ಲವೀನ ಪೆರ್ಮುದೆ
್ಛಛಿಛಿdಚಿa್ಚkvkಞ್ಞಜಃಜಞaಜ್ಝಿ.್ಚಟಞ
ಹಳೆಯ ಕಾಲದಗೃಹೋಪಕರಣಗಳಿಂದ ಆರಂಭಿಸಿ ಹಳೆಯ ನಾಣ್ಯಗಳು , ತಾತ-ಮುತ್ತಾತಂದಿರ ಕಾಲದಲ್ಲಿಪತ್ರಗಳ ಮೂಲಕ ನಡೆಯುತ್ತಿದ್ದ ಆಶಯ ವಿನಿಮಯ, ಸ್ಟಾತ್ರ್ಯಂಪ್ ಗಳು, ಅಂಚೆ ಪತ್ರಗಳು ಇವೆಲ್ಲವನ್ನೂ ಸಂಗ್ರಹಿಸಿಟ್ಟ ಅಪರೂಪದ ಸಂಗ್ರಹಕಾರ ಪೈಕ ಕುಂಞಿಪಾರೆಯ ಹಮೀದ್ .
ಚರಿತ್ರೆ ಓದುವ ವಿದ್ಯಾರ್ಥಿಗಳಿಗೆ, ಸಂಶೋಧಕರಿಗೆ ಉಪಯುಕ್ತವಾಗಬಲ್ಲಪ್ರಾಚ್ಯ ವಸ್ತುಗಳನ್ನು ಸಂಗ್ರಹಿಸಿಟ್ಟ ಇವರು ಮನೆಯ ಒಂದು ಕೊಠಡಿಯನ್ನು ಇದಕ್ಕೆಂದೇ ಮೀಸಲಿಟ್ಟಿದ್ದಾರೆ. ಆ ಕೊಠಡಿಗೆ ತೆರಳಿದರೆ ಇತಿಹಾಸ ಕಣ್ಮುಂದೆ ಬಂದಂತಾಗುತ್ತದೆ. ಇಸ್ಲಾಮಿಕ್ ಧರ್ಮಕ್ಕೆ ಸಂಬಂಧಪಟ್ಟ ಸಂಗ್ರಹ ಅನೇಕವಿದೆ. 1.8 ಸೆಂ.ಮೀ. ಉದ್ದ ಹಾಗೂ 1.5 ಸೆಂ.ಮೀ. ಅಗಲವಿರುವ ಪುಟ್ಟ ಬೆರಳಿನಷ್ಟೇ ಗಾತ್ರವಿರುವ ಜಗತ್ತಿನ ಅತ್ಯಂತ ಸಣ್ಣ ಕುರಾನ್ ನಿಂದ ಆರಂಭಿಸಿ ಭಕ್ತರು ವಿವಿಧ ಕಾಲಗಳಲ್ಲಿಪಾರಾಯಣ ಮಾಡಿದ್ದ ನಾನಾ ಕುರಾನ್ ಗಳು ಇವರ ಸಂಗ್ರಹದಲ್ಲಿವೆ.
ಕೇರಳ ಅನಿವಾಸಿ ಫಿಲಾಟಲಿಕ್ ಆ್ಯಂಡ್ ನ್ಯುಮಿಸ್ಮಾಟಿಕ್ ಅಸೋಸಿಯೇಶನ್ ಮತ್ತು ಕಾನತ್ತೂರು ಫಿಲಾಟಲಿಕ್ ಕ್ಲಬ್ ನ ಸದಸ್ಯರಾಗಿರುವ 45ರ ಹರೆಯದ ಹಮೀದ್ ಅವರ ಪ್ರಾಚ್ಯವಸ್ತು ಸಂಗ್ರಹ ಅಮೂಲ್ಯವಾದುದು.
ಹೈದರಾಬಾದ್ ನ ರಾಜರು 12ನೇ ಶತಮಾನದಲ್ಲಿಜಾರಿಗೆ ತಂದ ಕಲ್ಲಿನ ನಾಣ್ಯಗಳಿಂದ ಆರಂಭಿಸಿ ಕೇಂದ್ರ ಸರಕಾರವು ಕೊನೆಯದಾಗಿ ಹಿಂತೆಗೆದ ನಾಣ್ಯಗಳು ಕೂಡ ಇವರ ಸಂಗ್ರಹದಲ್ಲಿವೆ. ಹಿಂದೆ ರಿಸವ್ ರ್ ಬ್ಯಾಂಕ್ ಗವರ್ನರ್ ಗಳು ಸಹಿ ಹಾಕಿದ ನೋಟುಗಳು, ಟಿಪ್ಪುವಿನ ಕಾಲದ ನಾಣ್ಯಗಳು, ಟಿಪ್ಪುವಿನ ಸೀಲು ಇರುವ ಕಾಪರ್ ಟೋಕನ್ ಗಳ ಸಹಿತ ನಾನಾ ರಾಜರ ಆಡಳಿತದ ಕಾಲದ ಸೀಲು ಇರುವ ಬೆಳ್ಳಿ ನಾಣ್ಯಗಳು ಇವರ ಭಂಡಾರದಲ್ಲಿವೆ.
1943ರ ಒಟ್ಟೆ ಮುಕ್ಕಾಲು, 1950ರ ಒಂದು ಪೈಸೆ, 1949ರ ನೂರು ರೂ.ನ ದೊಡ್ಡ ನೋಟು, ಹಳೆಯ ಎಂಟಾಣೆ, ನಾಲ್ಕಾಣೆಗಳು, ವಿವಿಧ ಕಾಲದ ಸ್ಟಾತ್ರ್ಯಂಪ್ ಪೇಪರ್ ಗಳು, ಮಾತ್ರವಲ್ಲವಿವಿಧ ಕಾಲದ ಮಣ್ಣಿನ ಪಾತ್ರೆಗಳನ್ನು ಸಂಗ್ರಹಿಸಿಟ್ಟಿದ್ದಾರೆ. ಹಳೆಯ ಕ್ಯಾಮೆರಾಗಳು, ಟಿವಿ, ರೇಡಿಯೋ ಸೆಟ್ , ರೇಡಿಯೋಗಳು, ಡಿಜಿಟಲ್ ಉಪಕರಣಗಳ ದೀರ್ಘ ಸಾಲು ಇದೆ.
ಜಗತ್ತಿನ ನಾನಾ ರಾಷ್ಟ್ರಗಳ ಕರೆನ್ಸಿಗಳು, ಅತ್ಯಂತ ದೊಡ್ಡ ಕರೆನ್ಸಿ, ಚಾರಿತ್ರಿಕ ಘಟನೆಗಳಿಗೆ ಸಂಬಂಧಿಸಿದ ಪತ್ರಿಕೆಗಳು, ಬ್ರಿಟೀಷ್ -ಭಾರತ ಆಡಳಿತ ಕಾಲದ ಹಾಗೂ ಆ ಬಳಿಕ ಉಪಯೋಗಿಸುತ್ತಿದ್ದ ಕುತೂಹಲಕಾರಿ ಅಂಚೆ ಕಾರ್ಡ್ ಗಳು ಇವರ ಸಂಗ್ರಹದಲ್ಲಿವೆ. 40 ಸಾವಿರದಷ್ಟು ಪತ್ರಿಕೆಯ ತುಣುಕುಗಳು ಇವರಲ್ಲಿವೆ.
ಮಾಜಿ ರಾಷ್ಟ್ರಪತಿ ಕೆ.ಆರ್ .ನಾರಾಯಣನ್ ಕಳುಹಿಸಿದ ಪತ್ರವನ್ನು ಕಾಪಾಡಿಕೊಂಡು ಬಂದಿದ್ದಾರೆ. ವಿದೇಶದಿಂದ ಬಂದ ಪತ್ರಗಳ ಬೃಹತ್ ಭಂಡಾರವೇ ಇವರಲ್ಲಿದೆ. ಈ ಪತ್ರಗಳನ್ನು ಓದುವಾಗ ಹಳೆಯ ಜನಜೀವನ, ಅವರ ಮನಸ್ಥಿತಿ ಮನವರಿಕೆಯಾಗುವುದರೊಂದಿಗೆ ನಗು, ಬೇಸರ ಮೂಡುವುದು ಸಹಜ.
ಐದು ಪೈಸೆಯ ಸ್ಟಾತ್ರ್ಯಂಪ್ ಅಳವಡಿಸಿದ ಇನ್ ಲ್ಯಾಂಡ್ ಪತ್ರಗಳು, ಯುಎಇ ಆರಂಭದಲ್ಲಿಜಾರಿಗೆ ತಂದ ಒಂದು ದಿರ್ ಹದ ಕರೆನ್ಸಿ, ಯುಎಇ ಚರಿತ್ರೆಗೆ ಸಂಬಂಧಿಸಿದ ಅನೇಕ ದಾಖಲೆಗಳು ಇವರ ಸಂಗ್ರಹದಲ್ಲಿವೆ. ಸ್ಟಾತ್ರ್ಯಂಪ್ , ನಾಣ್ಯಗಳನ್ನು ಕಳೆದ 28 ವರ್ಷಗಳಿಂದ ಸಂಗ್ರಹಿಸುತ್ತಿದ್ದಾರೆ.
ಕೋಟ್
ಗತಕಾಲದ ಕುರಿತು ಮುಂಬರುವ ತಲೆಮಾರಿಗೆ ನೆನಪಿಸಲು ಈ ಪ್ರಾಚ್ಯವಸ್ತುಗಳ ಅಮೂಲ್ಯ ಸಂಗ್ರಹ ನಡೆಸಿದ್ದೇನೆ. ಹಲವರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸರಿಯಾದ ಸ್ಪಾನ್ಸರ್ ಲಭಿಸಿದರೆ ವಸ್ತು ಪ್ರದರ್ಶನ ನಡೆಸುವ ಕುರಿತು ಆಲೋಚಿಸುತ್ತಿದ್ದೇನೆ.
-ಹಮೀದ್ ಕುಂಞಿಪಾರೆ
ಫೊಟೋ: 27ಕೆಎಸ್ ಎಲ್ ನಾಣ್ಯ
ಹಳೆಯ ಕಾಲದ ನಾಣ್ಯಗಳು
ಫೊಟೋ: 27ಕೆಎಸ್ ಎಲ್ ಪತ್ರಗಳು
ಅಂಚೆಪತ್ರಗಳು
ಫೊಟೋ: 27ಕೆಎಸ್ ಎಲ್ ಸ್ಯಾಂಪ್ ಗಳು
ಹಳೆಯ ಸ್ಟಾತ್ರ್ಯಂಪ್ ಗಳು
ಫೊಟೋ: 27ಕೆಎಸ್ ಎಲ್ ಹಮೀದ್
ನಾನಾ ಸಂಗ್ರಹಗಳೊಂದಿಗೆ ಹಮೀದ್

