ಕಾಸರಗೋಡು: ಚೆಂಗಳ ಪಂಚಾಯಿತಿ ಕುಟುಂಬಶ್ರೀ ಸಿಡಿಎಸ್ ನ 17ನೇ ವಾಧಿರ್ಡ್ ಬೇವಿಂಜೆಯ ಹಸಿರು ಜೆಎಲ್ಜಿಯಿಂದ ಕಲ್ಲಂಗಡಿ ಕೃಷಿ ಕೊಯ್ಲುನಡೆಯಿತು.
ಪಂಚಾಯಿತಿ ಅಧ್ಯಕ್ಷ ವಸಂತನ್ ಅಜಕ್ಕೋಡು ಉದ್ಘಾಟಿಸಿದರು. ಕುಟುಂಬಶ್ರೀ ಸಿಡಿಎಸ್ ಅಧ್ಯಕ್ಷೆ ಸಕೀನ ಸಿ. ಎ. ಅಧ್ಯಕ್ಷತೆ ವಹಿಸಿದ್ದರು. ಪಂಚಾಯಿತಿ ಉಪಾಧ್ಯಕ್ಷೆ ಜಾಸ್ಮಿನ್ ಕಬೀರ್ , ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷ ಶುಕೂರ್ ಚೆರ್ಕಳ, ಕ್ಷೇಮ ಕಾರ್ಯ ಸ್ಥಾಯೀ ಸಮಿತಿ ಅಧ್ಯಕ್ಷ ಇಕ್ಬಾಲ್ ಚೇರೂರು, ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷೆ ಶಾಂತಕುಮಾರಿ ಟೀಚರ್ , ಪಂಚಾಯಿತಿ ಆಡಳಿತ ಸಮಿತಿ ಸದಸ್ಯರು, ಸಿಡಿಎಸ್ ಉಪಾಧ್ಯಕ್ಷೆ ಸಕೀನಾಬಿ, ಸಿಡಿಎಸ್ ಆಡಳಿತ ಸಮಿತಿ ಸದಸ್ಯರು, ಜಿಲ್ಲಾಮಿಶನ್ ಸ್ಟಾಫ್ ಸದಸ್ಯರು, ಅಕೌಂಟೆಂಟ್ , ಜೆಎಲ್ ಜಿ ಸದಸ್ಯರು ಭಾಗವಹಿಸಿದ್ದರು. ಅಗ್ರಿ ಸಿಆರ್ ಪಿ ಪ್ರಸನ್ನ ವಂದಿಸಿದರು. ಕೊಯ್ಲುನಡೆಸಿದ 1.2 ಕ್ವಿಂಟಲ್ ಕಲ್ಲಂಗಡಿಯನ್ನು ಮಾರಾಟ ಮಾಡಲಾಯಿತು.
ಚಿತ್ರ: 4ಕೆಎಸ್ ಎಲ್ ಕುಟುಂಬಶ್ರೀ- ಪಂಚಾಯಿತಿ ಅಧ್ಯಕ್ಷ ವಸಂತನ್ ಅಜಕ್ಕೋಡು ಕೊಯ್ಲುಉದ್ಘಾಟಿಸಿದರು.

