‘ಸಾಮಾಜಿಕ ಪಾಠ ಕಲಿಯಲು ಮಕ್ಕಳು ಜನರೊಂದಿಗೆ ಬೆರೆಯಲಿ’

Contributed bynishak7041132@gmail.com|Vijaya Karnataka

ಮಕ್ಕಳು ಬಾವಿಯೊಳಗಿನ ಕಪ್ಪೆಯಾಗದೆ ಸಮಾಜದೊಂದಿಗೆ ಬೆರೆಯುವುದು ಮುಖ್ಯ. ಮದುವೆ, ಮರಣದಂತಹ ಸಂದರ್ಭಗಳಲ್ಲಿ ಮಕ್ಕಳನ್ನು ಕಳುಹಿಸಬೇಕು. ಇರುವೈಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಫಲ್ಗುಣಿ ಯುವಕ ಮಂಡಲದ ವಾರ್ಷಿಕೋತ್ಸವ ನಡೆಯಿತು. ಅತ್ಯುತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಕ್ರೀಡಾಕೂಟದ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಮಾಜ ಸೇವೆ ಸಲ್ಲಿಸಿದ ಗಣ್ಯರನ್ನು ಸನ್ಮಾನಿಸಲಾಯಿತು. ಬಳಿಕ 'ಜೈ ಹನುಮಾನ್‌' ನಾಟಕ ಪ್ರದರ್ಶನಗೊಂಡಿತು.

countless opportunities for children to learn social lessons

ವಿಕ ಸುದ್ದಿಲೋಕ, ಕೈಕಂಬ

ಮಕ್ಕಳು ಬಾವಿಯೊಳಗಿನ ಕಪ್ಪೆಯಾಗುವ ಬದಲು ಸಮಾಜದೊಂದಿಗೆ ಬೆರೆಯುವುದು ಅತ್ಯಗತ್ಯ. ಮದುವೆ ಅಥವಾ ಮರಣದಂತಹ ಸಂದರ್ಭಗಳಲ್ಲಿಹತ್ತು ಜನರು ಸೇರುವ ಕಡೆಗೆ ಮಕ್ಕಳನ್ನು ಕಳುಹಿಸಬೇಕು. ಮದುವೆ ಮನೆ ಪಾಠ ಕಲಿಸದಿದ್ದರೂ, ಮರಣದ ಮನೆ ಬದುಕಿನ ಸಾಕಷ್ಟು ಪಾಠಗಳನ್ನು ಕಲಿಸುತ್ತದೆ ಎಂದು ಮಂಗಳೂರು ರಾಷ್ಟೊ್ರೕತ್ಥಾನ ವಿದ್ಯಾ ಕೇಂದ್ರದ ವಿಭಾಗ ಮುಖ್ಯಸ್ಥ ಡಾ. ಅರುಣ್ ಉಳ್ಳಾಲ್ ಹೇಳಿದರು.

ಇರುವೈಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜಾತ್ರಾ ಮಹೋತ್ಸವ ಹಾಗೂ ಮಹಾರಥೋತ್ಸವದ ಅಂಗವಾಗಿ ದೇವಸ್ಥಾನದ ಮುಂಭಾಗದ ವೇದಿಕೆಯಲ್ಲಿನಡೆದ ಫಲ್ಗುಣಿ ಯುವಕ ಮಂಡಲದ 38ನೇ ವಾರ್ಷಿಕೋತ್ಸವದಲ್ಲಿಅವರು ಧಾರ್ಮಿಕ ಉಪನ್ಯಾಸ ನೀಡಿದರು. ಕುಪ್ಪೆಪದವು ಕಿಲೆಂಜಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಜಯಲಕ್ಷ್ಮೀ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಪ್ರತಿಭಾ ಪುರಸ್ಕಾರ ಮತ್ತು ಬಹುಮಾನ ವಿತರಣೆ: ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಯುವಕ ಮಂಡಲ ಹಮ್ಮಿಕೊಂಡಿದ್ದ ಕ್ರೀಡಾಕೂಟದ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಉದ್ಯಮಿ ವೆಂಕಟೇಶ್ ಪೂಜಾರಿ ಗುಜರಾತ್ ಅವರು ವಿಜೇತ ಮಕ್ಕಳಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಿದರು.

ಗಣ್ಯರಿಗೆ ಸನ್ಮಾನ: ನಾನಾ ಕ್ಷೇತ್ರಗಳಲ್ಲಿಸೇವೆ ಸಲ್ಲಿಸಿದ ಇರುವೈಲು ಅಂಚೆ ಕಚೇರಿಯ ನಿವೃತ್ತ ಅಂಚೆ ಪಾಲಕಿ ಅನುರಾಧ ಭಟ್ , ದುರ್ಗಾಪರಮೇಶ್ವರಿ ದೇವಳದಲ್ಲಿಸೇವೆ ಸಲ್ಲಿಸುತ್ತಿರುವ ಶೇಖರ (ಮಂಗುರ) ಅವರನ್ನು ಸನ್ಮಾನಿಸಲಾಯಿತು. ಜಂಪ್ ರೋಪ್ ಸ್ಪರ್ಧೆಯಲ್ಲಿರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವ ಮೋಹಿನಿ ನಾಯ್ಕ ಅವರನ್ನು ಗುರುತಿಸಿ ಗೌರವಿಸಲಾಯಿತು. ಫಲ್ಗುಣಿ ಯುವಕ ಮಂಡಲದ ಅಧ್ಯಕ್ಷ ಪ್ರಭಾಕರ ಆಚಾರ್ಯ ಉಪಸ್ಥಿತರಿದ್ದರು. ಪ್ರಶಾಂತ್ ಗಾಣಿಗ ವರದಿ ಮಂಡಿಸಿದರು. ಮನೋಹರ್ ನಾಯ್ ್ಕ ಹಾಗೂ ಸುದೇಶ್ ಪೂಜಾರಿ ಸನ್ಮಾನ ಪತ್ರ ವಾಚಿಸಿದರು.ಏಕನಾಥ ದೇವಾಡಿಗ ಪ್ರಾರ್ಥಿಸಿ, ಧನಂಜಯ ಶೆಟ್ಟಿ ಬರ್ಕೆ ಸ್ವಾಗತಿಸಿದರು. ವಿಶ್ವನಾಥ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು. ಬಾಲಕೃಷ್ಣ ಕಲ್ಲಾಡಿ ವಂದಿಸಿದರು.

ಬಳಿಕ ವಿಧಾತ್ರಿ ಕಲಾವಿದೆರ್ ಕುಡ್ಲಇವರಿಂದ ವಿಜಯಕುಮಾರ್ ಕೊಡಿಯಾಲ್ ಬೈಲ್ ನಿರ್ದೇಶನದ ಜೈ ಹನುಮಾನ್ ನಾಟಕ ಪ್ರದರ್ಶನಗೊಂಡಿತು.