ಅಶ್ಲೀಲ ಹಾಡು ನಿಷೇಧಕ್ಕೆ ಆಗ್ರಹ

Contributed bykeshavmurthy8@gmail.com|Vijaya Karnataka

ಮೈಸೂರಿನಲ್ಲಿ ಕೆ.ಡಿ: ದಿ ಡೆವಿಲ್‌ ಸಿನಿಮಾದ 'ಸರ್ಸೆ ಸರ್ಸೆ ನಿನ್ನ ಸೆರಗ ಸರ್ಸೆ' ಹಾಡನ್ನು ಕೂಡಲೇ ನಿಷೇಧಿಸಬೇಕೆಂದು ಮಹಿಳಾ ಹೋರಾಟಗಾರರು ಆಗ್ರಹಿಸಿದ್ದಾರೆ. ದೇಶದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ಈ ಹಾಡು ಪ್ರಚೋದನೆ ನೀಡುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುವ ಈ ಹಾಡಿನ ಸಾಹಿತ್ಯ ಕೀಳು ಮಟ್ಟದಲ್ಲಿದೆ. ಸೆನ್ಸಾರ್ ಮಂಡಳಿಯ ನಿರ್ಲಕ್ಷ್ಯದಿಂದ ಇಂತಹ ಹಾಡುಗಳು ಬಿಡುಗಡೆಯಾಗುತ್ತಿವೆ. ಈ ಹಾಡನ್ನು ಚಿತ್ರದಿಂದ ಕೈಬಿಟ್ಟು, ಪ್ರಸಾರವನ್ನು ನಿಷೇಧಿಸಬೇಕೆಂದು ಒತ್ತಾಯಿಸಲಾಗಿದೆ.

strong demand for ban on obscene song

ವಿಕ ಸುದ್ದಿಲೋಕ ಮೈಸೂರು ಕೆ.ಡಿ. ದಿ ಡೆವಿಲ್ ಸಿನೆಮಾದ ಸರ್ಸೆ ಸರ್ಸೆ ನಿನ್ನ ಸೆರಗ ಸರ್ಸೆ ಹಾಡನ್ನು ರಾಜ್ಯ ಸರಕಾರ ಕೂಡಲೇ ನಿಷೇಧಿಸಬೇಕು ಎಂದು ಮಹಿಳಾ ಪರ ಹೋರಾಟಗಾರರು ಆಗ್ರಹಿಸಿದ್ದಾರೆ. ‘‘ದೇಶದಲ್ಲಿಹಲವೆಡೆ ಈಗಾಗಲೇ ಹಲವು ರೀತಿಯಲ್ಲಿಹೆಣ್ಣುಮಕ್ಕಳ ಮೇಲೆ ಆಕ್ರಮಣ ನಡೆಯುತ್ತಿವೆ. ಇದಕ್ಕೆ ಉತ್ತೇಜನ ನೀಡುವ ರೀತಿಯಲ್ಲಿಧ್ರುವ ಸರ್ಜಾ ನಟನೆಯ ಕೆ.ಡಿ: ದಿ ಡೆವಿಲ್ ಎಂಬ ಸಿನಿಮಾದ ಹಾಡೊಂದು ಬಿಡುಗಡೆಯಾಗಿದೆ. ಮಹಿಳೆಯರ ಸ್ವಾಭಿಮಾನವನ್ನು ಸಂರಕ್ಷಿಸಲು ರಾಜ್ಯ ಸರಕಾರ ಈ ಹಾಡನ್ನು ನಿಷೇಧಿಸಬೇಕು,’’ ಎಂದು ಒತ್ತಾಯಿಸಿದ್ದಾರೆ. ‘‘ಹೀನ ಅಭಿರುಚಿಯ ಹಾಡು ಬಿಡುಗಡೆಯಾಗಿದ್ದು, ಚಿಕ್ಕ ಮಕ್ಕಳಿಂದ ಹಿಡಿದು ಎಲ್ಲರ ಮೇಲೂ ಕೆಟ್ಟ ಪರಿಣಾಮವನ್ನು ಉಂಟು ಮಾಡುವುದರಲ್ಲಿಸಂಶಯವಿಲ್ಲ. ಈ ಗೀತೆ ಒಳಗೊಂಡಿರುವ ಸಾಹಿತ್ಯವು ಅತ್ಯಂತ ಕೀಳು ಮಟ್ಟದಲ್ಲಿದೆ. ಈ ಗೀತೆಯು ಹೆಂಗಸರನ್ನು ಕೆಟ್ಟ ದೃಷ್ಟಿಯಿಂದ ನೋಡಲು ಪ್ರಚೋದಿಸುತ್ತದೆ,’’ ಎಂದು ವಕೀಲರಾದ ಎಂ.ಎನ್ .ಸುಮನ, ರೈತ ಹೋರಾಟಗಾರರಾದ ಸುನಂದಾ ಜಯರಾಮ…, ಮಹಿಳಾ ಪರ ಹೋರಾಟಗಾರರಾದ ರೇಖಾಂಬ, ಲಿನೆಟ್ ವಾಣಿ ಪೆರಿಯೋಡಿ, ನಸ್ರೀನ್ ಮಿಠಾಯಿ ಹಾಗೂ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಸಮನ್ವಯ ಸಮಿತಿಯ ಇತರ ಸದಸ್ಯರು ಅಭಿಪ್ರಾಯಪಟ್ಟಿದ್ದಾರೆ. ‘‘ರಾಜ್ಯ ಸರಕಾರವು 16 ವರ್ಷದ ಒಳಗಿನ ಮಕ್ಕಳಿಗೆ ಮೊಬೈಲ್ ನಿಷೇಧಿಸುವಲ್ಲಿತೋರಿದ ಕಾಳಜಿಯನ್ನು ಈಗಲೂ ತೋರಿಸಬೇಕಾಗಿದೆ. ಸೆನ್ಸಾರ್ ಮಂಡಳಿಯು ತೋರಿರುವ ನಿರ್ಲಕ್ಷ್ಯ, ಬೇಜವಾಬ್ದಾರಿಗಳಿಂದಾಗಿ ಇಂತಹ ಹಾಡುಗಳು ಎಗ್ಗಿಲ್ಲದೆ ಬಿಡುಗಡೆಯಾಗುತ್ತಿವೆ. ಇಂಥ ನಾಚಿಕೆಗೆಟ್ಟ ಗೀತೆಗಳನ್ನು ಯಾವ ಕಾರಣಕ್ಕೂ ಒಪ್ಪುವುದು ಸಾಧ್ಯವಿಲ್ಲ. ಹಾಗಾಗಿ ಈ ಹಾಡನ್ನು ಚಿತ್ರದಿಂದ ಸಂಪೂರ್ಣವಾಗಿ ಕೈಬಿಡಬೇಕು. ಅಲ್ಲದೆ, ಪ್ರಸಾರವನ್ನು ನಿಷೇಧಿಸಬೇಕು. ಈ ಕುರಿತು ಸಂಬಂಧಪಟ್ಟವರು ತಕ್ಷಣ ಕ್ರಮಕೈಗೊಳ್ಳಬೇಕು,’’ ಎಂದು ಪ್ರಕಟಣೆಯಲ್ಲಿಆಗ್ರಹಿಸಿದ್ದಾರೆ.