ಅಶ್ಲೀಲ ಸಾಹಿತ್ಯ: ಪ್ರೇಮ್ ಕ್ಷಮೆಯಾಚನೆ

Contributed bypunyavathi.hp@timesgroup.com|Vijaya Karnataka

ಕೆ.ಡಿ. ದಿ ಡೆವಿಲ್‌ ಚಿತ್ರದ ಹಾಡಿನ ಸಾಹಿತ್ಯ ವಿವಾದಕ್ಕೆ ಗುರಿಯಾಗಿದೆ. ನಿರ್ದೇಶಕ ಪ್ರೇಮ್‌ ತಮ್ಮ ತಪ್ಪಿಗೆ ಕ್ಷಮೆ ಯಾಚಿಸಿದ್ದಾರೆ. ಉದ್ದೇಶಪೂರ್ವಕವಾಗಿ ಯಾರೂ ತಪ್ಪು ಮಾಡುವುದಿಲ್ಲ ಎಂದಿದ್ದಾರೆ. ತಮ್ಮ ದೃಷ್ಟಿಕೋನದಿಂದ ಹಾಡು ಬರೆದಿದ್ದೇನೆ. ಯಾರ ಮನಸ್ಸಿಗೂ ನೋವು ಮಾಡುವ ಉದ್ದೇಶ ಇರಲಿಲ್ಲ. ಹಾಡನ್ನು ಮರು ಬರೆಯುವುದಾಗಿ ತಿಳಿಸಿದ್ದಾರೆ. ಕೆಲವರು ತಮ್ಮ ಕುಟುಂಬದ ಬಗ್ಗೆ ಕೀಳಾಗಿ ಮಾತನಾಡುತ್ತಿದ್ದಾರೆ ಎಂದಿದ್ದಾರೆ.

obscene literature prem apologizes controversy

ವಿಕ ಸುದ್ದಿಲೋಕ ಬೆಂಗಳೂರು ‘ಕೆ.ಡಿ.: ದಿ ಡೆವಿಲ್ ’ ಚಿತ್ರದ ‘ಸರ್ಸೆ ಸರ್ಸೆ ನಿನ್ನ ಸೆರಗ ಸರ್ಸೆ’ ಹಾಡಿನ ಸಾಹಿತ್ಯ ಭಾರಿ ವಿವಾದಕ್ಕೆ ಒಳಗಾದ ಬೆನ್ನಲ್ಲೇ ನಿರ್ದೇಶಕ ಪ್ರೇಮ್ ಈ ಬಗ್ಗೆ ಕ್ಷಮೆ ಕೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿವಿಡಿಯೊ ಹಂಚಿಕೊಂಡಿರುವ ಅವರು, ‘‘ನನ್ನಿಂದ ತಪ್ಪಾಗಿದ್ರೆ ಕ್ಷಮೆ ಕೇಳುತ್ತೇನೆ,’’ ಎಂದಿದ್ದಾರೆ. ‘ಉದ್ದೇÍ Üಪೂರ್ವಕವಾಗಿ ಯಾರೂ ತಪ್ಪು ಮಾಡು ವುದಿಲ್ಲ. ನಾನು ಪ್ರತಿ ಸಿನಿಮಾದಲ್ಲೂಹಾಡುಗಳನ್ನು ಬರೆದಿದ್ದೇನೆ. ದೇವರ ಬಗ್ಗೆ ಸಾಂಗ್ ಬರೆದಿದ್ದೇನೆ. ತಾಯಿ, ಅಣ್ಣ-ತಮ್ಮ, ಪ್ರೀತಿ ಬಗ್ಗೆ ಹಾಡು ಬರೆದಿದ್ದೇನೆ. ಎಲ್ಲಾಸಂದರ್ಭದಲ್ಲೂನನ್ನ ಹಾಡುಗಳನ್ನು ಕೇಳಿ ಪ್ರೋತ್ಸಾಹಿಸಿದ್ದೀರಿ. ಪ್ರೇಮ್ ಸಿನಿಮಾ ಬಂದರೆ ಹಾಡುಗಳನ್ನು ಭರ್ಜರಿಯಾಗಿ ಮಾಡಿರುತ್ತಾನೆ ಅಂದುಕೊಂಡಿರುತ್ತಾರೆ. ಅದಕ್ಕೆಲ್ಲನಾನು ಯಾವಾಗಲೂ ಚಿರಋುಣಿ ಆಗಿರುತ್ತೇನೆ,’’ ಎಂದಿದ್ದಾರೆ. ‘‘ಈ ಹಾಡು (ಸರ್ಸೆ ಸೆರಗು) ಬರೆದಾಗ ನಾನು ನನ್ನ ದೃಷ್ಟಿಕೋನದಿಂದ ಬರೆದಿದ್ದೆ. ಒಂದು ಬಾಟಲ್ , ಉಪ್ಪಿನಕಾಯಿ ಕಂಟೆಂಟ್ ಇಡ್ಕೊಂಡು ಬರೆದಿದ್ದೆ. ಒಂದು ಪದ ತೆಗೆದು ಮೇಲೆ ಹಾಕಬಹುದಿತ್ತು. ಆದರೆ, ಕುತೂಹಲ ಇರಲಿ ಅಂತ ಕೊನೆಯಲ್ಲಿಬರೆದೆ. ಯಾಕಂದ್ರೆ ಒಬ್ಬ ಸಾಹಿತಿ ಹೀಗೂ ಬರೆಯಬಹುದು ಅಂತ ಬರೆದೆ. ಹಾಗಂತ ನಾನು ಅಶ್ಲೀಲವಾಗಿ ಆಗಲಿ, ಯಾರಿಗೂ ನೋವು ಮಾಡುವ ಉದ್ದೇಶದಿಂದ ಬರೆಯಲಿಲ್ಲ. ಯಾರಿಗೂ ನೋವಾಗುವಂತೆ ಮುಂದೆ ಮಾಡಲ್ಲ, ಸಾಯುವರೆಗೂ ಮಾಡಲ್ಲ. ಅದರ ಅವಶ್ಯಕತೆನೂ ನನಗಿಲ್ಲ,’’ ಎಂದಿದ್ದಾರೆ. ‘‘ನನ್ನ ಪ್ರೀತಿ ಮಾಡುವವರಿಗೆ ಈ ಹಾಡು ಕೇಳಿ ನೋವಾಗಿರಬಹುದು, ಪ್ರೇಮ್ ಹೀಗೆ ಮಾಡಿದ್ದಾರಾ? ಪ್ರೇಮ್ ಈ ಥರಾನ? ಅನಿಸಿರಬಹುದು. ಸಾಹಿತಿ

ಆದ ಮೇಲೆ ಎಲ್ಲರೀತಿಯಲ್ಲಿಯೂ ಬರೆಯ ಬೇಕಾಗುತ್ತದೆ. ಆದರೆ ನಾನು ಅಶ್ಲೀಲ ಅರ್ಥದಲ್ಲಿಬರೆದಿಲ್ಲ. ನನ್ನಿಂದ ಬೇಸರ ಆಗಿದ್ದರೆ ಕ್ಷಮೆ ಕೇಳುವೆ. ಹಾಡನ್ನು ರೀರೈಟ್ ಮಾಡುವೆ, ಬೇರೆ ರೀತಿ ಬರೆದು ಮತ್ತೆ ರಿಲೀಸ್ ಮಾಡುತ್ತೇನೆ,’’ ಎಂದು ಪ್ರತಿಕ್ರಿಯಿಸಿದ್ದಾರೆ. ‘‘ಕೆಲವರು ಬೇರೆ ರೀತಿಯಲ್ಲಿಇದನ್ನು ಅರ್ಥ ಮಾಡಿಕೊಂಡು, ನನ್ನ ಹಾಗೂ ನನ್ನ ಕುಟುಂಬದ ಬಗ್ಗೆ ಕೀಳಾಗಿ ಮಾತನಾಡುತ್ತಿದ್ದಾರೆ. ಲೈಕ್ , ಕಮೆಂಟ್ ಗಾಗಿ ಕೆಲವರು ಮಾತನಾಡುತ್ತಿದ್ದಾರೆ. ಅಂಥವರಿಗೆಲ್ಲಒಳ್ಳೆಯದಾಗಲಿ,’’ ಎಂದು ಇದೇ ವೇಳೆ ನುಡಿದಿದ್ದಾರೆ.