ಭವ್ಯ ಯೋಜನೆಗೆ ಸಂಪುಟ ಅಸ್ತು

Contributed byanil.kumar2@timesgroup.com|Vijaya Karnataka

ಕೇಂದ್ರ ಸಚಿವ ಸಂಪುಟ 'ಭಾರತ ಔದ್ಯೋಗಿಕ ವಿಕಾಸ ಯೋಜನೆ'ಗೆ ಅನುಮೋದನೆ ನೀಡಿದೆ. 33,600 ಕೋಟಿ ರೂ. ವೆಚ್ಚದ ಈ ಯೋಜನೆ ಉತ್ಪಾದನಾ ವಲಯಕ್ಕೆ ಉತ್ತೇಜನ ನೀಡಲಿದೆ. 15 ಲಕ್ಷ ಉದ್ಯೋಗ ಸೃಷ್ಟಿ, ವಿಶ್ವದರ್ಜೆಯ ಮೂಲಸೌಕರ್ಯ ಅಭಿವೃದ್ಧಿ ಇದರ ಗುರಿಯಾಗಿದೆ. 100ರಿಂದ 1,000 ಎಕರೆ ಕೈಗಾರಿಕಾ ಪಾರ್ಕ್ ಅಭಿವೃದ್ಧಿ, ಆರ್ಥಿಕ ಸಹಾಯ ಒದಗಿಸಲಾಗುವುದು. ಎಲ್ಲ ರಾಜ್ಯಗಳಲ್ಲೂ ಯೋಜನೆ ಜಾರಿಗೊಳಿಸಿ ಉದ್ಯೋಗಾವಕಾಶ ಸೃಷ್ಟಿಸಲಾಗುವುದು.

india industrial development plan to create 15 million jobs

ಹೊಸದಿಲ್ಲಿ: ದೇಶದಲ್ಲಿಉತ್ಪಾದನಾ ವಲಯಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ‘ಭಾರತ ಔದ್ಯೋಗಿಕ ವಿಕಾಸ ಯೋಜನೆ’ಗೆ (ಭವ್ಯ) ಕೇಂದ್ರ ಸಚಿವ ಸಂಪುಟ ಸಭೆ ಬುಧವಾರ ಅನುಮೋದನೆ ನೀಡಿದೆ. 33,600 ಕೋಟಿ ರೂ. ಮೌಲ್ಯದ ಯೋಜನೆ ಇದಾಗಿದ್ದು, ವಿಶ್ವದರ್ಜೆಯ ಮೂಲಸೌಕರ್ಯ ಅಭಿವೃದ್ಧಿ, ಉತ್ಪಾದನಾ ಸಾಮರ್ಥ್ಯ ಹೆಚ್ಚಳ ಹಾಗೂ ಭಾರತದ ಯಶೋಗಾಥೆಯನ್ನು ಮುನ್ನಡೆಸುವ ಗುರಿಯನ್ನು ಹೊಂದಿದೆ. ಪ್ರಧಾನಿ ಮೋದಿ ನೇತೃತ್ವದಲ್ಲಿನಡೆದ ಸಂಪುಟ ಸಭೆಯ ಬಳಿಕ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್ ಅವರು ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ‘‘ಈ ಯೋಜನೆಯಿಂದ 15 ಲಕ್ಷ ನೇರ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ. ಈ ಯೋಜನೆಯಡಿ 100ರಿಂದ 1,000 ಎಕರೆ ವಿಸ್ತೀರ್ಣದ ಕೈಗಾರಿಕಾ ಪಾರ್ಕ್ಗಳನ್ನು ಅಭಿವೃದ್ಧಿಪಡಿಸಲಾಗುವುದು. ಇದಕ್ಕಾಗಿ 1 ಎಕರೆಗೆ 1 ಕೋಟಿ ರೂ. ಲೆಕ್ಕದಲ್ಲಿಆರ್ಥಿಕ ಸಹಾಯ ಒದಗಿಸಲಾಗುವುದು. ಈ ಕೈಗಾರಿಕಾ ಪಾರ್ಕ್ಗಳು ಆಂತರಿಕ ರಸ್ತೆಗಳು, ಒಳಚರಂಡಿ, ಆಡಳಿತ ವ್ಯವಸ್ಥೆಗಳು, ತ್ಯಾಜ್ಯ ಸಂಸ್ಕರಣಾ ಘಟಕ ಸೇರಿದಂತೆ ಪ್ರಮುಖ ಮೂಲಸೌಕರ್ಯಗಳನ್ನು ಒಳಗೊಂಡಿರಲಿವೆ.’’ ಎಂದು ತಿಳಿಸಿದ್ದಾರೆ. ‘‘ಇದರ ಜತೆಗೆ, ಫ್ಯಾಕ್ಟರಿ ಶೆಡ್ ಗಳು, ಪರೀಕ್ಷಾ ಲ್ಯಾಬ್ ಗಳು, ಸಂಗ್ರಹಾಗಾರಗಳಂತಹ ಮೌಲ್ಯಾಧಾರಿತ ಮೂಲಸೌಕರ್ಯ ಹಾಗೂ ಕೆಲಸಗಾರರಿಗೆ ಮನೆಗಳು ಮತ್ತು ಸವಲತ್ತುಗಳು ಸೇರಿದಂತೆ ಸಾಮಾಜಿಕ ಮೂಲಸೌಕರ್ಯಗಳೂ ಈ ಕೈಗಾರಿಕಾ ಪಾರ್ಕ್ಗಳಲ್ಲಿಇರಲಿವೆ,’’ ಎಂದು ಸಚಿವರು ಮಾಹಿತಿ ನೀಡಿದ್ದಾರೆ. 25% ಯೋಜನಾ ವೆಚ್ಚದವರೆಗೆ ಆರ್ಥಿಕ ಸಹಾಯದ ಮೂಲಕ ಬಾಹ್ಯ ಮೂಲಧಿಸೌಕರ್ಯಕ್ಕೂ ನೆರವು ಒದಗಿಸಲಾಗುವುದು. ಆ ಮೂಲಕ ಈ ಕೈಗಾರಿಕಾ ಪಾರ್ಕ್ಗಳಿಗೆ ಸುಗಮ ಸಂಪರ್ಕಜಾಲ ಒದಗಿಸಲು ಅನುವಾಗಲಿದೆ ಎಂದು ಸರಕಾರ ಹೇಳಿದೆ. ಎಲ್ಲಾರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ್ಯಂತ ಈ ಯೋಜನೆ ಜಾರಿಗೊಳಿಸುವ ಮೂಲಕ ಲಕ್ಷಾಂತರ ನೇರ ಮತ್ತು ಪರೋಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಕೇಂದ್ರ ಸರಕಾರ ಉದ್ದೇಶಿಸಿದೆ. ಈ ಯೋಜನೆಯು ಉತ್ಪಾದನಾ ಘಟಕಗಳು, ಎಂಎಸ್ ಎಂಇ, ನವೋದ್ಯಮಗಳಿಗೆ ನೇರವಾಗಿ ಅನುಕೂಲ ಒದಗಿಸಲಿದೆ.