ಪ್ರಸಕ್ತ ಸಾಲಿನ ಆರ್ಥಿಕ ಸಮೀಕ್ಷೆಯಲ್ಲಿಬಹಿರಂಗ | ಎಲ್ಲಜಿಲ್ಲೆಗಳದ್ದು ಏರಿಕೆ ಕಲಬುರಗಿಯದು ಮಾತ್ರ ಇಳಿಕೆ | ಜಿಡಿಪಿಗೆ ಕೃಷಿ ಕೊಡುಗೆ ಇಳಿಕೆ- ಕೈಗಾರಿಕೆಗಳ ಕೊರತೆ

Contributed bydevayya.guttedar@timesgroup.com|Vijaya Karnataka

ರಾಜ್ಯದ ಆರ್ಥಿಕ ಸಮೀಕ್ಷೆಯ ಪ್ರಕಾರ, ಎಲ್ಲ ಜಿಲ್ಲೆಗಳ ತಲಾ ಆದಾಯ ಹೆಚ್ಚಳವಾಗಿದ್ದರೆ ಕಲಬುರಗಿ ಜಿಲ್ಲೆಯ ಆದಾಯ ಮಾತ್ರ ಕಡಿಮೆಯಾಗಿದೆ. 2023-24 ರಲ್ಲಿ 1,45,377 ರೂ. ಇದ್ದ ತಲಾ ಆದಾಯ 2024-25 ರಲ್ಲಿ 1,44,449 ರೂ. ಗೆ ಇಳಿದಿದೆ. ಕೃಷಿ ಕೊಡುಗೆ ಶೇ. 22.8 ರಿಂದ ಶೇ. 13 ಕ್ಕೆ ಕುಸಿದಿದೆ. ಕೈಗಾರಿಕೆಗಳ ಕೊರತೆ ಮತ್ತು ಉದ್ಯೋಗಕ್ಕಾಗಿ ಗುಳೆ ಹೋಗುವುದು ಇದಕ್ಕೆ ಕಾರಣವಾಗಿದೆ.

kalaburagi economy decline in income agricultural setbacks and industrial shortcomings

ದೇವಯ್ಯ ಗುತ್ತೇದಾರ್ , ಕಲಬುರಗಿ dಛಿvayya.ಜ್ಠಠಿಠಿಛಿda್ಟಃಠಿಜಿಞಛಿsಟ್ಛಜ್ಞಿdಜಿa.್ಚಟಞ ಜಿಲ್ಲೆಯ ಪಾಲಿಗೆ ಇದೊಂದು ಆತಂಕಾರಿ ಸಂಗತಿ. ರಾಜ್ಯದ ಎಲ್ಲಜಿಲ್ಲೆಗಳ ತಲಾ ಆದಾಯ ಹೆಚ್ಚಾಗಿದ್ದರೆ ಕಲಬುರಗಿ ಜಿಲ್ಲೆಯದು ಮಾತ್ರ ಕಮ್ಮಿಯಾಗಿರುವುದು ಅಚ್ಚರಿ ಮೂಡಿಸಿದೆ. ರಾಜ್ಯ ಸರಕಾರದ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಪ್ರಕಟಿಸಿರುವ 2025-26ನೇ ಸಾಲಿನ ಆರ್ಥಿಕ ಸಮೀಕ್ಷೆಯಲ್ಲಿಈ ಅಂಶ ದೃಢಪಟ್ಟಿದೆ. ಕಳೆದ 2023-24ರಲ್ಲಿಜಿಲ್ಲೆಯ ತಲಾ ಆದಾಯ 1,45,377 ರೂ.ಗಳಾಗಿದ್ದರೆ, 2024-25ನೇ ಸಾಲಿನಲ್ಲಿಇದು 1,44,449 ರೂ.ಗಳಾಗಿದೆ. ಅಂದರೆ 928 ರೂ. ಕಡಿಮೆಯಾಗಿದೆ. ಆದರೆ ರಾಜ್ಯದ ಎಲ್ಲಜಿಲ್ಲೆಗಳ ತಲಾ ಆದಾಯ ಹೆಚ್ಚಿದ್ದರೆ, ಕಲಬುರಗಿ ಜಿಲ್ಲೆಯದು ಮಾತ್ರ ಯಾಕೆ ಕಮ್ಮಿಯಾಗಿದೆ ಎನ್ನುವ ಪ್ರಶ್ನೆ ಎದುರಾಗಿದೆ. ತಲಾ ಆದಾಯ ಮತ್ತಷ್ಟು ಪಾತಾಳಕ್ಕೆ ಇಳಿದಿರುವುದನ್ನು ಇದು ಎತ್ತಿ ತೋರಿಸಿದೆ. ಇದು ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಎಚ್ಚರಿಕೆ ಗಂಟೆಯಾಗಿದೆ. ಎಲ್ಲಜಿಲ್ಲೆಗಳು ಮಾನವ ಅಭಿವೃದ್ಧಿಯಲ್ಲಿಮುಂದೆ ಸಾಗುತ್ತಿದ್ದರೆ ಘಟಾನುಘಟಿ ರಾಜಕಾರಣಿಗಳು ಇರುವ ಕಲಬುರಗಿ ಮಾತ್ರ ಹಿಂದೆ ಬಿದ್ದಿರುವುದು ಯಾಕೆ ಎಂಬ ಚರ್ಚೆ ಶುರುವಾಗಿದೆ. ಎಂದಿನಂತೆ ತಲಾ ಆದಾಯದಲ್ಲಿಈ ವರ್ಷವೂ ಬೆಂಗಳೂರು ಟಾಪ್ ನಲ್ಲಿಇದ್ದರೆ, ಕಲಬುರಗಿಯ ಬಾಟಂನಲ್ಲಿದೆ. ಆದರೆ ಪ್ರತಿ ವರ್ಷ ಎಲ್ಲಜಿಲ್ಲೆಗಳ ತಲಾ ಆದಾಯ ಸ್ವಲ್ಪವಾದರೂ ಹೆಚ್ಚಾಗುತ್ತದೆ. ಆದರೆ ಕಲಬುರಗಿಯದು ಹೆಚ್ಚಾಗುವುದು ಬಿಡಿ, ಯಥಾ ಸ್ಥಿತಿಯೂ ಕಾಪಾಡದೇ ಕಡಿಮೆಯಾಗಿರುವುದು ಎಲ್ಲರನ್ನೂ ಚಿಂತನೆಗೀಡು ಮಾಡಿಕೊಟ್ಟಿದೆ. ಯಾಕೆ ಇಳಿಕೆ? ಕಲಬುರಗಿ ಆರ್ಥಿಕತೆ ನಿಂತಿರುವುದೇ ಕೃಷಿ ಮೇಲೆ. ಆದರೆ ಕೃಷಿ ಲಾಭದಾಯಕವಾಗಿಲ್ಲ. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಬಾರಿ ಜಿಡಿಪಿಗೆ ಕೃಷಿ ಕೊಡುಗೆ ಕಮ್ಮಿಯಾಗಿದೆ. ಕಳೆದ ವರ್ಷ ಶೇ 22.8 ಇದ್ದರೆ, ಈ ಬಾರಿ ಶೇ 13ರಷ್ಟಿದೆ. ಕಲಬುರಗಿ ಜಿಲ್ಲೆತೊಗರಿ ಕಣಜವೆಂಬ ಖ್ಯಾತಿ ಪಡೆದಿದೆ. ರಾಜ್ಯದಲ್ಲೇ ಅತೀ ಹೆಚ್ಚು ತೊಗರಿ ಬೆಳೆಯುವ ಜಿಲ್ಲೆ. ಇದು ಕೃಷಿಕರ ಬದುಕು ಬದಲಿಸುತ್ತಿಲ್ಲ. ಒಂದು ಬಾರಿ ಪ್ರವಾಹ ಇನ್ನೊಂದು ಬಾರಿ ಬರ. ಇದು ರೈತರ ಬದುಕು ದುರ್ಬಲಗೊಳಿಸಿದೆ. ಈ ಬಾರಿ ಉತ್ತಮ ಇಳುವರಿ ಬಂದರೂ ಅತಿವೃಷ್ಟಿ ಮತ್ತು ಭೀಮಾ ಸೇರಿ ಪ್ರಮುಖ ನದಿಗಳಿಗೆ ಪ್ರವಾಹ ಬಂದಿದ್ದರಿಂದ ನದಿ ತೀರದ ಬೆಳೆಗಳು ನೀರಿಗೆ ಆಹುತಿಯಾಗಿವೆ. ನೀರಾವರಿ ಯೋಜನೆಗಳು ಇದ್ದರೂ ರೈತರ ಹೊಲಗಳಿಗೆ ನೀರು ಹರಿಸಿ ಅವರ ಬದುಕು ಹಸಿರುಗೊಳಿಸುತ್ತಿಲ್ಲ. ಕೈಗಾರಿಕೆಗಳ ಕೊರತೆ, ಉದ್ಯೋಗ ಅರಸಿ ಗುಳೆ ಹೋಗುವುದು, ಬೇಸಿಗೆಯಲ್ಲಿಮಾರ್ಚ್ದಿಂದ ಮೇ ತಿಂಗಳು 45 ಡಿಗ್ರಿ ಉಷ್ಣಾಂಶ ಇರುವುದರಿಂದ ಎಲ್ಲವಲಯಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಶ್ರಮ ಕಮ್ಮಿಯಾಗುತ್ತದೆ. ಉತ್ಪಾದಕತೆ ಕಮ್ಮಿಯಾಗುತ್ತದೆ. ಪ್ರವಾಸೋದ್ಯಮ ಸ್ಥಗಿತವಾಗುತ್ತದೆ. ಇದು ಆದಾಯಕ್ಕೆ ಬಲವಾದ ಹೊಡೆತ ನೀಡಿದೆ ಎನ್ನುತ್ತಾರೆ ಆರ್ಥಿಕ ತಜ್ಞರು. ಶಿಕ್ಷಣ, ಆರೋಗ್ಯ ಮತ್ತು ತಲಾ ಆದಾಯಗಳು ಮಾನವ ಅಭಿವೃದ್ಧಿ ಸೂಚ್ಯಂಕಗಳಾಗಿದ್ದು, ಇವುಗಳು ಕಳಪೆ ಇರುವುದರಿಂದ ಮಾನವ ಅಭಿವೃದ್ಧಿಯೂ ಕಡಿಮೆಯಾಗಿದೆ.