ನೀರಿನಲ್ಲಿಮುಳುಗಿ ವಿದ್ಯಾರ್ಥಿ ಸಾವು ಶಹಾಪುರ (ಯಾದಗಿರಿ): ಈಜಲು ತೆರಳಿದ್ದ ಬಿಎಸ್ ಸಿ ಅಗ್ರಿ ಕಾಲೇಜು ವಿದ್ಯಾರ್ಥಿಯೊಬ್ಬ ನೀರಿನಲ್ಲಿಮುಳುಗಿ ಮೃತಪಟ್ಟ ಘಟನೆ ಭೀಮರಾಯನಗುಡಿ ಬೋರುಕಾ ಪವರ್ ಪ್ಲಾಂಟ್ ಬಳಿ ಹತ್ತಿರದ ಶಹಾಪುರ ಶಾಖಾ ಕಾಲುವೆ(ಎಸ್ ಬಿಸಿ)ಯಲ್ಲಿಗುರುವಾರ ನಡೆದಿದೆ. ಭೀಮರಾಯನಗುಡಿ ಕೃಷಿ ಮಹಾ ವಿದ್ಯಾಲಯದ ಪ್ರಥಮ ವರ್ಷದ ವಿದ್ಯಾರ್ಥಿ ಹರೀಶರಡ್ಡಿ ಕಾರಟಗಿ (20) ಮೃತ ವಿದ್ಯಾರ್ಥಿ. ವಿದ್ಯಾಲಯದ ಪ್ರಥಮ ಸೆಮಿಷ್ಟರ್ ಪರೀಕ್ಷೆ ಬರೆದು ಹರೀಶರಡ್ಡಿ, ಅಮರೇಶಗೌಡ, ದೇವರಾಜ ಮೂವರು ಸೇರಿ ಕಾಲೇಜಿನ ಹತ್ತಿರದ ಬೋರುಕಾ ಪವರ್ ಪ್ಲಾಂಟ್ ಸಮೀಪ ಈಜಾಡಲು ತೆರಳಿದ್ದಾರೆ. ಸರಿಯಾಗಿ ಈಜಲು ಬಾರದ ಹರೀಶರಡ್ಡಿ ನೀರಿನ ಮಧ್ಯದಲ್ಲಿಸಿಲುಕಿದ್ದಾನೆ. ಆಗ ಇಬ್ಬರು ವಿದ್ಯಾರ್ಥಿಗಳು ರಕ್ಷಿಸಲು ಮುಂದಾಗಿದ್ದಾರೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ನೀರಿನ ರಭಸಕ್ಕೆ ಹರೀಶರಡ್ಡಿ ಮುಂದೆ ಕೊಚ್ಚಿ ಹೋಗಿದ್ದಾನೆ ಎಂದು ಕಾಲೇಜಿನ ಪ್ರಭಾರಿ ಡೀನ್ ಪ್ರಕಾಶ ಕುಚನೂರ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಅಗ್ನಿ ಶಾಮಕದಳದ ಸಿಬ್ಬಂದಿ ಆಗಮಿಸಿ ಶವ ಶೋಧ ಕಾರ್ಯ ನಡೆಸಿದ್ದಾರೆ.ಈ ಕುರಿತು ಭೀಮರಾಯನಗುಡಿ ಠಾಣೆಯಲ್ಲಿದೂರು ದಾಖಲಾಗಿದೆ.

