ಷಿಕೆ ಎಂಬ ಇಡಲಾಗಿದೆ.

ಟಾಪ್ ಬಿಟ್

ರವಿತೇಜ ಅಭಿನಯದ ‘ಇರುಮುಡಿ’ ಸಿನಿಮಾದಲ್ಲಿನಟಿ ತಮನ್ನಾ ನಟಿಸಲಿದ್ದಾರೆ. ಚಿತ್ರದ ನಾಯಕಿಯಾಗಿ ಪ್ರಿಯಾ ಭವಾನಿ ಶಂಕರ್ ಈ ಮೊದಲೇ ಆಯ್ಕೆ ಆಗಿದ್ದರು.

ತೆಲುಗು ನಟ ನಾಗಾರ್ಜುನ ತಮ್ಮ ನೂರನೇ ಸಿನಿಮಾದಲ್ಲಿಹಿಂದೆಂದಿಗಿಂತ ಸ್ಟೈಲಿಶ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಚಿತ್ರದ ನಿರ್ದೇಶಕ ರಾ. ಕಾರ್ತಿಕ್ ತಿಳಿಸಿದ್ದಾರೆ.

ನಟಿ ಕಂಗನಾ ಅಭಿನಯದ ‘ಭಾರತ ಭಾಗ್ಯ ವಿಧಾತ’ ಚಿತ್ರ 26/11ರಂದು ಮುಂಬಯಿಯ ಆಸ್ಪತ್ರೆ ಮೇಲಾದ ಗುಂಡಿನ ದಾಳಿಯ ಕುರಿತು ಹೇಳಲಿದೆ.