ಮುತ್ಯಾ ಪ್ರಕರಣ: ತನಿಖಾ ತಂಡ ಬದಲು

Contributed byphanumanthu14@gmail.com|Vijaya Karnataka

ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಮಹಲ್‌ ರೋಜಾ ಮಠದ ಮಲ್ಲಿಕಾರ್ಜುನ ಮುತ್ಯಾ ವಿರುದ್ಧದ ಪೋಕ್ಸೊ ಪ್ರಕರಣದ ತನಿಖಾಧಿಕಾರಿಯನ್ನು ನ್ಯಾಯಾಲಯದ ಆದೇಶದಂತೆ ಬದಲಿಸಲಾಗಿದೆ. ಪ್ರಕರಣದಲ್ಲಿನ ಲೋಪಗಳನ್ನು ಗುರುತಿಸಿ, ಮಹಿಳಾ ಅಧಿಕಾರಿ ಹಾಗೂ ಸೈಬರ್‌ ಕ್ರೈಂ ವಿಭಾಗದ ಅಧಿಕಾರಿಗಳನ್ನು ಹೊಸ ತನಿಖಾ ತಂಡಕ್ಕೆ ನೇಮಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ವಿಡಿಯೋ, ಫೋಟೋಗಳನ್ನು ತೆಗೆದುಹಾಕುವ ಕ್ರಮ ಕೈಗೊಳ್ಳಲಾಗುತ್ತಿದೆ.

mutya case appointment of new investigation team

ಕೋರ್ಟ್ ಸೂಚನೆ ಮೇರೆಗೆ ತನಿಖಾ ತಂಡ ಬದಲು ಯಾದಗಿರಿ: ಶಹಾಪುರ ತಾಲೂಕಿನ ಮಹಲ್ ರೋಜಾ ಮಠದ ಮಲ್ಲಿಕಾರ್ಜುನ ಮುತ್ಯಾ ವಿರುದ್ಧದ ಪೋಕ್ಸೊ ಪ್ರಕರಣದ ತನಿಖಾಧಿಕಾರಿಯನ್ನು ಕೋರ್ಟ್ ಸೂಚನೆ ಮೇರೆಗೆ ಬದಲಿಸಲಾಗಿದೆ. ಪ್ರಕರಣದಲ್ಲಿಆಗಿರುವ ಲೋಪಗಳನ್ನು ನ್ಯಾಯಾಲಯ ಪತ್ತೆ ಮಾಡಿ ಸೂಚನೆ ನೀಡಿದ ಹಿನ್ನಲೆಯಲ್ಲಿಮಹಿಳಾ ಅಧಿಕಾರಿಯನ್ನು ಹಾಗೂ ಸೈಬರ್ ಕ್ರೈಂ ವಿಭಾಗದ ಅಧಿಕಾರಿಯನ್ನು ತನಿಖಾ ತಂಡಕ್ಕೆ ನೇಮಿಸಲಾಗಿದೆ ಎಂದು ಎಸ್ ಪಿ ಪೃಥ್ವಿಕ್ ಶಂಕರ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿಮಲ್ಲಿಕಾರ್ಜುನ ಮುತ್ಯಾ ಪ್ರಕರಣಕ್ಕೆ ಸಂಬಂಧಿಸಿದ ವಿಡಿಯೊ ತುಣುಕುಗಳು ಹಾಗೂ ಫೋಟೊಗಳನ್ನು ತೆಗೆದು ಹಾಕಲು ಕ್ರಮ ಜರುಗಿಸಲಾಗುತ್ತಿದೆ ಎಂದು ವಿಜಯ ಕರ್ನಾಟಕಕ್ಕೆ ಮಾಹಿತಿ ನೀಡಿದ್ದಾರೆ.