ಲಕ್ಷ್ಮಣ್ ಕಾಲಂ

Contributed byShrividya Rao|Vijaya Karnataka

ಕೆಲವೊಮ್ಮೆ ಸಮಯವು ಬಹಳ ವೇಗವಾಗಿ ಕಳೆಯುತ್ತದೆ. ಆದರೆ ಕಷ್ಟದಲ್ಲಿದ್ದಾಗ, ಭಯಗೊಂಡಾಗ ಸಮಯವು ನಿಧಾನವಾಗಿ ಸಾಗಿದಂತೆ ಭಾಸವಾಗುತ್ತದೆ. ಆತ್ಮಹತ್ಯೆಯ ಆಲೋಚನೆಗಳು, ಖಿನ್ನತೆ, ಆತಂಕಗಳಲ್ಲಿ ಇದು ಹೆಚ್ಚು ಕಂಡುಬರುತ್ತದೆ. ಮೆದುಳು ನಮ್ಮನ್ನು ರಕ್ಷಿಸಲು ಅಡ್ರಿನಾಲಿನ್ ಸ್ರವಿಸಿ, ನಮ್ಮ ಇಂದ್ರಿಯಗಳನ್ನು ಎಚ್ಚರಿಸುತ್ತದೆ. ಈ ಸಂದರ್ಭದಲ್ಲಿ ಸಮಯವು ವಿಸ್ತರಿಸಿದಂತೆ ಅನಿಸುತ್ತದೆ. ಈ ಸವಾಲನ್ನು ಎದುರಿಸಲು ಕುಟುಂಬ, ಸಮಾಜದ ಬೆಂಬಲ ಮುಖ್ಯ. ಈ ಸಮಯವೂ ಕಳೆದುಹೋಗಲಿದೆ ಎಂಬ ಭರವಸೆ ಮೂಡಬೇಕು. ತಜ್ಞರ ಸಲಹೆ ಪಡೆಯುವುದು ಅಗತ್ಯ.

timeless reflections profound meaning in moments of depression and anxiety
ಈ ಸಮಯವೂ ಸರಿದು ಹೋಗಲಿದೆ: ಖಿನ್ನತೆ ಮತ್ತು ಆತಂಕದಲ್ಲಿ ಸಮಯ ನಿಧಾನವಾಗುವ ಅನುಭವ, ಅದರ ಹಿಂದಿನ ವೈಜ್ಞಾನಿಕ ಕಾರಣ ಮತ್ತು ಪರಿಹಾರದ ಬಗ್ಗೆ ಈ ಲೇಖನ ವಿವರಿಸುತ್ತದೆ. ಸಂತೋಷದ ಕ್ಷಣಗಳು ಕ್ಷಣಾರ್ಧದಲ್ಲಿ ಕಳೆದುಹೋದಂತೆ ಅನಿಸಿದರೆ, ಕಷ್ಟದ ಸಮಯದಲ್ಲಿ ಪ್ರತಿ ಕ್ಷಣವೂ ಯುಗಗಳಂತೆ ಭಾಸವಾಗುತ್ತದೆ. ಆತ್ಮಹತ್ಯೆಯ ಆಲೋಚನೆ ಅಥವಾ ತೀವ್ರ ಖಿನ್ನತೆಯಿಂದ ಬಳಲುತ್ತಿರುವ ರೋಗಿಗಳಿಗೆ ಇದು ಹೆಚ್ಚು ಅನುಭವಕ್ಕೆ ಬರುತ್ತದೆ. ಈ ಸ್ಥಿತಿಯನ್ನು 'Psy್ಚhಟ್ಝಟಜಜ್ಚಿa್ಝ Tಜಿಞಛಿ ಈಜ್ಝಿaಠಿಜಿಟ್ಞ' ಎಂದು ಕರೆಯಲಾಗುತ್ತದೆ. ಇದು ಮೆದುಳಿನ ಅತಿ ಜಾಗ್ರತಾವಸ್ಥೆಯ ಪರಿಣಾಮವಾಗಿದ್ದು, ಜೀವ ಉಳಿಸಿಕೊಳ್ಳುವ ಪ್ರಯತ್ನದಲ್ಲಿ ದೇಹವನ್ನು ಸನ್ನದ್ಧಗೊಳಿಸುತ್ತದೆ. ಈ ಸವಾಲನ್ನು ಎದುರಿಸಲು ಕುಟುಂಬ, ಸಮಾಜದ ಬೆಂಬಲ ಮತ್ತು ವೈದ್ಯಕೀಯ ಸಹಾಯ ಅತ್ಯಗತ್ಯ.

ಸಂತೋಷದ ಕ್ಷಣಗಳಲ್ಲಿ, ಉದಾಹರಣೆಗೆ ಪ್ರೇಮಿಗಳ ಭೇಟಿ, ಸ್ನೇಹಿತರೊಂದಿಗೆ ಬೆರೆಯುವಾಗ, ಹಬ್ಬ-ಹರಿದಿನಗಳಲ್ಲಿ, ಸಮಯ ಎಷ್ಟು ಬೇಗ ಕಳೆದುಹೋಗುತ್ತದೆ ಎಂದು ನಮಗೆ ಗೊತ್ತೇ ಆಗುವುದಿಲ್ಲ. ಯಾರೋ ಗಡಿಯಾರದ ಮುಳ್ಳನ್ನು ತಳ್ಳಿದಂತೆ ಭಾಸವಾಗುತ್ತದೆ. ಆದರೆ, ಇದಕ್ಕೆ ವ್ಯತಿರಿಕ್ತವಾಗಿ, ನಾವು ಕಷ್ಟದಲ್ಲಿದ್ದಾಗ, ಭಯಗೊಂಡಾಗ, ಸಮಯ ಕಳೆಯುವುದೇ ದುಸ್ತರವಾಗುತ್ತದೆ. ಆತ್ಮಹತ್ಯೆಯ ಆಲೋಚನೆಗಳು ಅಥವಾ ತೀವ್ರ ಖಿನ್ನತೆಯಿಂದ ಬಳಲುತ್ತಿರುವ ವ್ಯಕ್ತಿಗಳಿಗೆ, ಪ್ರತಿ ಕ್ಷಣವೂ ಒಂದು ಯುಗವಾಗಿ ಕಾಣಿಸುತ್ತದೆ. ಹೊರಗಿನವರಿಗೆ ಕೇವಲ ಐದು ನಿಮಿಷಗಳಾಗಿದ್ದರೂ, ಆ ರೋಗಿಗೆ ಆ ನೋವು ಅನಂತ ಕಾಲದಂತೆ ಭಾಸವಾಗುತ್ತದೆ. ಇದನ್ನು 'Psy್ಚhಟ್ಝಟಜಜ್ಚಿa್ಝ Tಜಿಞಛಿ ಈಜ್ಝಿaಠಿಜಿಟ್ಞ' ಎನ್ನುತ್ತಾರೆ.
ಈ 'ಟೈಮ್‌ ಡೈಲೇಷನ್‌'ನಿಂದಾಗಿ, ತಮ್ಮ ಕಷ್ಟಗಳು ಎಂದಿಗೂ ಮುಗಿಯುವುದಿಲ್ಲ ಮತ್ತು ಭವಿಷ್ಯದಲ್ಲಿ ಯಾವುದೇ ಬದಲಾವಣೆ ಸಾಧ್ಯವಿಲ್ಲ ಎಂಬ ತಪ್ಪು ಕಲ್ಪನೆ ಮೂಡುತ್ತದೆ. ರೋಗಿಯ ಗಮನ ಕೇವಲ ಪ್ರಸ್ತುತ ಕ್ಷಣದ ನೋವಿನ ಮೇಲೆ ಕೇಂದ್ರೀಕೃತವಾಗುತ್ತದೆ. ಇದರಿಂದಾಗಿ ಅವರಿಗೆ ಸಮಯದ ವಿಶಾಲತೆ ಅಥವಾ ಮುಂದಿನ ದಿನಗಳ ಸಕಾರಾತ್ಮಕತೆ ಕಾಣಿಸುವುದಿಲ್ಲ. ಆತಂಕ , ಖಿನ್ನತೆಗೊಳಗಾದವರಲ್ಲಿ ಆತ್ಮಹತ್ಯೆಯಂತಹ ಆಲೋಚನೆಗಳ ಹಿಂದೆ ಈ 'ಟೈಮ್‌ ಡೈಲೇಷನ್‌' ಪ್ರಮುಖ ಪಾತ್ರ ವಹಿಸುತ್ತದೆ.

ಖಿನ್ನತೆ ಮತ್ತು ಆತಂಕದ ಈ ಕ್ಷಣಗಳ ಅಪಾಯವನ್ನು ಮೆದುಳು ತಕ್ಷಣ ಗ್ರಹಿಸಿ, ವ್ಯಕ್ತಿಯನ್ನು ಬದುಕಿ ಉಳಿಸಲು ಹರಸಾಹಸ ಪಡುತ್ತದೆ. ವಿಕಾಸದ ಮುಖ್ಯ ಉದ್ದೇಶವೇ ಜೀವವನ್ನು ಉಳಿಸುವುದು ಮತ್ತು ಸಂತತಿಯನ್ನು ಮುಂದುವರಿಸುವುದು. ಹೀಗಾಗಿ, ಮೆದುಳು ತಕ್ಷಣ 'ಸರ್ವೈವಲ್‌ ಮೋಡ್‌'ಗೆ ಬದಲಾಗಿ, ಅಮಿಗ್ಡಾಲಾವನ್ನು ಎಚ್ಚರಿಸುತ್ತದೆ. ದೇಹ ಹೆಚ್ಚು ಅಡ್ರಿನಾಲಿನ್ ಸ್ರವಿಸಿ, ಇಂದ್ರಿಯಗಳನ್ನು ಕಟ್ಟೆಚ್ಚರದಲ್ಲಿರಿಸುತ್ತದೆ. ವ್ಯಕ್ತಿಯ ಏಕಾಗ್ರತೆ ಸೂಜಿ ಮೊನೆಯಷ್ಟು ತೀಕ್ಷ್ಣವಾಗುತ್ತದೆ. ಚುರುಕುಗೊಂಡ ಮೆದುಳು ಸಾಮಾನ್ಯಕ್ಕಿಂತ ಹೆಚ್ಚು ಮಾಹಿತಿಯನ್ನು ಸಂಗ್ರಹಿಸಿ, ಸಂಭಾವ್ಯ ಅಪಾಯಗಳನ್ನು ವಿಶ್ಲೇಷಿಸಲು ಪ್ರಾರಂಭಿಸುತ್ತದೆ. ಈ ಸಮಯದಲ್ಲಿ, ಸಮಯ ನಿಜಕ್ಕೂ ವಿಸ್ತಾರವಾದಂತೆ ಭಾಸವಾಗುತ್ತದೆ. ಆದರೆ, ಇದು ನಿಜವಾದ ವಿಸ್ತರಣೆಯಲ್ಲ. ಬದಲಿಗೆ, ಮೆದುಳು ಅತಿ ಜಾಗ್ರತಾವಸ್ಥೆಗೆ ತಲುಪಿ, ಅಪಾಯಗಳನ್ನು ಎದುರಿಸಲು ವಿವೇಕ ಮತ್ತು ದೈಹಿಕ ಬಲ ನೀಡಿ ದೇಹವನ್ನು ಸಜ್ಜುಗೊಳಿಸುತ್ತಿರುತ್ತದೆ.

ಈ ವಿಸ್ತರಣಾ ಸಮಯವನ್ನು ಗೆಲ್ಲುವುದು ಕೆಲ ಮಾನಸಿಕ ರೋಗಿಗಳಿಗೆ ದೊಡ್ಡ ಸವಾಲು. ಪ್ರತಿಯೊಬ್ಬರ ದೇಹ ತನ್ನ ಕೈಲಾದ ಮಟ್ಟಿಗೆ ಬದುಕಿ ಉಳಿಯಲು ಪ್ರಯತ್ನಿಸುತ್ತಿದ್ದರೂ, ಈ ಸಮಯದಲ್ಲಿ ವ್ಯಕ್ತಿಯ ಕುಟುಂಬ, ಸಮಾಜದ ಸಾಂತ್ವನ ಮತ್ತು ಬೆಂಬಲ ಅತ್ಯಂತ ಅವಶ್ಯಕ. ದುರಂತವೆಂದರೆ, ಮನುಷ್ಯನ ಈ ಒಳ ಹೋರಾಟವನ್ನು ಅವಮಾನ, ಹಿಂಜರಿಕೆ, ಕೀಳರಿಮೆಯ ಕಾರಣಗಳಿಂದ ಕೆಲವರು ಹೇಳಿಕೊಳ್ಳುವುದೇ ಇಲ್ಲ.

'ಈ ಸಮಯವೂ ಸರಿದು ಹೋಗಲಿದೆ' ಎಂಬ ಭರವಸೆ ಸ್ವತಃ ವ್ಯಕ್ತಿಗೆ ಬರಬೇಕು. ತನ್ನೊಳಗಿನ ಆತಂಕಗಳನ್ನು ಮುಕ್ತವಾಗಿ ಹಂಚಿಕೊಳ್ಳಬೇಕು. ಅಗತ್ಯವೆನಿಸಿದರೆ, ಆಪ್ತ ಸಮಾಲೋಚನೆ ಮತ್ತು ಮಾನಸಿಕ ತಜ್ಞರ ಭೇಟಿ ನೀಡಬೇಕು. ಇದು ಕೇವಲ ವೈಯಕ್ತಿಕ ಹೋರಾಟವಲ್ಲ, ಬದಲಿಗೆ ಕುಟುಂಬ ಮತ್ತು ಸಮಾಜದ ಸಹಕಾರ ಅತ್ಯಗತ್ಯ.