ಅವಕಾಶ ಯಾರೂ ಕೊಡುವುದಿಲ್ಲ, ಕಿತ್ತುಕೊಳ್ಳಿ

Contributed byrudraiah4084@gmail.com|Vijaya Karnataka

ಚಿಕ್ಕಮಗಳೂರಿನಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಕಾನೂನು ಅರಿವು ಕಾರ್ಯಕ್ರಮ ನಡೆಯಿತು. ಹಿರಿಯ ಸಿವಿಲ್ ನ್ಯಾಯಾಧೀಶ ವಿ. ಹನುಮಂತಪ್ಪ ಮಾತನಾಡಿ, ಅವಕಾಶವನ್ನು ಯಾರೂ ನೀಡುವುದಿಲ್ಲ, ಮಹಿಳೆಯರು ಅದನ್ನು ಕಿತ್ತುಕೊಳ್ಳಬೇಕು ಎಂದರು. ದುಡಿಯುವ ಮಹಿಳೆಯನ್ನು ಅಬಲೆಯಾಗಿಸಬಾರದು ಎಂದು ಅವರು ಹೇಳಿದರು. ಮಹಿಳೆಯರ ಸಾಧನೆ ಗಮನಾರ್ಹವಾಗಿದ್ದು, ಶೇ.33 ಮೀಸಲಾತಿಯನ್ನು ಬಳಸಿಕೊಳ್ಳಬೇಕು ಎಂದು ತಿಳಿಸಿದರು. ವಿವಿಧ ಸ್ಪರ್ಧೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

women must seize their opportunities legal awareness program

ವಿಕ ಸುದ್ದಿಲೋಕ ಚಿಕ್ಕಮಗಳೂರು ಅವಕಾಶ ಯಾರೂ ಕೊಡುವುದಿಲ್ಲ, ಮಹಿಳೆಯರೆ ಕಿತ್ತುಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾಕಾನೂನು ಪ್ರಾಧಿಕಾರದ ಸದಸ್ಯ ಕಾರ ್ಯದರ್ಶಿ ವಿ.ಹನುಮಂತಪ್ಪ ಹೇಳಿದರು. ನಗರದ ಕಸ್ತೂರಿ ಬಾ ಸದನದಲ್ಲಿಜಿಲ್ಲಾಡಳಿತ, ಜಿಲ್ಲಾಪಂಚಾಯಿತಿ, ಜಿಲ್ಲಾಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಹಾಗೂ ಕಸ್ತೂರಿ ಬಾ ಸದನದ ಆಶ್ರಯದಲ್ಲಿಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಕಾನೂನು ಅರಿವು ಕಾರ ್ಯಕ್ರಮ ಉದ್ಘಾಟಿಸಿ ಮಾತನಾಡಿ, ದುಡಿಯುವ ಶ್ರಮಜೀವಿ ಮಹಿಳೆಯನ್ನು ಅಬಲೆಯಾಗಿಸಬಾರದು ಎಂದರು. ಹೆಣ್ಣನ್ನು ನೆಪಮಾತ್ರಕ್ಕೆ ದೇವತೆ ಎಂದು ದೇವದಾಸಿಯಾಗಿಸಿದ ಸಮಾಜ ನಮ್ಮದು. ಬಾಲ್ಯದಲ್ಲಿತಂದೆ, ತಾರುಣ್ಯದಲ್ಲಿಗಂಡ, ವಯಸ್ಕಳಾದ ಮೇಲೆ ಮಗನ ಆಶ್ರಯದಲ್ಲಿಹೆಣ್ಣು ಜೀವಸಬೇಕಾಗಿತ್ತು. ವಿದ್ಯೆ ಕಲಿಯುವಂತಿಲ್ಲಎಂಬ ಕಾಲವಿತ್ತು. ಪುರುಷರಿಗೆ ಸಮಾನವಾದ ಕೆಲಸ ಕಾರ ್ಯಗಳನ್ನು ನಿರ್ವಹಿಸಿದರೂ ಅವರಷ್ಟು ವೇತನ ಸೌಲಭ್ಯ ಸಿಗುತ್ತಿರಲಿಲ್ಲ. 1909ರಲ್ಲಿಅಮೆರಿಕದ ಗಿರಣಿಯಲ್ಲಿಕಾರ ್ಯನಿರ್ವಹಿಸುತ್ತಿದ್ದ ಮಹಿಳೆರಿಗೆ ಸಮಾನ ವೇತನ, ಸೌಲಭ್ಯ ಕೊಡಬೇಕೆಂಬ ಹಕ್ಕೊತ್ತಾಯವನ್ನು ಕ್ಲಾರಾಜೆಟ್ ಮೊಟ್ಟಮೊದಲ ಬಾರಿಗೆ ಮಂಡಿಸುತ್ತಾಳೆ. ಅಲ್ಲಿಂದ ಅನೇಕ ಹೋರಾಟಗಳು ಜಗತ್ತಿನ ವಿವಿಧೆಡೆ ನಡೆದಿವೆ. ಸುಧಾರಣೆಯೂ ಕಂಡಿದೆ ಎಂದರು. ವೀರವನಿತೆ ಓಬ್ಬವ್ವ, ಚನ್ನಮ್ಮ, ಸಾವಿತ್ರಿಬಾಯಿ ಫುಲೆ, ಅತಿಹೆಚ್ಚು ಸಮಯ ರಾಜ್ಯಭಾರ ಮಾಡಿದ ಇಂದಿರಾಗಾಂಧಿ ಇಂದಿನ ರಾಷ್ಟ್ರಪತಿಯವರೆಗೆ ಮಹಿಳೆಯರ ಸಾಧನೆ ಗಮನಾರ್ಹ, ಆದರ್ಶಪ್ರಾಯವಾಗಿದೆ. ಶೇ.33 ಮಹಿಳಾ ಮೀಸಲಾತಿ ಬಳಸಿಕೊಳ್ಳಬೇಕು. ಮಹಿಳೆಯರಿಗೆ ನೆರವು ನೀಡಲು, ಅರಿವು ಮೂಡಿಸಲು

ಇಂದು ಸಾಕಷ್ಟು ಪ್ರಯತ್ನಗಳು ನಡೆದಿವೆ

ಎಂದು ವಿವರಿಸಿದರು. ಕಸ್ತೂರಿಬಾ ಸದನದ ನಿರ್ದೇಶಕಿ ಜಯಶ್ರೀ ನಂಜರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಡಿ.ಸಂತೋಷ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿ.ರಂಗನಾಥ ಮಾಹಿತಿ ನೀಡಿದರು. ಕಸ್ತೂರಿ ಬಾ ಸದನದ ಉಪಾಧ್ಯಕ್ಷೆ ಯಶೋಧ ಲಕ್ಷತ್ರ್ಮಣಗೌಡ ಸ್ವಾಗತಿಸಿ, ಸದಸ್ಯರಾದ ಅರ್ಚನಾ ವಿಕ್ರಮ್ ವಂದಿಸಿದರು. ವಕೀಲರಾದ ಆರುಂಧತಿ ನಿರೂಪಿಸಿದರು. ರಾಧಾಮಣಿ ಮತ್ತು ಮಂಜುಳಾ ಪ್ರಾರ್ಥಿಸಿದರು. ವಾರ್ಡನ್ ಗೀತಾ, ಜ್ಯೋತಿ, ಕೃಷ್ಣಮೂರ್ತಿ ಉಪಸ್ಥಿತರಿದ್ದರು. ಸ್ವಾಧಾರಶಕ್ತಿ ಸದನ, ಬಾಲಾಸೇವಿಕ ಮಕ್ಕಳು ಮತ್ತು ಕಸ್ತೂರಿಬಾ ಸದನದ ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ ಹಾಗೂ ಸಿಬ್ಬಂದಿಗೆ ಏರ್ಪಡಿಸಿದ್ದ ವಿವಿಧ ಆಟೋಟಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಾಂಸ್ಕೃತಿಕ ಕಾರ ್ಯಕ್ರಮಗಳು ಆಕರ್ಷಕವಾಗಿದ್ದವು.