ಇವಿ ಚಾರ್ಜಿಂಗ್ ವೇಳೆ ಸ್ಫೋಟ ಕುಟುಂಬದ 7 ಮಂದಿ ಸಾವು

Contributed bychanna mallikarjuna|Vijaya Karnataka

ಇಂದೋರ್‌ನಲ್ಲಿ ಭೀಕರ ದುರಂತ ಸಂಭವಿಸಿದೆ. ವಿದ್ಯುತ್ ವಾಹನ ಚಾರ್ಜಿಂಗ್ ಪಾಯಿಂಟ್‌ನಲ್ಲಿ ಆದ ಸ್ಫೋಟದಿಂದ ಎಲ್‌ಪಿಜಿ ಸಿಲಿಂಡರ್‌ಗಳು ಸಿಡಿದು ಒಂದೇ ಕುಟುಂಬದ ಏಳು ಮಂದಿ ಸಾವನ್ನಪ್ಪಿದ್ದಾರೆ. ಮೂವರು ಗಾಯಗೊಂಡಿದ್ದಾರೆ. ಬೆಂಗಾಲಿ ಚೌಕದ ಬಳಿಯ ಬ್ರಿಜೇಶ್ವರಿ ಕಟ್ಟಡದಲ್ಲಿ ಬೆಳಗಿನ ಜಾವ ಬೆಂಕಿ ಕಾಣಿಸಿಕೊಂಡಿದೆ. ಅಗ್ನಿಶಾಮಕ ದಳದ ಕಾರ್ಯಾಚರಣೆ ನಡೆದು ಮೂವರನ್ನು ರಕ್ಷಿಸಲಾಗಿದೆ.

ev charging explosion cause of death for 7 family members
ಇಂದೋರ್: ವಿದ್ಯುತ್ ವಾಹನ ಚಾರ್ಜಿಂಗ್ ಪಾಯಿಂಟ್‌ನಲ್ಲಿ ಸಂಭವಿಸಿದ ಸ್ಫೋಟದಿಂದಾಗಿ ಎಲ್‌ಪಿಜಿ ಸಿಲಿಂಡರ್‌ಗಳು ಸಹ ಸಿಡಿದು, ಒಂದೇ ಕುಟುಂಬದ ಏಳು ಮಂದಿ ದುರ್ಮರಣಕ್ಕೀಡಾಗಿದ್ದಾರೆ. ಈ ಘಟನೆ ಮಧ್ಯಪ್ರದೇಶದ ಇಂದೋರ್‌ನ ಬೆಂಗಾಲಿ ಚೌಕದ ಬಳಿಯ ಬ್ರಿಜೇಶ್ವರಿ ಕಟ್ಟಡದಲ್ಲಿ ಬುಧವಾರ ಮುಂಜಾನೆ 4 ಗಂಟೆ ಸುಮಾರಿಗೆ ನಡೆದಿದೆ. ಮೂರು ಮಹಡಿಯ ಕಟ್ಟಡಕ್ಕೆ ಬೆಂಕಿ ಹೊತ್ತಿಕೊಂಡು ಕೆಲವೇ ನಿಮಿಷಗಳಲ್ಲಿ ವ್ಯಾಪಿಸಿದ್ದು, ಸುಮಾರು ಹತ್ತು ಎಲ್‌ಪಿಜಿ ಸಿಲಿಂಡರ್‌ಗಳು ಸ್ಫೋಟಗೊಂಡಿವೆ. ಅಗ್ನಿಶಾಮಕ ದಳದ ಸಿಬ್ಬಂದಿ ದಟ್ಟ ಹೊಗೆಯಿಂದಾಗಿ ಕಟ್ಟಡದೊಳಗೆ ಪ್ರವೇಶಿಸಲು ಪರದಾಡಿದರು. ಅಂತಿಮವಾಗಿ, ಪಕ್ಕದ ಕಟ್ಟಡದ ಮೂಲಕ ಪ್ರವೇಶಿಸಿ ಮೂವರನ್ನು ರಕ್ಷಿಸುವಲ್ಲಿ ಯಶಸ್ವಿಯಾದರು.

ಬೆಂಗಾಲಿ ಚೌಕದ ಬಳಿ ಇರುವ ಬ್ರಿಜೇಶ್ವರಿ ಕಟ್ಟಡದಲ್ಲಿ ಈ ಭೀಕರ ದುರಂತ ಸಂಭವಿಸಿದೆ. ಬುಧವಾರ ಮುಂಜಾನೆ ಸುಮಾರು 4 ಗಂಟೆಗೆ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ ಕೆನ್ನಾಲಗೆ ಕೆಲವೇ ನಿಮಿಷಗಳಲ್ಲಿ ಮೂರು ಮಹಡಿಯ ಕಟ್ಟಡವನ್ನು ಆವರಿಸಿಕೊಂಡಿದೆ. ಆ ಕಟ್ಟಡದಲ್ಲಿ ಸುಮಾರು ಹತ್ತು ಎಲ್‌ಪಿಜಿ ಸಿಲಿಂಡರ್‌ಗಳು ಇದ್ದವು.
ಘಟನೆ ನಡೆದ ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ಆದರೆ, ದಟ್ಟ ಹೊಗೆಯ ಕಾರಣದಿಂದಾಗಿ ಕಟ್ಟಡದೊಳಗೆ ಪ್ರವೇಶಿಸುವುದು ಅವರಿಗೆ ಕಷ್ಟವಾಯಿತು. ರಕ್ಷಣಾ ತಂಡಗಳು ಪಕ್ಕದ ಕಟ್ಟಡದ ಮೂಲಕ ಪ್ರವೇಶಿಸಿ, ಅದೃಷ್ಟವಶಾತ್ ಬದುಕುಳಿದಿದ್ದ ಮೂವರನ್ನು ರಕ್ಷಿಸಿದ್ದಾರೆ. ಈ ದುರಂತದಲ್ಲಿ ಒಟ್ಟು ಏಳು ಮಂದಿ ಸಾವನ್ನಪ್ಪಿದ್ದಾರೆ ಮತ್ತು ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.