ಏಜೆಂಟ್ ಕಾವೇರಿಯಾದ ಅದಿತಿ ಬಾಲನ್
ಏಜೆಂಟ್ ಗಳನ್ನು ಮುಖ್ಯ ಪಾತ್ರಗಳಲ್ಲಿಹೊಂದಿರುವ ಚಿತ್ರ ‘ಆಪರೇಷನ್ ಡ್ರೀಮ್ ಥಿಯೇಟರ್ 666’.
ಈ ಚಿತ್ರವು ಈಗಷ್ಟೇ ಚಿತ್ರೀಕರಣದ ಐದನೇ ಶೆಡ್ಯೂಲನ್ನು ಮುಗಿಸಿದ್ದು, ಇದೀಗ ತನ್ನ ಪೋಸ್ವ್ ಪ್ರೊಡಕ್ಷನ್ ಹಂತಕ್ಕೆ ಕಾಲಿಡುತ್ತಿದೆ. ಈ ಹೊತ್ತಲ್ಲಿನಿರ್ದೇಶಕ ಹೇಮಂತ್ ರಾವ್ ನೇತೃತ್ವದ ಚಿತ್ರ ತಂಡವು ಪ್ರಮುಖ ಪಾತ್ರವನ್ನು ಘೋಷಿಸಿದೆ. ತಮಿಳಿನ ರಾಜ್ಯ ಪ್ರಶಸ್ತಿ ಪುರಸ್ಕೃತೆ ಅದಿತಿ ಬಾಲನ್ ಈ ಚಿತ್ರದಲ್ಲಿ ಏಜೆಂಟ್ ಕಾವೇರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಅದಿತಿ ಬಾಲನ್ ‘ಅರುವಿ’ ಎಂಬ ತಮ್ಮ ಮೊದಲ ಚಿತ್ರದಲ್ಲಿಉತ್ತಮ ಅಭಿನಯದಿಂದ ಎಲ್ಲರ ಮನೆಮಾತಾಗಿದ್ದರು. ತದನಂತರ ‘ಕ್ಯಾಪ್ಟನ್ ಮಿಲ್ಲರ್ ’, ‘ಪಡವೆಟ್ಟು’ ಮುಂತಾದ ಚಿತ್ರಗಳಲ್ಲಿನಟಿಸಿ ಸೈ ಎನಿಸಿಕೊಂಡಿದ್ದಾರೆ. ಈಗ ಈ ಚಿತ್ರದ ಮೂಲಕ ಕಾವೇರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಡಾ. ಶಿವರಾಜಕುಮಾರ್ ಏಜೆಂಟ್ ಪ್ರಕಾಶ್ ಆಗಿ ಕಾಣಿಸಿಕೊಂಡಿದ್ದು, ಡಾಲಿ ಧನಂಜಯ್ ಏಜೆಂಟ್ ಶಂಕರ್ ಆಗಿ ಮೊದಲ ಬಾರಿಗೆ ರೆಟ್ರೋ ಲುಕ್ ನಲ್ಲಿಕಾಣಿಸಿಕೊಂಡಿದ್ದಾರೆ. ಇದೇ ವರ್ಷದಲ್ಲಿಕನ್ನಡ ಹಾಗೂ ತೆಲುಗಿನಲ್ಲಿಚಿತ್ರವನ್ನು ಬಿಡುಗಡೆ ಮಾಡಬೇಕೆಂಬುದು ಚಿತ್ರ ತಂಡದ ಗುರಿ. ಈ ಚಿತ್ರಕ್ಕೆ ಚರಣ್ ರಾಜ್ ಸಂಗೀತ ನಿರ್ದೇಶನ ಮಾಡಿದ್ದು, ಅದ್ವೈತ ಗುರುಮೂರ್ತಿ ಮುಖ್ಯ ಛಾಯಾಗ್ರಾಹಕರಾಗಿದ್ದು, ಇಂಚರ ಸುರೇಶ್ ವಸ್ತ್ರ ವಿನ್ಯಾಸ ಮಾಡಿದ್ದಾರೆ.

