ಶೃಂಗೇರಿ: ಸಸ್ಯಶಾಸ್ತ್ರದ ವಿದ್ಯಾರ್ಥಿಗಳು ಸಸ್ಯ ವರ್ಗೀಕರಣ ಮಾಡಿ ಗುರುತಿಸುವ ಸಾಮಾರ್ಥ್ಯ ಬೆಳಸಿಕೊಳ್ಳಬೇಕು ಎಂದು ಶ್ರೀ ಜೆಸಿಬಿಎಂ ಕಾಲೇಜು ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಕುಮಾರಸ್ವಾಮಿ ಉಡುಪ ಹೇಳಿದರು. ನೆಮ್ಮಾರ್ ಗ್ರಾಮ ಪಂಚಾಯಿತಿಯ ಹೊಸದೇವರಹಡ್ಲಿನಲ್ಲಿಅಜಸ್ರ ಚಾರಿಟ ಬಲ್ ಟ್ರಸ್ಟ್ ಮಂಗಳೂರು ವಿಶ್ವ ವಿದ್ಯಾ ನಿಲಯದ ಎಂಎಸ್ಸಿ ವಿದ್ಯಾರ್ಥಿಗಳಿಗೆ ಸಸ್ಯಗಳನ್ನು ಗುರುತಿಸುವಿಕೆ ಕಾರ್ಯಾ ಗಾರದಲ್ಲಿಮಾತನಾಡಿದರು. ವರ್ಗೀಕರಣವು ಎಲ್ಲಜೀವ ವಿಜ್ಞಾನಗಳ ಮೂಲವಾಗಿದೆ. ಸಸ್ಯಗಳನ್ನು ಸರಿಯಾಗಿ ಗುರುತಿಸುವುದು ಮತ್ತು ದಾಖಲಿ ಸುವುದು ಸಂರಕ್ಷಣಾ ಹಾಗೂ ಪರಿಸರ ಅಧ್ಯಯನಕ್ಕೆ ಅಗತ್ಯವಾಗಿದೆ ಎಂದರು. ಡಾ.ಅಭಿಜಿತ್ ಮಾತನಾಡಿ, ಕಾರ್ಯಾಗಾರದಲ್ಲಿ53 ಸಸ್ಯ ಪ್ರಭೇದಗಳ ಅಧ್ಯಯನ ಮಾಡಿರುವುದು ಕೌಶಲ ಮತ್ತು ಜೀವ ವೈವಿಧ್ಯದ ಮೇಲಿನ ಅಂಶವನ್ನು ಬೆಳೆಸಲು ಸಹಾಯಕವಾಗುತ್ತದೆ. ಪಶ್ಚಿಮ ಘಟ್ಟದಲ್ಲಿಸಾವಿರಾರು ಬಗೆಯ ಸಸ್ಯ ಪ್ರಭೇದವಿದ್ದು, ಇಲ್ಲಿನ ಮೂಲ ನಿವಾಸಿ ಗಳಿಗೆ ಸಸ್ಯಗಳ ಗುರುತು ಇರುತ್ತದೆ ಎಂದರು. ಕಾರ್ಯಾಗಾರದಲ್ಲಿರಾಮಕೃಷ್ಣ ಮNೕಬೈಲು, ಟ್ರಸ್ಟ್ ಉಪಾಧ್ಯಕ್ಷ ಕೇಶವಮೂರ್ತಿ, ವಿಶ್ವಜಿತ್ , ಶಶಾಂಕ್ , ಡಾ.ಕೃಷ್ಣಕುಲಕರ್ಣಿ, ಕಿರಣ್ , ಶ್ರೀನಿಧಿ ಹಾಗೂ ಕೀರ್ತನ್ ಇದ್ದರು.

