ಹುಣಸೂರು: ನಗರದ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆಯ ಸಂಗೀತ ಶಿಕ್ಷಕ ಬಸವಣ್ಣಯ್ಯ(55) ಬುಧವಾರದಂದು ಶಾಲೆಯಲ್ಲೇ ಹೃದಯಾಘಾತದಿಂದ ನಿಧನರಾದರು. ಮಧ್ಯಾಹ್ನ ಊಟ ಮಾಡಿಕೊಂಡು ಶಾಲೆಗೆ ಬಂದ ಅವರು ಇತರೆ ಶಿಕ್ಷಕರೊಂದಿಗೆ ಮಾತನಾಡುತ್ತ ಕುಳಿತಿರುವಾಗಲೇ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದರೂ ಅದಾಗಲೇ ಸಾಧಿವಿಧಿಗೀಧಿಡಾಧಿಗಿಧಿದ್ದರು. ಮೃಧಿತರಿಗೆ ಪತ್ನಿ, ಧಿಪುತ್ರಿ ಇದ್ದಾರೆ. ಮೂಲತಃ ಬೆಳಗಾವಿಯವರಾಗಿದ್ದು, 2002ರಿಂದಲೂ ಇದೇ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಬಿಇಒ ಮಹದೇವ್ , ಬಿ.ಆರ್ .ಸಿ.ಹೇಮಲತಾ, ಉಪ ಪ್ರಾಚಾರ್ಯ ಗೀತಾ ಹಾಗೂ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಅಂತಿಮ ದರ್ಶನ ಪಡೆದರು. ಗುರುವಾರ ಹುಣಸೂರಿನ ರುದ್ರಭೂಮಿಯಲ್ಲಿ ಅಂತಿಮ ದರ್ಶನ ನಡೆಯಲಿದೆ.

