ಮುನಿ ಸುವ್ರತ್ ಸ್ವಾಮಿ ಮೂರ್ತಿ ಪ್ರತಿಷ್ಠಾಪನೆ

Contributed bykvkampli@gmail.com|Vijaya Karnataka

ಕಂಪ್ಲಿ ಜೈನ ಮಂದಿರದಲ್ಲಿ ಭಾನುವಾರ ಮುನಿ ಸುವ್ರತ್‌ಸ್ವಾಮಿ ಮೂರ್ತಿ ಪ್ರತಿಷ್ಠಾಪನೆ ನಡೆಯಿತು. ಜೈನ ಸಂತರು ಮೂರ್ತಿ ಪ್ರತಿಷ್ಠಾಪನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಭಜನೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಎಲ್ಲ ಸಮುದಾಯದವರು ಮುನಿ ಸುವ್ರತ್‌ಸ್ವಾಮಿ ದರ್ಶನ ಪಡೆದರು. ಜೈನ ಸಮಾಜದ ಪ್ರಮುಖರು ಹಾಗೂ ಕುಟುಂಬದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ceremonial installation of the statue of muni suvrat swami divine vision in the event

ಮುನಿ ಸುವ್ರತ್ ಸ್ವಾಮಿ ಮೂರ್ತಿ ಪ್ರತಿಷ್ಠಾಪನೆ

ಕಂಪ್ಲಿ: ಸ್ಥಳೀಯ ಜೈನ ಮಂದಿರದಲ್ಲಿಮುನಿ ಸುವ್ರತ್ ಸ್ವಾಮಿ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮ ಭಾನುವಾರ ಭಕ್ತಿಯಿಂದ ನಡೆಯಿತು.

ಜೈನ ಸಂತರಾದ ಅಭಯಶೇಖರ ಸೂರೀಶ್ವರಜೀ , ಮುನಿ ಸುವ್ರತ್ ಸ್ವಾಮಿ ಮೂರ್ತಿ ಪ್ರತಿಷ್ಠಾಪನೆ ನೆರವೇರಿಸಿದರು. ಪ್ರತಿಷ್ಠಾಪನೆ ನಿಮಿತ್ತ ಭಜನೆ ಸೇರಿ ನಾನಾ ಧಾರ್ಮಿಕ, ಆಧ್ಯಾತ್ಮಿಕ ಕಾರ್ಯಕ್ರಮಗಳು, ಎಲ್ಲಸಮುದಾಯಗಳವರು ಮುನಿ ಸುವ್ರತ್ ಸ್ವಾಮಿ ದರ್ಶನ ಪಡೆದರು. ಜೈನ ಸಮಾಜದ ಪ್ರಮುಖ ಪಾರಸ್ ಮಲ್ ಹುಂಡಿಯಾ ಮತ್ತು ಕುಟುಂಬದವರು ಹುಂಡಿಯಾ ಭವನಕ್ಕೆ ಚಾಲನೆ ನೀಡಿದರು. ಜೈನ ಸಮಾಜದ ಅಧ್ಯಕ್ಷ ಜವೇರಿಲಾಲ್ ಬಾಗ್ರೇಚಾ, ಪ್ರಮುಖರಾದ ಧನರಾಜ ಹುಂಡಿಯಾ, ಚೇತನ್ ಹುಂಡಿಯಾ, ರಾಜು ಹುಂಡಿಯಾ, ದಿನೇಶ ಹುಂಡಿಯಾ, ಶಾಂತಿಲಾಲ್ ಬಾಲಾರ್ , ಶಾಂತಿಲಾಲ್ ಸಿಂಘಿಘ್ವಿ, ಫತೇಕುಮಾರ್ ಭಾಫ್ಣ ಸೇರಿ ಜೈನ ಸಮುದಾಯದವರು ಪಾಲ್ಗೊಂಡಿದ್ದರು.

ಪೊ.ಶೀ.16ಕೆಎಂಪಿ4;-ಕಂಪ್ಲಿಜೈನ ಮಂದಿರದಲ್ಲಿಮುನಿ ಸುವ್ರತ್ ಸ್ವಾಮಿ ಮೂರ್ತಿ ಪ್ರತಿಷ್ಠಾಪನೆ ಮಾಡಿರುವುದು.