ವಿಕ ಸುದ್ದಿಲೋಕ ಕುಂಬಳೆ
ಸ್ಕೂಟರ್ ಚಲಾಯಿಸುತ್ತಿದ್ದ ವೇಳೆ ಹೃದಯಾಘಾತ ಸಂಭವಿಸಿ ಬಂಬ್ರಾಣ ನಿವಾಸಿ ಎಳಾಪ ಅಶ್ರಫ್ (58) ಎಂಬವರು ಮೃತಪಟ್ಟಿದ್ದಾರೆ. ತಲಪಾಡಿ ಟೋಲ್ ಗೇಟ್ ರಾಷ್ಟ್ರೀಯ ಹೆದ್ದಾರಿ ಸಮೀಪ ಘಟನೆ ನಡದಿದೆ. ತಲಪಾಡಿ ಟೋಲ್ ಗೇಟ್ ಫೂಟ್ ಪಾತ್ ಬಳಿ ಸ್ಕೂಟರ್ ಬಿದ್ದಿದ್ದು, ಅಶ್ರಫ್ ಮಲಗಿದ ಸ್ಥಿತಿಯಲ್ಲಿಕಂಡಿಬಂದಿದ್ದು ಕೂಡಲೇ ಸ್ಥಳೀಯರು ಮಂಗಳೂರಿನ ಆಸ್ಪತ್ರೆಗೆ ಸಾಗಿಸಿದರೂ ಜೀವ ರಕ್ಷಿಸಲು ಸಾಧ್ಯವಾಗಲಿಲ್ಲ. ಅವರಿಗೆ ಪತ್ನಿ, ಇಬ್ಬರು ಪುತ್ರರು ಹಾಗೂ ಒಬ್ಬ ಪುತ್ರಿ ಇದ್ದಾರೆ.
16ಕೆಯುಅಶ್ರಫ್

