ಯಾತ್ರಾರ್ಥಿಗಳಿಗೆ ಡಿಧಿಬಿಧಿಟಿ ಪಾವತಿ ರಾಜ್ಯದಿಂದ ಶ್ರೀಮಾತಾ ವೈಷ್ಣೋದೇವಿ ದೇವಾಲಯಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳಿಗೆ ಸರಕಾರದಿಂದ ತಲಾ 5 ಸಾವಿರ ರೂ. ಸಹಾಯಧನ ವಿತರಿಸಲಾಗುವುದು ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ಸಿ.ಎನ್ ಮಂಜೇಗೌಡ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘‘ ಯಾತ್ರಾರ್ಥಿಗಳು ದೇವಾಲಯದ 1 ಕಿ.ಮೀ ವ್ಯಾಪ್ತಿಯಲ್ಲಿಫೋಟೊ ತೆಗೆದು ಹಾಕಿದರೆ ಸಹಾಯಧನದ ಮೊತ್ತವನ್ನು ನೇರವಾಗಿ ಡಿಬಿಟಿ ಮಾಧಿಡುವ ಬಗ್ಗೆ ಮಾರ್ಗಸೂಚಿ ಹೊರಡಿಸಲಾಗುವುದು,’’ ಎಂದರು. ಸಹಾಯಧನ ನೀಡುವ ಸಂಬಂಧ 2024ರ ನ.13ರಂದು ನಡೆದ ರಾಜ್ಯ ಧಾರ್ಮಿಕ ಪರಿಷತ್ ಸಭೆಯಲ್ಲಿಕೈಧಿಗೊಂಡ ತೀರ್ಮಾನವನ್ನು ಬಜೆಟ್ ನಲ್ಲಿಘೋಷಿಸಲಾಗಿದೆ. ಕೈಲಾಸ ಮಾನಸ ಸರೋವರ ಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳಿಗೆ ತಲಾ 30 ಸಾವಿರ, ಚಾರ್ ಧಾಮ್ ಯಾತ್ರೆ ಕೈಗೊಂಡ ಯಾತ್ರಾರ್ಥಿಗಳಿಗೆ ತಲಾ 20 ಸಾವಿರ ಹಾಗೂ ಕಾಶಿ ಯಾತ್ರೆ ಕೈಗೊಂಡ ಯಾತ್ರಾರ್ಥಿಗಳಿಗೆ ತಲಾ 5 ಸಾವಿರ ರೂ. ಸಹಾಯಧನವನ್ನು ಸರಕಾರದಿಂದ ಈಗಾಗಲೇ ನೀಡಲಾಗುತ್ತಿದೆ. 2025-26ನೇ ಸಾಲಿನಲ್ಲಿ6,727 ಫಲಾನುಭವಿಗಳು ಸಹಾಯಧನ ಪಡೆದುಕೊಂಡಿದ್ದಾರೆ,’’ ಎಂದು ತಿಳಿಸಿದರು. 2.16 ಲಕ್ಷ ಪೋಡಿಗೆ ಆದೇಶ ರಾಜ್ಯದಲ್ಲಿಸದ್ಯ 5.70 ಲಕ್ಷ ಪೋಡಿ ಅರ್ಜಿಗಳು ಬಾಕಿ ಇದ್ದು, ಅವುಗಳಲ್ಲಿಈ ವರ್ಷ 2.16 ಲಕ್ಷ ಪೋಡಿಗೆ ಆದೇಶ ನೀಡಲಾಗಿದೆ. ಅವುಗಳನ್ನು ಡಿಸೆಂಬರ್ ವೇಳೆಗೆ ಪೂರ್ಣಗೊಳಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.ಪರಿಷತ್ತಿನ ಬಿಜೆಪಿಯ ಪ್ರತಾಪ್ ಸಿಂಹ ನಾಯಕ್ ಪ್ರಶ್ನೆಗೆ ಉತ್ತರಿಸಿ,‘ಧಿ‘ಪೋಡಿ ಪ್ರಕರಣಗಳನ್ನು ಆದಷ್ಟು ಶೀಘ್ರ ವಿಲೇವಾರಿ ಮಾಡಲು ರೋವರ್ ನಂತಹ ಆಧುನಿಕ ಯಂತ್ರೋಪಕರಣ ಬಳಸಿಕೊಳ್ಳಲಾ ಗುತ್ತಿದೆ. ಪೋಡಿ ಅಭಿಯಾನ ಕೈಗೊಂಡಿದ್ದು, ಅದರಡಿ ಅರ್ಜಿ ಸಲ್ಲಿಸದಿದ್ದರೂ ಸಹ ಸರಕಾರವೇ ಭೂಮಿಗಳನ್ನು ಗುರುತಿಸಿ ಪೋಡಿ ಮಾಡಿಕೊಡುತ್ತಿದೆ,’ಧಿ’ ಎಂದರು. ‘ಧಿ‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ60, 943 ಪೋಡಿ ಅರ್ಜಿಗಳಿಗೆ ತಹಸೀಲ್ದಾರರು ಆದೇಶ ಹೊರಡಿಸಿದ್ದು, 2026 ಫೆಬ್ರವರಿ ಅಂತ್ಯಕ್ಕೆ 37,604 ಪೋಡಿ ಅರ್ಜಿಗಳ ಅಳತೆ ಪೂರ್ಣಗೊಂಡಿದೆ,’ಧಿ’ ಎಂದು ವಿವರಿಸಿದರು. 9 ಸಾವಿರ ಹೊಸ ಬಸ್ ಖರೀದಿ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳಿಗಾಗಿ 9 ಸಾವಿರ ಬಸ್ ಗಳನ್ನು ಖರೀದಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ಪರಿಷತ್ತಿನಲ್ಲಿಸದಸ್ಯೆ ಭಾರತಿ ಶೆಟ್ಟಿ ಮತ್ತು ಗೋವಿಂದರಾಜು ಪ್ರಶ್ನೆಗೆ ಉತ್ತರಿಸಿ,‘‘2019ರಿಂದ 2023ರವರೆಗೆ ಒಂದೂ ಬಸ್ ಖರೀದಿ ಮಾಡಿರಲಿಲ್ಲ. ಆನಂತರ ನಾಲ್ಕು ವರ್ಷಗಳ ಅವಧಿಯಲ್ಲಿನಾಲ್ಕು ನಿಗಮಗಳಿಂದ 6082 ಬಸ್ ಗಳನ್ನು ಖರೀದಿಸುವ ಪ್ರಕ್ರಿಯೆ ನಡೆದಿದೆ, ಇದರಲ್ಲಿಎಲೆಕ್ಟ್ರಿಕ್ ಬಸ್ ಸಧಿಹಿತ ಕೆಎಸ್ ಆರ್ ಟಿಸಿಗೆ 1323, ಬಿಎಂಟಿಸಿಗೆ 2365, ಎನ್ ಡಬ್ಲೂಕೆಎಸ್ ಆರ್ ಟಿಸಿಗೆ 1221 ಮತ್ತು ಕೆಕೆಎಸ್ ಆರ್ ಟಿಸಿಗೆ 1173 ಬಸ್ ಗಳನ್ನು ಖರೀದಿ ಮಾಡಲಾಗುತ್ತಿದೆ,’ಧಿ’ ಎಂದರು. ‘‘2026-27ನೇ ಸಾಲಿನ ಬಜೆಟ್ ನಲ್ಲಿಒಂದು ಸಾವಿರ ಹೊಸ ಬಸ್ ಗಳ ಖರೀದಿ ಘೋಷಿಸಲಾಗಿದೆ. ಕೇಂದ್ರದ ಪಿಎಂಇ-ಸೇವಾ ಮತ್ತು ಪಿಎಂ ಇ-ಡ್ರೈವ್ ಯೋಜನೆಯಡಿ ಸುಮಾರು 5250 ಎಲೆಕ್ಟ್ರಿಕ್ ಬಸ್ಸುಗಳನ್ನು ಮುಂದಿನ ದಿನಗಳಲ್ಲಿಕಾರ್ಯಾರಂಭ ಮಾಡಲು ಅನುಮೋದನೆ ದೊರೆತಿದೆ’’ ಎಂದು ತಿಳಿಸಿದರು.

