ಮನೆ ವಿನ್ಯಾಸ ಬದಲಿಸುವ ಓಪನ್ ಕಿಚನ್

Contributed bybabitha.salian@timesgroup.com|Vijaya Karnataka

ಮನೆ ವಿನ್ಯಾಸದಲ್ಲಿ ಓಪನ್‌ ಕಿಚನ್‌ ಟ್ರೆಂಡ್‌ ಮನೆಗಳ ಹೃದಯ ಭಾಗವಾಗುತ್ತಿದೆ. ಐಷಾರಾಮಿ ಉಪಕರಣಗಳು ಈಗ ಕೇವಲ ಅಡುಗೆಗೆ ಸೀಮಿತವಾಗಿಲ್ಲ. ಅವು ಸುಂದರವಾಗಿ ಕಾಣುತ್ತಿವೆ. ಇನ್‌ಬಿಲ್ಟ್‌ ಹಾಬ್ಸ್‌, ಸ್ಮಾರ್ಟ್‌ ಚಿಮಣಿ, ಬಿಲ್ಟ್‌ಇನ್‌ ಓವನ್‌, ಡಿಶ್‌ವಾಶರ್‌, ಕಾಫಿ ಯಂತ್ರಗಳು ಅಡುಗೆಯನ್ನು ಸುಲಭಗೊಳಿಸಿವೆ. ಇವುಗಳ ವಿನ್ಯಾಸಗಳು ಮರದ ಕೆಲಸ ಮತ್ತು ಕಲ್ಲಿನ ಕೌಂಟರ್‌ಗಳೊಂದಿಗೆ ಹೊಂದಿಕೊಳ್ಳುತ್ತವೆ.

open kitchen features in home design

ಡೆಕೋರ್ ಟ್ರೆಂಡ್ (ಸ್ಲಗ್ ) 312

ಮನೆ ವಿನ್ಯಾಸ ಬದಲಿಸುವ ಓಪನ್ ಕಿಚನ್

ಇಂಟ್ರೊ

ಐಷಾರಾಮಿ ಉಪಕರಣಗಳಿಂದ ತುಂಬಿರುವ ಈಗಿನ ಓಪನ್ ಕಿಚನ್ ಪರಿಕಲ್ಪನೆಯು ಆಧುನಿಕ ಮನೆಗೆ ಹೊಸ ವ್ಯಾಖ್ಯಾನ ಬರೆಯುತ್ತಿದೆ.

------------------------------------

ಒಂದು ಕಾಲದಲ್ಲಿಕಿಚನ್ ಗಳು ಮನೆಯ ಒಂದು ಮೂಲೆಯಲ್ಲಿಅಥವಾ ಮುಚ್ಚಿದ ಬಾಗಿಲುಗಳ ಹಿಂದೆ ಯಾರಿಗೂ ಕಾಣದಂತೆ ಇರುತ್ತಿದ್ದವು. ಈಗ ಅವು ಮನೆಯ ಹೃದಯ ಭಾಗದಂತೆ ಎದ್ದು ಕಾಣುತ್ತಿವೆ ಹಾಗೂ ಲಿವಿಂಗ್ ರೂಮ್ ಮತ್ತು ಡೈನಿಂಗ್ ಏರಿಯಾಗಳೊಂದಿಗೆ ಅಚ್ಚುಕಟ್ಟಾಗಿ ಬೆರೆತುಹೋಗಿವೆ. ಈ ಬದಲಾವಣೆಯು ಕೇವಲ ವಾಸ್ತುಶಿಲ್ಪಕ್ಕೆ ಮಾತ್ರ ಸೀಮಿತವಾಗಿಲ್ಲ, ಇದೊಂದು ಸಾಮಾಜಿಕ ರೂಪಾಂತರವೂ ಹೌದು. ಅಡುಗೆ ಮನೆ ಈಗ ಕೇವಲ ಅಡುಗೆ ಮಾಡುವ ಸ್ಥಳವಾಗಿ ಉಳಿದಿಲ್ಲ. ಅದು ಜೀವನೋತ್ಸಾಹ, ನಗು, ಹರಟೆಯ ಸುಂದರ ತಾಣಗಳಾಗಿ ವಿಕಸನಗೊಂಡಿವೆ. ಮುಖ್ಯವಾಗಿ ಅವು ಮನೆಯ ವಿನ್ಯಾಸಗೊಂದಿಗೆ ಮತ್ತು ಮನೆಯ ಎಲ್ಲಾಸದಸ್ಯರಿಗೆ ತೆರೆದುಕೊಂಡಿದೆ. ಅಂದರೆ ಓಪನ್ ಕಿಚನ್ ಗಳಾಗುತ್ತಿವೆ. ಅಡುಗೆ ಮನೆಯ ಸ್ವರೂಪ ಬದಲಾದಂತೆ ಅಡುಗೆ ಮನೆಯ ಉಪಕರಣಗಳನ್ನು ನೋಡುವ ದೃಷ್ಟಿಕೋನವೂ ಬದಲಾಗುತ್ತಿದೆ. ಅಂದರೆ ಅವುಗಳೀಗ ಕಪಾಟುಗಳಲ್ಲಿಬಚ್ಚಿಟ್ಟುಕೊಳ್ಳುವ ವಸ್ತುಗಳಾಗದೆ ಎಲ್ಲರಿಗೂ ಕಾಣುವಂತೆ ಇರುತ್ತವೆ. ಆದ್ದರಿಂದ ಅವು ಸುಂದರವಾಗಿ ಕಾಣಬೇಕಿರುತ್ತವೆ. ಓಪನ್ ಕಿಚನ್ ಗಳಿಗಾಗಿಯೇ ಸ್ಲೀಕ್ ಡಿಸೈನ್ ದಳ ಕಿಚನ್ ಪರಿಕರಗಳು ವಿನ್ಯಾಸಗೊಂಡಿವೆ.

ಇನ್ ಬಿಲ್ಟ… ಹಾಬ್ಸ…: ಹಳೆಯ ಕಾಲದ ಶಬ್ದ ಮಾಡುವ ಬರ್ನರ್ ಗಳ ದಿನಗಳು ಮುಗಿದಿವೆ. ಈಗಿನ ಪ್ರೀಮಿಯಂ ಹಾಬ್ ಗಳು ಸಮಾನವಾಗಿ ಶಾಖ ಹರಡುತ್ತವೆ ಮತ್ತು ಭಾರದ ಪಾತ್ರೆಗಳನ್ನು ಸುಲಭವಾಗಿ ತಾಳಿಕೊಳ್ಳುತ್ತವೆ. ಗಾಳಿ ಅಥವಾ ಮತ್ಯಾವುದೇ ಕಾರಣಕ್ಕೆ ಉರಿ ಆರಿದರೆ ಈ ಸಾಧನವು ತಾನಾಗಿಯೇ ಅನಿಲ ಸರಬರಾಜನ್ನು ಸ್ಥಗಿತಗೊಳಿಸುತ್ತದೆ. ಅಡುಗೆ ಮನೆಯ ಕೌಂಟರ್ ಟಾಪ್ ನೊಂದಿಗೆ ವಿನ್ಯಾಸಗೊಳಿಸಲಾಗುವ ಇದು ನೋಡಲು ಕೂಡ ಅತ್ಯಂತ ಸುಂದರವಾಗಿ ಕಾಣುತ್ತದೆ.

ಸ್ಮಾರ್ಟ್ ಚಿಮಣಿ: ಈ ಹಿಂದಿನ ಚಿಮಣಿಗಳು ಹೆಚ್ಚು ಶಬ್ದ ಮಾಡುತ್ತಿದ್ದವು. ಆದರೆ ಈಗಿನ ಸ್ಮಾರ್ಟ್ ಚಿಮಣಿಗಳು ಶಬ್ದ ಮತ್ತು ಕಂಪನ ಕಡಿಮೆ ಮಾಡಿ ಹೆಚ್ಚಿನ ಗಾಳಿ ಹೀರಿಕೊಳ್ಳುತ್ತವೆ. ಇದರಿಂದಾಗಿ ಕೇವಲ ಕೈ ಸನ್ನೆಯ ಮೂಲಕವೇ ಫ್ಯಾನ್ ವೇಗವನ್ನು ಬದಲಾಯಿಸಬಹುದು. ಇದು ಜಿಡ್ಡನ್ನು ತಾನಾಗಿಯೇ ಸ್ವಚ್ಛಗೊಳಿಸುತ್ತದೆ, ಇದರಿಂದ ನಿಮ್ಮ ಸಮಯ ಉಳಿಯುತ್ತದೆ.

ಬಿಲ್ಟ… ಇನ್ ಓವನ್ : ಅಡುಗೆ ಮನೆಯ ಮಧ್ಯ ಭಾಗದಲ್ಲಿಆಕರ್ಷಕವಾಗಿ ಕಾಣುವ ಓವನ್ ಗಳು ಈಗ ಕೇವಲ ಬೇಕಿಂಗ್ ಗೆ ಮಾತ್ರ ಸೀಮಿತವಾಗಿಲ್ಲ. ಇದು ಶಾಖವನ್ನು ಒಳಗೇ ಹಿಡಿದಿಡುತ್ತದೆ ಮತ್ತು ಹೊರಗಿನಿಂದ ಮುಟ್ಟಿದಾಗ ಬಿಸಿಯಾಗದಂತೆ ಸುರಕ್ಷತೆ ನೀಡುತ್ತದೆ.

ಡಿಶ್ ವಾಶರ್ : ಸದ್ದಿಲ್ಲದೆ ಕೆಲಸ ಮಾಡುವ ಡಿಶ್ ವಾಶರ್ ಗಳು ಮನೆಮಂದಿಗೆ ಯಾವುದೇ ರೀತಿಯಲ್ಲಿಅಡ್ಡಿಪಡಿಸುವುದಿಲ್ಲ. ಇವುಗಳಲ್ಲಿರುವ ಇಕೊ ಮೋಡ್ ಮತ್ತು ಹಾಫ್ ಲೋಡ್ ಸೆಟ್ಟಿಂಗ್ ಗಳು ನೀರು ಮತ್ತು ವಿದ್ಯುತ್ ಉಳಿಸುತ್ತವೆ. ಪಾತ್ರೆಗಳ ಜಿಡ್ಡಿಗೆ ಅನುಗುಣವಾಗಿ ತಾನಾಗಿಯೇ ಡಿಟರ್ಜೆಂಟ್ ಬಳಸುವ ತಂತ್ರಜ್ಞಾನ ಇದರಲ್ಲಿದೆ.

ಕಾಫಿ ಯಂತ್ರ: ಅಡುಗೆ ಮನೆಯಲ್ಲಿತನ್ನದೇ ಆದ ವಿಶಿಷ್ಟ ಸ್ಥಾನ ಕಂಡುಕೊಂಡಿರುವ ಪಾರದರ್ಶಕ ನೀರಿನ ಟ್ಯಾಂಕ್ ಮತ್ತು 19 ಬಾರ್ ಪ್ರೆಶರ್ ಪಂಪ್ ಹೊಂದಿರುವ ಸುಂದರ ಸ್ಟ್ಯಾಂಡಿಂಗ್ ಕಾಫಿ ಯಂತ್ರವು ಬೆಳಗ್ಗಿನ ತಾಜಾ ಕಾಫಿ ಅಥವಾ ಮಧ್ಯಾಹ್ನದ ಆಯಾಸ ಪರಿಹರಿಸುವ ಪಾನೀಯ ತಯಾರಿಸುವುದನ್ನು ಸುಲಭಗೊಳಿಸುತ್ತದೆ. ಹೀಗೆ ಆಧುನಿಕ ಕಿಚನ್ ಉಪಕರಣಗಳ ಮುಖ್ಯ ಗುರಿ ಎಂದರೆ ಒತ್ತಡವಿಲ್ಲದ ಅಡುಗೆ ಅನುಭವ ನೀಡುವುದು. ಇವುಗಳ ಮ್ಯಾಟ್ ಗ್ರೇ ಬಣ್ಣ, ರೆಟ್ರೊ ಹ್ಯಾಂಡಲ್ , ಟೆಂಪರ್ಡ್ ಗ್ಲಾಸ್ ವಿನ್ಯಾಸಗಳು ಅಡುಗೆ ಮನೆಯ ಮರದ ಕೆಲಸ ಹಾಗೂ ಕಲ್ಲಿನ ಕೌಂಟರ್ ಗಳೊಂದಿಗೆ ಸೊಗಸಾಗಿ ಹೊಂದಿಕೊಳ್ಳುತ್ತವೆ.