ಮತ್ತೊಮ್ಮೆ ರಾಜ್ಯಸಭೆಗೆ ಎಚ್ .ಡಿ. ದೇವೇಗೌಡ

Contributed byanil.kumar2@timesgroup.com|Vijaya Karnataka

ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಮತ್ತೊಮ್ಮೆ ರಾಜ್ಯಸಭೆಗೆ ಆಯ್ಕೆಯಾಗುವ ಸಾಧ್ಯತೆ ಹೆಚ್ಚಿದೆ. ಪ್ರಧಾನಿ ನರೇಂದ್ರ ಮೋದಿಯವರ ಆಸಕ್ತಿಯಿಂದ ಈ ನಿರ್ಧಾರ ಹೊರಬಿದ್ದಿದೆ. ದೇವೇಗೌಡರ ಹಾಲಿ ಸದಸ್ಯತ್ವ ಜೂನ್ 25ಕ್ಕೆ ಮುಕ್ತಾಯಗೊಳ್ಳಲಿದೆ. ರಾಜ್ಯ ಬಿಜೆಪಿಯೂ ಈ ವಿಚಾರದಲ್ಲಿ ಮೌನ ತಾಳಿದೆ. ಹೀಗಾಗಿ, ತೆರವಾಗುವ ಸ್ಥಾನಕ್ಕೆ ದೇವೇಗೌಡರ ಆಯ್ಕೆ ಖಚಿತ ಎನ್ನಲಾಗುತ್ತಿದೆ.

devegowda to rajya sabha again modis insistence

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ಒತ್ತಾಸೆ ಮೇರೆಗೆ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ದೇವೇಗೌಡರು ಮತ್ತೊಮ್ಮೆ ರಾಜ್ಯಸಭೆ ಸದಸ್ಯರಾಗುವುದು ಬಹುತೇಕ ಖಚಿತವಾಗಿದೆ. ದೇವೇಗೌಡರ ಹಾಲಿ ರಾಜ್ಯಸಭೆ ಸದಸ್ಯತ್ವದ ಅವಧಿ ಜೂನ್ 25ಕ್ಕೆ ಅಂತ್ಯಗೊಳ್ಳುತ್ತದೆ. ರಾಜ್ಯ ವಿಧಾನಸಭೆಯಲ್ಲಿಜೆಡಿಎಸ್ ಗೆ ಸಂಖ್ಯಾಬಲ ಇಲ್ಲ. ಹಾಗಾಗಿ ರಾಜ್ಯಸಭೆ ಚುನಾವಣೆ ಸ್ಪರ್ಧೆ ಬಗ್ಗೆ ಜೆಡಿಎಸ್ ವೇದಿಕೆಯಲ್ಲಿಚರ್ಚೆಯಾಗಿಲ್ಲ. ಆದರೆ, ಸ್ವತಃ ಮೋದಿ ಅವರೇ ದೇವೇಗೌಡರನ್ನು ಪುನಃ ರಾಜ್ಯಸಭೆಗೆ ಕರೆಸಿಕೊಳ್ಳಲು ಉತ್ಸುಕರಾಗಿದ್ದಾರೆ ಎನ್ನುವುದು ಉನ್ನತ ಮೂಲಗಳಿಂದ ಬಂದಿರುವ ಮಾಹಿತಿ. ದೇವೇಗೌಡರನ್ನು ರಾಜ್ಯಸಭೆಗೆ ಕರೆಸಿಧಿಕೊಳ್ಳಲು ಸ್ವತಃ ಪ್ರಧಾನಿಯವರೇ ಇಚ್ಛೆ ಹೊಂದಿದ್ದಾರೆ ಎಂಬ ವರ್ತಮಾನ ಬರುತ್ತಿಧಿದ್ದಂತೆ ರಾಜ್ಯ ಬಿಜೆಪಿಯೂ ಈ ವಿಚಾರದಲ್ಲಿಮೌನ ತಾಳಿದೆ. ಹಾಗಾಗಿ ಜೂನ್ ನಲ್ಲಿತೆರವಾಗುವ ಸ್ಥಾನಕ್ಕೆ ದೇವೇಗೌಡರು ಪುನಃ ಆಯ್ಕೆಯಾಗುವುದು ನಿಶ್ಚಿತಧಿವೆಂದು ರಾಜಕೀಯ ವಲಯ ಲೆಕ್ಕಾಚಾರ ಹಾಕುತ್ತಿದೆ.