ಕಳೆಂಜದಲ್ಲಿಹಾಸಿಗೆ ಹಿಡಿದ ರೋಗಿಗೆ ಮಾನವೀಯ ಸ್ಪರ್ಶ ನೀಡಿದ ಬೆಳ್ತಂಗಡಿ ರೆಡ್ ಕ್ರಾಸ್
ವಿಕ ಸುದ್ದಿಲೋಕ ಕೊಕ್ಕಡ
‘ ನೋವಿನಲ್ಲಿನೀ ಒಬ್ಬಂಟಿಯಲ್ಲ , ಜತೆಗೆ ನಾವಿದ್ದೇವೆ’ ಎಂಬ ಘೋಷಣೆಯೊಂದಿಗೆ ತಾಲೂಕಿನಾದ್ಯಂತ ಹಾಸಿಗೆ ಹಿಡಿದಿರುವ ರೋಗಿಗಳನ್ನು ಭೇಟಿ ನೀಡಿ, ಅವರಿಗೆ ಆತ್ಮ ಸ್ಥೈರ್ಯ ಕೊಡುವ, ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಕೆಲಸವನ್ನು ಬೆಳ್ತಂಗಡಿ ರೆಡ್ ಕ್ರಾಸ್ ಸೊಸೈಟಿ ತಂಡ ಹಲವಾರು ವರ್ಷಗಳಿಂದ ಸತತ ನಡೆಸಿಕೊಂಡು ಬರುತ್ತಿದೆ. ಇದರ ಮುಂದುವರಿದ ಭಾಗವಾಗಿ ಕಳೆಂಜ ಗ್ರಾಮದ ರಾಮಣ್ಣ ಗೌಡರ ಮನೆಗೆ ಭೇಟಿ ನೀಡಿತು.
ಈ ಮೊದಲು ಕೇರಳದಲ್ಲಿಮಾತ್ರ ನಡೆಯುತ್ತಿದ್ದ ಈ ಮಾನವೀಯ ಕಾರ್ಯಕ್ರಮವನ್ನು ಬೆಳ್ತಂಗಡಿ ತಾಲೂಕಿಗೆ ಮೊದಲು ಪರಿಚಯಿಸಿದವರು ಬೆಳ್ತಂಗಡಿ ರೆಡ್ ಕ್ರಾಸ್ ಸೊಸೈಟಿ ಅಧ್ಯಕ್ಷ ದ.ಕ ಜಿಲ್ಲಾಸಹಕಾರಿ ಆಸ್ಪತ್ರೆ ಮತ್ತು ವೈದ್ಯಕೀಯ ಶಿಕ್ಷಣ, ಸಂಶೋಧನಾ ಕೇಂದ್ರದ ಅಧ್ಯಕ್ಷ ಹರಿದಾಸ್ ಎಸ್ .ಎಂ.
ತಾಲೂಕಿನ 100 ಕ್ಕೂ ಹೆಚ್ಚು ಹಾಸಿಗೆಯಲ್ಲಿಮಲಗಿಕೊಂಡಿರುವ ರೋಗಿಗಳ ಮನೆಗೆ ವೈದ್ಯಕೀಯ ಚಿಕಿತ್ಸಕರು ಸೇರಿದಂತೆ ಕಲಾವಿದರ ಜತೆಗೆ ಭೇಟಿ ನೀಡಿ ರೋಗಿಗಳು, ಮನೆಯವರ ಜತೆಗೆ ಮಾತುಕತೆ ನಡೆಸಿ ನಂತರ ಒಂದಷ್ಟು ಕಾಲ ಕಲಾವಿದರು ಹಾಡುಗಳ ಜತೆಗೆ ಮನರಂಜನಾ ಕಾರ್ಯಕ್ರಮಗಳನ್ನು ನೀಡಿ ಮುದ ನೀಡುತ್ತಾರೆ. ಜತೆಗೆ ಪ್ರಾಥಮಿಕ ಚಿಕಿತ್ಸೆಗಳನ್ನು ನೀಡುವುದೇ ಈ ಮಾನವೀಯ ಕಾರ್ಯಕ್ರಮದ ಉದ್ದೇಶ.
ಬೆಳ್ತಂಗಡಿ ತಾಲೂಕು ಕಳೆಂಜ ಗ್ರಾಮದ ರಾಮಣ್ಣ ಗೌಡ 26 ವರ್ಷಗಳ ಹಿಂದೆ ಕೃಷಿ ಚಟುವಟಿಕೆಯಲ್ಲಿದ್ದಾಗ ಮರದಿಂದ ಬಿದ್ದು ಬೆನ್ನುಹುರಿಗೆ ಗಾಯವಾಗಿದ್ದು, ಹಾಸಿಗೆಯಲ್ಲಿಮಲಗಿಕೊಂಡೇ ಜೀವನ ಸಾಗಿಸುತ್ತಿದಾರೆ. ಬೆಳ್ತಂಗಡಿ ರೆಡ್ ಕ್ರಾಸ್ ಘಟಕ ಅಧ್ಯಕ್ಷ ಹರಿದಾಸ್ ಎಸ್ .ಎಂ. ಅವರ ತಂಡ ಅವರನ್ನು ಭೇಟಿ ಮಾಡಿ ಸಾಂತ್ವಾನ ಹೇಳಿತು. ರಾಮಣ್ಣ ಗೌಡರ ಜತೆ ಸುಮಾರು ಒಂದು ಗಂಟೆ ಸಮಯ ಮೀಸಲಿಟ್ಟು ಮಾತುಕತೆ ನಡೆಸಲಾಯಿತು. ರಾಮಣ್ಣ ಗೌಡರು ತನ್ನ ನೋವನ್ನು ಹಂಚಿಕೊಂಡರು.
ರೆಡ್ ಕ್ರಾಸ್ ಸೊಸೈಟಿ ಬೆಳ್ತಂಗಡಿ ಘಟಕದ ನಿರ್ದೇಶಕರಾದ ಸುಕನ್ಯಾ ಎಚ್ , ಸುಜೀತ್ ರಾವ್ ಉಜಿರೆ ಇದ್ದರು.
ಫೋಟೋ :27ಕೆಎನ್ ರಾಮಣ್ಣ
(ಬೆಳ್ತಂಗಡಿ ರೆಡ್ ಕ್ರಾಸ್ ಘಟಕದ ಅಧ್ಯಕ್ಷ ಹರಿದಾಸ್ ಎಸ್ .ಎಂ. ನೇತೃತ್ವದ ತಂಡ ಕಳೆಂಜ ರಾಮಣ್ಣ ಗೌಡರನ್ನು ಭೇಟಿ ಮಾಡಿ ಸಾಂತ್ವನ ಹೇಳಿತು.)

