ಅಜ್ಮೇರ್ : ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಎಂದು ಕರೆಯಲಾಗುತ್ತಿದ್ದ ಪಕ್ಷವು , ಈಗ ಮುಸ್ಲಿಂ ಲೀಗ್ ಮಾವೋವಾದಿ ಕಾಂಗ್ರೆಸ್ ಆಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದಾರೆ.
ರಾಜಸ್ಥಾನದ ಕಾರ್ಯಕ್ರಮವೊಂದರಲ್ಲಿಮಾತನಾಡಿದ ಅವರು, ‘‘ಮುಸ್ಲಿಂ ಲೀಗ್ ಭಾರತವನ್ನು ದ್ವೇಷಿಸಿ ಎರಡು ಭಾಗಗಳಾಗಿ ವಿಂಗಡಿಸಿತು. ಈಗ ಕಾಂಗ್ರೆಸ್ ಸಹ ಅದನ್ನೇ ಮಾಡುತ್ತಿದೆ. ಪ್ರಜಾಪ್ರಭುತ್ವದ ಮೇಲಿನ ದ್ವೇಷದಿಂದಾಗಿ ಮಾವೋವಾದಿಗಳು ಸಾಮಾನ್ಯ ಜನರ ಮೇಲೆ ದಾಳಿ ಮಾಡುತ್ತಲೇ ಇರುವಂತೆ, ನಮ್ಮನ್ನು ದೂಷಿಸಲು ಕಾಂಗ್ರೆಸ್ ನವರು ಎಲ್ಲೆಡೆ ಅತಿಕ್ರಮಣ ಮಾಡುತ್ತಿದ್ದಾರೆ,’’ ಎಂದು ಕಿಡಿಕಾರಿದರು.
‘‘ಜಗತ್ತಿನ ಪ್ರಮುಖ ನಾಯಕರು ಎಐ ಶೃಂಗಸಭೆಯಲ್ಲಿಭಾಗವಹಿಸಿದ್ದರು. ಎಐ ತಂತ್ರಜ್ಞಾನ ಸಂಶೋಧನೆ ಮತ್ತು ಅಳವಡಿಕೆಯಲ್ಲಿಭಾರತದ ಪ್ರಯತ್ನವನ್ನು ಮೆಚ್ಚಿದರು. ಈ ಶೃಂಗಸಭೆ ಬಗ್ಗೆ ನಮಗೆಲ್ಲರಿಗೂ ಹೆಮ್ಮೆ ಅನಿಸಿತು. ಆದರೆ ನಿರಂತರ ಸೋಲುಗಳಿಂದ ಹತಾಶಗೊಂಡು ಖಿನ್ನತೆಗೆ ಜಾರಿರುವ ಕಾಂಗ್ರೆಸ್ ತನ್ನ ನಾಟಕದ ಮೂಲಕ ಪ್ರಪಂಚದ ಮುಂದೆ ನಮ್ಮನ್ನು ಅವಮಾನಿಸಿತು. ಅವರು ಪ್ರಪಂಚದ ಮುಂದೆ ಇಡೀ ದೇಶವನ್ನು ದೂಷಿಸಿದರು,’’ ಎಂದು ಮೋದಿ ಹೇಳಿದರು.
‘‘ದೇಶವನ್ನು ಕೆಣಕುವುದು ಮತ್ತು ಸೈನ್ಯವನ್ನು ದುರ್ಬಲಗೊಳಿಸುವುದು ಕಾಂಗ್ರೆಸ್ ನ ಹಳೆಯ ಅಭ್ಯಾಸ. ಇದೇ ಕಾಂಗ್ರೆಸ್ ಆಡಳಿತದಲ್ಲಿನಮ್ಮ ಸಶಸ್ತ್ರ ಪಡೆಗಳಿಗೆ ಸರಿಯಾದ ಶಸ್ತಾ್ರಸ್ತ್ರ ಮತ್ತು ಸಮವಸ್ತ್ರಗಳನ್ನು ನೀಡದೇ ವಂಚನೆ ಮಾಡಲಾಯಿತು. ಅಲ್ಲದೇ ಆಗ ಭಾರತವು ತನ್ನ ರಕ್ಷಣಾ ವಲಯದಲ್ಲಿಭ್ರಷ್ಟಾಚಾರಕ್ಕೆ ಹೆಸರುವಾಸಿಯಾಗಿತ್ತು,’’ ಎಂದು ಪ್ರಧಾನಿ ಟೀಕಿಸಿದರು.

