ಪೆಟ್ಟಿಗೆಯಲ್ಲಿಬೆಚ್ಚಗೆ ಕುಳಿತ ಸಿಸಿ ಕ್ಯಾಮೆರಾ

Contributed bymahanteshsangam31@gmail.com|Vijaya Karnataka

ಉಕ್ಕಲಿ ಗ್ರಾಮದಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ ಕಾರ್ಯ ಅರ್ಧಕ್ಕೆ ನಿಂತಿದೆ. ಜನವರಿ ತಿಂಗಳಲ್ಲಿ ಉದ್ಘಾಟನೆಗೊಂಡಿದ್ದರೂ, ಕೇವಲ ಎರಡು ಕ್ಯಾಮೆರಾಗಳಷ್ಟೇ ಅಳವಡಿಕೆಯಾಗಿವೆ. ಮಠದ ಬಳಿ, ಬಸ್ ನಿಲ್ದಾಣ, ದಲಿತ ಬಡಾವಣೆಗಳಲ್ಲಿ ಕ್ಯಾಮೆರಾ ಅಳವಡಿಸಬೇಕಿದೆ. ಗ್ರಾಮಸ್ಥರು ಕಳ್ಳರ ಹಾವಳಿ ತಡೆಯಲು ಕ್ಯಾಮೆರಾ ಅಳವಡಿಕೆಗೆ ಒತ್ತಾಯಿಸಿದ್ದಾರೆ. ಗ್ರಾಪಂ ಎದುರಿಗಿರುವ ಕ್ಯಾಮೆರಾ ಎತ್ತರದಲ್ಲೂ ಅಳವಡಿಸಬೇಕಿದೆ. ವೈಫೈ ಬೀದಿ ದೀಪ ವ್ಯವಸ್ಥೆ ಇದ್ದರೂ, ಕ್ಯಾಮೆರಾ ಅಳವಡಿಕೆಗೆ ಆದ್ಯತೆ ನೀಡಬೇಕಾಗಿದೆ.

uninstalled cctv cameras in ukkali village a request to the gram panchayat

ಉಕ್ಕಲಿ ಗ್ರಾಮದಲ್ಲಿಅಳವಡಿಕೆ ಕಾರ್ಯ ಅಪೂರ್ಣ

ಪೆಟ್ಟಿಗೆಯಲ್ಲಿಬೆಚ್ಚಗೆ ಕುಳಿತ ಸಿಸಿ ಕ್ಯಾಮೆರಾ

ಮಹಾಂತೇಶ ಭೀ. ಸಂಗಮ, ಬಸವನಬಾಗೇವಾಡಿ

ಞaha್ಞಠಿಛಿshsa್ಞಜaಞ31ಃಜಞaಜ್ಝಿ.್ಚಟಞ

ನಗರ ಪ್ರದೇಶಗಳಂತೆ ಸುರಕ್ಷತೆ ದೃಷ್ಟಿಯಿಂದ ತಾಲೂಕಿನ ಉಕ್ಕಲಿ ಗ್ರಾಮದಲ್ಲಿಸಿಸಿ ಕ್ಯಾಮೆರಾ ಅಳವಡಿಕೆಗೆ ಗ್ರಾಮ ಪಂಚಾಯಿತಿ ಮುಂದಾಗಿದೆ. ಆದರೆ, ಅಳವಡಿಕೆ ಕಾರ್ಯ ಆಮೆಗತಿಯಲ್ಲಿಸಾಗಿದ್ದರಿಂದ ಕ್ಯಾಮೆರಾ ಪರಿಕರಗಳು ರಟ್ಟಿನ ಪೆಟ್ಟಿಗೆಗಳಲ್ಲಿಯೇ ಬೆಚ್ಚಗೆ ಕುಳಿತಿವೆ.

ತಾಲೂಕಿನ ಮನಗೂಳಿಯಲ್ಲಿನಡೆದ ಕೆನರಾ ಬ್ಯಾಂಕ್ ಕಳವು ಪ್ರಕರಣದ ನಂತರ ಪೊಲೀಸ್ ಅಧಿಕಾರಿಗಳು ಉಕ್ಕಲಿ ಗ್ರಾಮ ಪಂಚಾಯಿತಿಗೆ ಅಲ್ಲಲ್ಲಿಸಿಸಿ ಕ್ಯಾಮೆರಾ ಅಳವಡಿಸಿಕೊಳ್ಳಲು ಮನವಿ ಮಾಡಿದ್ದರು. ಹೀಗಾಗಿ ಜನವರಿ ತಿಂಗಳಲ್ಲಿಗ್ರಾಮದಲ್ಲಿ6 ಸಿಸಿ ಕ್ಯಾಮೆರಾ ಅಳವಡಿಕೆ ಹಾಗೂ ವೈಫೈ ವ್ಯವಸ್ಥೆಯ ಬೀದಿದೀಪಗಳ ಆನ್ ಆಫ್ ಉದ್ಘಾಟನಾ ಕಾರ್ಯಕ್ರಮ ಗ್ರಾಪಂ ನಡೆಸಿತ್ತು.

ಸದ್ಯ 6 ಸಿಸಿ ಕ್ಯಾಮೆರಾಗಳಲ್ಲಿಎರಡು ಮಾತ್ರ ಅಳವಡಿಸಲಾಗಿದೆ. ಇವತ್ತಿಗೂ ಅತ್ಯಂತ ಪ್ರಮುಖ ಸ್ಥಳವಾದ ಮಠದ ಬಳಿ, ಬಸ್ ನಿಲ್ದಾಣ, ದಲಿತ ಬಡಾವಣೆ ಬಳಿ ಕ್ಯಾಮೆರಾ ಅಳವಡಿಕೆಯಾಗಿಲ್ಲ. ಗ್ರಾಮದಲ್ಲಿಎಲ್ಲಕಡೆ ಸಿಸಿ ಕ್ಯಾಮೆರಾ ಅಳವಡಿಸಿದರೆ ಕಳ್ಳರ ಹಾವಳಿಯನ್ನು ತಡೆಗಟ್ಟಲು ಸಹಕಾರಿಯಾಗುತ್ತದೆ ಎಂಬುದು ಗ್ರಾಮಸ್ಥರ ಅಭಿಪ್ರಾಯ.

ಎತ್ತರದಲ್ಲಿಅಳವಡಿಸಿ:

ಗ್ರಾಪಂ ಎದುರು ಹಾಕಲಾದ ಕ್ಯಾಮೆರಾ ಕೈಗೆಟುಕುವಂತಿದೆ. ಆದ್ದರಿಂದ ಅದರ ಮುಂದೊಂದು ವಾಹನ ನಿಂತರೆ ವಾಹನ ಮಾತ್ರ ಮಾತ್ರ ಹಿಡಿಯುತ್ತದೆ. ಇಲ್ಲಿಮೊದಲಿನ ಕಂಬಕ್ಕಿಂತ ಕನಿಷ್ಠ 10 ಅಡಿ ಎತ್ತರದ ಕಂಬ ಹೂತು ಅದರ ಮೇಲೆ ಕ್ಯಾಮೆರಾ ಅಳವಡಿಸುವುದು ಸೂಕ್ತವಾಗಿದೆ. ಜತೆಗೆ ಗ್ರಾಪಂನಿಂದಲೇ ಸಾರ್ವಜನಿಕ ಸೂಚನೆ ಕೊಡಲು ಕ್ಯಾಮೆರಾ ಬುಡದಡಿ ಇರುವ ಮೈಕ್ ಬಂದ್ ಆಗಿದ್ದು, ಅದನ್ನು ಆರಂಭಿಸಬೇಕಿದೆ.

ವೈಫೈ ಅಡಿ ಬೀದಿ ದೀಪ ಆನ್ ಆಫ್ :

ಗ್ರಾಮದಲ್ಲಿವೈಫೈ ವ್ಯವಸ್ಥೆಯಡಿ ಬೀದಿ ದೀಪಗಳ ಆನ್ ಆಫ್ ವ್ಯವಸ್ಥೆಯನ್ನು ಗ್ರಾಪಂ ಕಲ್ಪಿಸಿಕೊಂಡಿದೆ. ಅಮೃತ ಗ್ರಾಮ ಪಂಚಾಯಿತಿ ಎಂಬ ಢಾಳಾದ ಫಲಕ ಹಾಕಿಕೊಂಡ ಗ್ರಾಮ ಪಂಚಾಯಿತಿ, ಪೂರ್ಣ ಪ್ರಮಾಣದಲ್ಲಿಕ್ಯಾಮೆರಾ ಅಳವಡಿಕೆಗೆ ಆದ್ಯತೆ ನೀಡಬೇಕಾಗಿದೆ.

---

ಬಸ್ ನಿಲ್ದಾಣ, ಮಠದ ಬಳಿ, ದಲಿತ ಬಡಾವಣೆ ಬಳಿ ಸಿಸಿ ಕ್ಯಾಮೆರಾ ಅಳವಡಿಸಲು ಕ್ರಮ ತೆಗೆದುಕೊಳ್ಳಲಾಗುತ್ತದೆ. ಕ್ಯಾಮೆರಾದ ಹಲವು ಪರಿಕರಗಳು ಪಂಚಾಯಿತಿಯಲ್ಲಿವೆ. ಗ್ರಾಪಂ ಎದುರಿಗಿರುವ ಸಿಸಿ ಕ್ಯಾಮೆರಾ ಕಂಬವನ್ನು ಇನ್ನೂ 10 ಅಡಿ ಎತ್ತರಕ್ಕೆ ಹಾಕುತ್ತೇವೆ.

- ಮಲ್ಲಿಕಾರ್ಜುನ ಹಿಟ್ನಳ್ಳಿ, ಪಿಡಿಒ, ಉಕ್ಕಲಿ.

12ಬಿಬಿಡಿ2 3 ಫೋಟೊ *ಎ* (ಸಿಸಿ ಕ್ಯಾಮೆರಾ)

ಬಸವನಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮ ಪಂಚಾಯಿತಿ ಎದುರಿರುವ ಸಿಸಿ ಕ್ಯಾಮೆರಾ.

*ಬಿ* ಕ್ಯಾಮೆರಾ ಸಂಬಂಧಿತ ಪರಿಕರ.

*ಸಿ* ರಟ್ಟಿನ ಪೆಟ್ಟಿಗೆಯಲ್ಲಿಬೆಚ್ಚಗೆ ಕುಳಿತ ಕ್ಯಾಮೆರಾ ಸಂಬಂಧಿತ ಪರಿಕರ.