ತಲಾದಾಯ: ಎಲ್ಲಜಿಲ್ಲೆಗಳದ್ದು ಏರಿಕೆ ಕಲಬುರಗಿಯದು ಮಾತ್ರ ಇಳಿಕೆ!

Contributed bydevayya.guttedar@timesgroup.com|Vijaya Karnataka

ರಾಜ್ಯದ ಎಲ್ಲ ಜಿಲ್ಲೆಗಳ ತಲಾ ಆದಾಯ ಏರಿಕೆಯಾಗಿದ್ದರೆ, ಕಲಬುರಗಿ ಜಿಲ್ಲೆಯ ಆದಾಯ ಮಾತ್ರ ಕಡಿಮೆಯಾಗಿದೆ. 2023-24 ರಲ್ಲಿ 1.45 ಲಕ್ಷ ರೂ. ಇದ್ದ ಆದಾಯ 2024-25 ರಲ್ಲಿ 1.44 ಲಕ್ಷ ರೂ.ಗೆ ಇಳಿದಿದೆ. ಕೃಷಿ ಕ್ಷೇತ್ರದ ಕುಸಿತ, ಕೈಗಾರಿಕೆಗಳ ಕೊರತೆ, ಮತ್ತು ಅತಿವೃಷ್ಟಿ, ಅನಾವೃಷ್ಟಿ ರೈತರ ಬದುಕು ದುರ್ಬಲಗೊಳಿಸಿವೆ. ಇದು ಮಾನವ ಅಭಿವೃದ್ಧಿ ಸೂಚ್ಯಂಕದ ಮೇಲೂ ಪರಿಣಾಮ ಬೀರಿದೆ.

decline in per capita income of kalaburagi district is there an increase in other districts

ಜಿಲ್ಲೆ 2023-24 2024-25 ಬದಲಾವಣೆ ಬಾಗಲಕೋಟೆ 253403 ಬೆಂಗಳೂರು ನಗರ 766762 ಬೆಂಗಳೂರು ಗ್ರಾಮೀಣ 30 ಬೆಳಗಾವಿ ಬಳ್ಳಾರಿ ಬೀದರ್ ವಿಜಯಪುರ ಚಾಮರಾಜನಗರ ಚಿಕ್ಕಬಳ್ಳಾಪುರ ಚಿಕ್ಕಮಗಳೂರು ಚಿತ್ರದುರ್ಗ ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಗದಗ ಕಲಬುರಗಿ ಹಾಸನ ಹಾವೇರಿ ಕೊಡಗು ಕೋಲಾರ ಕೊಪ್ಪಳ ಮಂಡ್ಯ ಮೈಸೂರು ರಾಯಚೂರು ಬೆಂಗಳೂರು ದಕ್ಷಿಣ ಶಿವಮೊಗ್ಗ ತುಮಕೂರು ಉಡುಪಿ ಉತ್ತರ ಕನ್ನಡ ವಿಜಯನಗರ ಯಾದಗಿರಿ 2023ಧಿ-24 =1,45,377 ರೂ 2024-ಧಿ25= 1,44,449 ರೂ ಪ್ರಸಕ್ತ ಸಾಲಿನ ಆರ್ಥಿಕ ಸಮೀಕ್ಷೆಯಲ್ಲಿಬಹಿರಂಗ| ಜಿಡಿಪಿಗೆ ಕೃಷಿ ಕೊಡುಗೆ ಇಳಿಕೆ- ಕೈಗಾರಿಕೆಗಳ ಕೊರತೆ| ತಲಾದಾಯ: ಎಲ್ಲಜಿಲ್ಲೆಗಳದ್ದು ಏರಿಕೆ ಕಲಬುರಗಿಯದು ಮಾತ್ರ ಇಳಿಕೆ! ವಿಕ ಸುದ್ದಿಲೋಕ ಕಲಬುರಗಿ ಜಿಲ್ಲೆಯ ಪಾಲಿಗೆ ಇದೊಂದು ಆಘಾತಕಾರಿ ಸಂಗತಿ. ರಾಜ್ಯದ ಎಲ್ಲಜಿಲ್ಲೆಗಳ ತಲಾ ಆದಾಯ ಹೆಚ್ಚಾಗಿದ್ದರೆ ಕಲಬುರಗಿ ಜಿಲ್ಲೆಯದು ಮಾತ್ರ ಕಮ್ಮಿಯಾಗಿರುವುದು ಬೆಳಕಿಗೆ ಬಂದಿದೆ. ರಾಜ್ಯ ಸರಕಾರದ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಪ್ರಕಟಿಸಿರುವ 2025-26ನೇ ಸಾಲಿನ ಆರ್ಥಿಕ ಸಮೀಕ್ಷೆಯಲ್ಲಿಈ ಅಂಶ ದೃಢಪಟ್ಟಿದೆ. ಕಳೆದ 2023-24ರಲ್ಲಿಜಿಲ್ಲೆಯ ತಲಾ ಆದಾಯ 1.45 ಲಕ್ಷ ರೂ.ಗಳಾಗಿದ್ದರೆ, 2024-25ನೇ ಸಾಲಿನಲ್ಲಿಇದು 1.44 ಲಕ್ಷ ರೂ.ಗಳಾಗಿದ್ದು, 928 ರೂ. ಕಡಿಮೆಯಾಗಿದೆ. ಆದರೆ ರಾಜ್ಯದ ಎಲ್ಲಜಿಲ್ಲೆಗಳ ತಲಾ ಆದಾಯ ಹೆಚ್ಚಿದ್ದರೆ, ಕಲಬುರಗಿ ಜಿಲ್ಲೆಯದು ಮಾತ್ರ ಯಾಕೆ ಕಮ್ಮಿಯಾಗಿದೆ ಎನ್ನುವ ಪ್ರಶ್ನೆ ಎದುರಾಗಿದೆ. ಮಾನವ ಅಭಿವೃದ್ಧಿ ಸೂಚ್ಯಂಕ ಮತ್ತಷ್ಟು ಪಾತಾಳಕ್ಕೆ ಇಳಿದಿರುವುದನ್ನು ಇದು ಎತ್ತಿ ತೋರಿಸಿದೆ. ಇದು ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಎಚ್ಚರಿಕೆ ಗಂಟೆಯಾಗಿದೆ. ಎಂದಿನಂತೆ ತಲಾ ಆದಾಯದಲ್ಲಿಬೆಂಗಳೂರು ಟಾಪ್ ನಲ್ಲಿಇದ್ದರೆ, ಕಲಬುರಗಿಯ ಬಾಟಂನಲ್ಲಿದೆ. ಆದರೆ ಪ್ರತಿ ವರ್ಷ ಎಲ್ಲಜಿಲ್ಲೆಗಳ ತಲಾ ಆದಾಯ ಸ್ವಲ್ಪವಾದರೂ ಹೆಚ್ಚಾಗುತ್ತದೆ. ಆದರೆ ಕಲಬುರಗಿಯದು ಹೆಚ್ಚಾಗುವುದು ಬಿಡಿ, ಯಥಾ ಸ್ಥಿತಿಯೂ ಕಾಪಾಡದೇ ಕಡಿಮೆಯಾಗಿರುವುದು ಎಲ್ಲರನ್ನೂ ಚಿಂತನೆಗೀಡು ಮಾಡಿಕೊಟ್ಟಿದೆ. ಯಾಕೆ ಇಳಿಕೆ?: ಕಲಬುರಗಿ ಆರ್ಥಿಕೆ ನಿಂತಿರುವುದೇ ಕೃಷಿ ಮೇಲೆ. ಆದರೆ ಕೃಷಿ ಲಾಭದಾಯಕವಾಗಿಲ್ಲ. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಬಾರಿ ಜಿಡಿಪಿಗೆ ಕೃಷಿ ಕೊಡುಗೆ ಶೇ 13ರಷ್ಟು ಇಳಿಕೆಯಾಗಿದೆ. ಕಲಬುರಗಿ ಜಿಲ್ಲೆತೊಗರಿ ಕಣಜವೆಂಬ ಖ್ಯಾತಿ ಪಡೆದಿದೆ. ರಾಜ್ಯದಲ್ಲೇ ಅತೀ ಹೆಚ್ಚು ತೊಗರಿ ಬೆಳೆಯುವ ಜಿಲ್ಲೆ. ಇದು ಕೃಷಿಕರ ಬದುಕು ಬದಲಿಸುತ್ತಿಲ್ಲ. ಒಂದು ಬಾರಿ ಪ್ರವಾಹ ಇನ್ನೊಂದು ಬಾರಿ ಬರ. ಇದು ರೈತರ ಬದುಕು ದುರ್ಬಲಗೊಳಿಸಿದೆ. ಈ ಬಾರಿ ಉತ್ತಮ ಇಳುವರಿ ಬಂದರೂ ಅತಿವೃಷ್ಟಿ ಮತ್ತು ಭೀಮಾ ಸೇರಿ ಪ್ರಮುಖ ನದಿಗಳಿಗೆ ಪ್ರವಾಹ ಬಂದಿದ್ದರಿಂದ ನದಿ ತೀರದ ಬೆಳೆಗಳು ನೀರಿಗೆ ಆಹುತಿಯಾಗಿವೆ. ನೀರಾವರಿ ಯೋಜನೆಗಳು ಇದ್ದರೂ ರೈತರ ಹೊಲಗಳಿಗೆ ನೀರು ಹರಿಸಿ ಅವರ ಬದುಕು ಹಸಿರುಗೊಳಿಸುತ್ತಿಲ್ಲ. ಕೈಗಾರಿಕೆಗಳ ಕೊರತೆ, ಉದ್ಯೋಗ ಅರಸಿ ಗುಳೆ ಹೋಗುವುದು, ಬೇಸಿಗೆಯಲ್ಲಿಮಾರ್ಚ್ದಿಂದ ಮೇ ತಿಂಗಳು 45 ಡಿಗ್ರಿ ಉಷ್ಣಾಂಶ ಇರುವುದರಿಂದ ಎಲ್ಲವಲಯಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಶ್ರಮ ಕಮ್ಮಿಯಾಗುತ್ತದೆ. ಉತ್ಪಾದಕತೆ ಕಮ್ಮಿಯಾಗುತ್ತದೆ. ಪ್ರವಾಸೋದ್ಯಮ ಸ್ಥಗಿತವಾಗುತ್ತದೆ. ಇದು ಆದಾಯಕ್ಕೆ ಬಲವಾದ ಹೊಡೆತ ನೀಡಿದೆ ಎನ್ನುತ್ತಾರೆ ಆರ್ಥಿಕ ತಜ್ಞರು. ಶಿಕ್ಷಣ, ಆರೋಗ್ಯ ಮತ್ತು ತಲಾ ಆದಾಯಗಳು ಮಾನವ ಅಭಿವೃದ್ಧಿ ಸೂಚ್ಯಂಕಗಳಾಗಿದ್ದು, ಇವುಗಳು ಕಳಪೆ ಇರುವುದರಿಂದ ಮಾನವ ಅಭಿವೃದ್ಧಿಯೂ ಕಡಿಮೆ ಇರುವುದು ಸಹಜ. -ಕೋಟ್ -