ಯಾದಗಿರಿ: ನಗರದಲ್ಲಿಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಗಳನ್ನು ವಾಣಿಜ್ಯ ಬಳಕೆಗೆ ಉಪಯೋಗ ಮಾಡುತ್ತಿರುವ ಆರೋಪದ ಮೇರೆಗೆ ಹೋಟಲ್ ಹಾಗೂ ಖಾನಾವಳಿಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿ 46 ಸಿಲಿಂಡರ್ ಸೀಜ್ ಮಾಡಿದ್ದಾರೆ. ಸಹಾಯಕ ಆಯುಕ್ತ ಶ್ರೀಧರ ಗೋಟರ್ ಹಾಗೂ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕ ಸೋಮಶೇಖರ ಬಿರಾದಾರ ಅವರ ನೇತೃತ್ವದಲ್ಲಿಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಹತ್ತಿರದಿಂದ ಸುಭಾಷ್ ಚೌಕ್ ವರೆಗೆ ಹಾಗೂ ಡಿಗ್ರಿ ಕಾಲೇಜು ಎದುರಿನ ರಸ್ತೆಯಲ್ಲಿದಾಳಿ ನಿರ್ವಹಿಸಿ 35 ಸಿಲಿಂಡರ್ ಜಪ್ತಿ ಮಾಡಲಾಗಿದೆ. ತಹಶೀಲ್ದಾರ್ ಸುರೇಶ ಅಂಕಲಗಿ ನೇತೃತ್ವದಲ್ಲಿಹೊಸ ಬಸ್ ನಿಲ್ದಾಣದಿಂದ ಹಳೆ ಬಸ್ ನಿಲ್ದಾಣದವರೆಗೆ ಹಾಗೂ ಸ್ಟೇಷನ್ ಏರಿಯಾದಲ್ಲಿದಾಳಿ ನಡೆಸಿ 11 ಸಿಲಿಂಡರ್ ಸೀಜ್ ಮಾಡಿದ್ದು, ದೂರು ದಾಖಲಿಸಿ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಶ್ಚಿಮ ಏಷ್ಯಾ ರಾಷ್ಟ್ರಗಳಲ್ಲಿನಡೆಯುತ್ತಿರುವ ಯುದ್ಧದಿಂದಾಗಿ ದೇಶದಲ್ಲಿಅಡುಗೆ ಅನಿಲ ಸರಬರಾಜಿನಲ್ಲಿವ್ಯತ್ಯಯ ಉಂಟಾಗಿರುವ ಹಿನ್ನೆಲೆ ಯಾದಗಿರಿಯಲ್ಲಿಮುನ್ನೆಚ್ಚರಿಕೆ ವಹಿಸಲು ಅಧಿಕಾರಿಗಳು ಈ ಕ್ರಮಕ್ಕೆ ಮುಂದಾಗಿದ್ದಾರೆ.

