ಇರಾನ್ ಗುಪ್ತಚರ ಸಚಿವನ ಹತ್ಯೆ

Contributed byanil.kumar2@timesgroup.com|Vijaya Karnataka

ಇರಾನ್ ಗುಪ್ತಚರ ಸಚಿವ ಇಸ್ಮಾಯಿಲ್ ಖತಿಬ್ ಅವರನ್ನು ಇಸ್ರೇಲ್ ಹತ್ಯೆ ಮಾಡಿದೆ. ಈ ಹಿಂದೆ ರಕ್ಷಣಾ ವಿಭಾಗದ ಮುಖ್ಯಸ್ಥ ಅಲಿ ಲಾರಿಜಾನಿ ಅವರೂ ಹತರಾಗಿದ್ದರು. ಇರಾನ್ ಅಧ್ಯಕ್ಷರು ಈ ಕೃತ್ಯವನ್ನು ಖಂಡಿಸಿದ್ದಾರೆ. ಇಸ್ರೇಲ್ ಸೇನೆಗೆ ಇರಾನ್‌ನ ಉನ್ನತಾಧಿಕಾರಿಗಳನ್ನು ಗುರಿಯಾಗಿಸುವ ಅಧಿಕಾರವಿದೆ ಎಂದು ಇಸ್ರೇಲ್ ರಕ್ಷಣಾ ಸಚಿವರು ಹೇಳಿದ್ದಾರೆ. ಈ ಘಟನೆಗಳು ಇರಾನ್‌ನಲ್ಲಿ ತೀವ್ರ ಆತಂಕ ಮೂಡಿಸಿವೆ.

assassination of irans intelligence minister an attack from israel

ಟೆಹ್ರಾನ್ : ಇರಾನ್ ರಕ್ಷಣಾ ವಿಭಾಗದ ಮುಖ್ಯಸ್ಥ ಅಲಿ ಲಾರಿಜಾನಿ ಬೆನ್ನಲ್ಲೇ ಆ ದೇಶದ ಗುಪ್ತಚರ ಸಚಿವ ಇಸ್ಮಾಯಿಲ್ ಖತಿಬ್ ಅವರನ್ನು ಇಸ್ರೇಲ್ ಹತ್ಯೆ ಮಾಡಿದೆ. ಉಭಯ ನಾಯಕರು ಹತರಾಗಿರುವುದನ್ನು ಇರಾನ್ ಸರಕಾರ ಬುಧವಾರ ಖಚಿತಪಡಿಸಿದೆ. ಈ ಸಂಬಂಧ ಜಾಲತಾಣದಲ್ಲಿಪ್ರಕಟಿಸಿರುವ ಇರಾನ್ ಅಧ್ಯಕ್ಷ ಮಸೌದ್ ಪಜೆಶ್ಕಿಯಾನ್ ಅವರು, ‘‘ಇದೊಂದು ಹೇಡಿತನದ ಕೃತ್ಯ,’’ ಎಂದು ಇಸ್ರೇಲ್ ದಾಳಿಯನ್ನು ಖಂಡಿಸಿದ್ದಾರೆ. ಇದಕ್ಕೂ ಮುನ್ನ ಈ ಬಗ್ಗೆ ಹೇಳಿಕೆ ನೀಡಿದ್ದ ಇಸ್ರೇಲ್ ರಕ್ಷಣಾ ಸಚಿವ ಕಾಟ್ ್ಜ ಅವರು, ‘‘ಇಸ್ರೇಲ್ ಪಡೆಯು ಕಳೆದ ರಾತ್ರಿ ಖತಿಬ್ ಅವರನ್ನು ಹತ್ಯೆ ಮಾಡಿದೆ. ಲಾರಿಜಾನಿ ಅವರನ್ನು ಮುಗಿಸಿದ ಬೆನ್ನಲ್ಲೇ ಮತ್ತೊಬ್ಬ ನಾಯಕನ ಹತ್ಯೆಯಾಗಿದೆ. ಇಸ್ರೇಲ್ ನ ಗುರಿಯ ವ್ಯಾಪ್ತಿಯಲ್ಲಿರುವ ಇರಾನ್ ನ ಯಾವುದೇ ಉನ್ನತಾಧಿಕಾರಿಯನ್ನು ಹೊಡೆದುರುಳಿಸುವ ಅಧಿಕಾರವನ್ನು ಸೇನೆಗೆ ನೀಡಲಾಗಿದೆ,’’ ಎಂದು ಹೇಳಿದ್ದರು.