ಯುವಶಕ್ತಿ ಸದ್ಬಳಕೆಯಾಗಲಿ

Contributed bynmanjaguni@gmail.com|Vijaya Karnataka

ಅಂಕೋಲಾದ ಕೆಎಲ್‌ಇ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಎನ್‌ಎಸ್‌ಎಸ್‌ ಶಿಬಿರ ನಡೆಯಿತು. ಯುವಶಕ್ತಿಯ ಸದ್ಬಳಕೆ ದೇಶದ ಅಭಿವೃದ್ಧಿಗೆ ಮುಖ್ಯ ಎಂದು ಡಾ. ಅಶೋಕ ಎಂ. ಜೋಶಿ ಹೇಳಿದರು. ರಾಷ್ಟ್ರೀಯ ಭಾವೈಕ್ಯತೆ ಮೂಡಿಸುವುದು ಎನ್‌ಎಸ್‌ಎಸ್‌ ಯೋಜನೆಯ ಉದ್ದೇಶ ಎಂದು ಪ್ರಾಚಾರ್ಯ ಅಶ್ವತ್ಥನಾರಾಯಣ ಹೆಗಡೆ ತಿಳಿಸಿದರು. ಉದ್ಯೋಗಕ್ಕಿಂತ ಬದುಕು ಕಟ್ಟಿಕೊಳ್ಳುವುದು ಮುಖ್ಯ ಎಂದರು.

let youth power flourish dr ashok joshis remarks at the camp

ವಿಕ ಸುದ್ದಿಲೋಕ ಅಂಕೋಲಾ

ಯುವಕರು ಈ ದೇಶದ ಬಹುದೊಡ್ಡ ಆಸ್ತಿ. ಯುವಶಕ್ತಿಯನ್ನು ಸದ್ಬಳಕೆ ಮಾಡಿಕೊಂಡಲ್ಲಿನಮ್ಮ ದೇಶ ಅಭಿವೃದ್ಧಿ ಕಾಣಬಲ್ಲದು ಎಂದು ಪ್ರಾಥಮಿಕ ಶಿಕ್ಷಕರ ತರಬೇತಿ ಸಂಸ್ಥೆಯ ನಿವೃತ್ತ ಉಪನ್ಯಾಸಕ ಡಾ. ಅಶೋಕ ಎಂ. ಜೋಶಿ ಹೇಳಿದರು.

ಪಟ್ಟಣದ ಕೆಎಲ್ ಇ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿನಡೆದ ಎನ್ ಎಸ್ ಎಸ್ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

‘‘ಕಾಲೇಜಿನ ಪ್ರಾಚಾರ್ಯ ಅಶ್ವತ್ಥನಾರಾಯಣ ಹೆಗಡೆ ಮಾತನಾಡಿ, ‘‘ ರಾಷ್ಟ್ರೀಯ ಭಾವೈಕ್ಯತೆ ಮೂಡಿಸುವುದೇ ಎನ್ ಎಸ್ ಎಸ್ ಯೋಜನೆಯಾಗಿದೆ. ಉದ್ಯೋಗಕ್ಕಿಂತ ಬದುಕು ಕಟ್ಟಿಕೊಳ್ಳುವುದು ಮುಖ್ಯ’’ ಎಂದರು.

ಆಡಳಿತ ಮಂಡಳಿಯ ಸದಸ್ಯೆ ಡಾ. ಮಿನಲ್ ನಾರ್ವೆಕರ, ಪ್ರಾಯೋಗಿಕ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ನಾಗಪ್ಪ ಸರೂರ್ ಇದ್ದರು. ಎನ್ ಎಸ್ ಎಸ್ ಕಾರ್ಯಕ್ರಮಾಧಿಕಾರಿ ಗೀತಾ ಗೌಡ ಸ್ವಾಗತಿಸಿದರು. ಸುಪ್ರಿಯಾ ನಾಯ್ಕ ನಿರೂಪಿಸಿದರು. ಸುಮತಿ ಗೌಡ ವಂದಿಸಿದರು.

12ಅಂಕೋಲಾ1

ಅಂಕೋಲಾದ ಕೆಎಲ್ ಇ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿನಡೆದ ಕಾರ್ಯಕ್ರಮದಲ್ಲಿಡಾ. ಅಶೋಕ ಜೋಶಿ ಮಾತನಾಡಿದರು.