ವಾತ್ಸಲ್ಯ ಹಸ್ತಾಂತರ
ಮುಧೋಳ: ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ತಾಲೂಕಿನ ಉತ್ತೂರ ಗ್ರಾಮದಲ್ಲಿವೃದ್ಧೆ ಹಣಮವ್ವಾ ಮಳಲಿ ಅವರಿಗೆ ವಾತ್ಸಲ್ಯ ಯೋಜನೆಯಡಿ ಮನೆ ಹಸ್ತಾಂತರ ಮಾಡಲಾಯಿತು.
ಸಂಸ್ಥೆಯ ಜಿಲ್ಲಾನಿರ್ದೇಶಕ ಚನ್ನಕೇಶವ ಮಾತನಾಡಿ,‘‘ ಬಡವರು ಮತ್ತು ನಿರ್ಗತಿಕ ಕುಟುಂಬಗಳಿಗೆ ವಾತ್ಸಲ್ಯ ಯೋಜನೆಯಡಿ ಮನೆ ನಿರ್ಮಿಸಿಕೊಡಲಾಗುತ್ತಿದೆ. ಹೇಮಾವತಿ ಅಮ್ಮನವರು ಬಡವರ ಪರ ಕಾಳಜಿಯಿಂದ ಇಂತಹ ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ,’’ ಎಂದರು.
ಸದಾನಂದ ತಿಮ್ಮಾಪೂರ, ಗಜಾನನ ಪರೀಟ್ , ರೈತ ಮುಖಂಡ ಹಣಮಂತ ಗುಡೆಪ್ಪನ್ನವರ, ಗಂಗಾಧರ ಗೋಲಬಾವಿ, ಕಾಮಣ್ಣ ಕೊಚ್ಚಿ, ಪುಂಡಲಿಕ ನಿಂಬಾಳಕರ, ಒಕ್ಕೂಟದ ಅಧ್ಯಕ್ಷೆ ಚಂದ್ರಕಲಾ ಮಾಯಪ್ಪನ್ನವರ, ಜಾಗದ ದಾನಿ ಲಕ್ಷತ್ರ್ಮಣ ಇಮ್ಮಡಿ, ಯೋಜನಾಧಿಕಾರಿ ಎಸ್ .ರಾಜು, ಸುವರ್ಣಾ ನಂದಿಕೊಲಮಠ ಇತರರಿದ್ದರು.
ಫೋಟೊ 17 ಎಂಡಿಎಲ್ 1
ಮುಧೋಳ ತಾಲೂಕಿನ ಉತ್ತೂರಿನಲ್ಲಿವೃದ್ಧೆಗೆ ಮನೆ ಹಸ್ತಾಂತರಿಸಿದ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ನಿರ್ದೇಶಕ ಚನ್ನಕೇಶವ.

