ವಿಕ ಸುದ್ದಿಲೋಕ ಹನೂರು
ತಾಲೂಕಿನ ಶಿರಗೋಡು ಗ್ರಾಮದ ಲಕ್ಷ್ಮಿ ವೆಂಕಟೇಶ್ವರ ದೇವಾಲಯದಲ್ಲಿಭಾನುವಾರ ಬೆಳಗ್ಗೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿರಥೋತ್ಸವ ವಿಜೃಂಭಣೆಯಿಂದ ಜರುಗಿತು.
ರಥೋತ್ಸವದ ಅಂಗವಾಗಿ ದೇವಾಲಯವನ್ನು ವಿವಿಧ ಫಲ ಪುಷÜ್ಪಗಳಿಂದ ಅಲಂಕಾರಗೊಳಿಸಲಾಗಿತ್ತು. ಬಳಿಕ ದೇವರ ವಿಗ್ರಹವನ್ನು ರಥದಲ್ಲಿಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ದೇವಾಲಯದ ಸುತ್ತ ಪ್ರದಕ್ಷಿಣೆ ಹಾಕಲಾಯಿತು. ಈ ವೇಳೆ ಭಕ್ತಾದಿಗಳು ‘ಗೋವಿಂದ.. ಗೋವಿಂದ.. ನಾಮಸ್ಮರಣೆಯೊಂದಿಗೆ ಮಹಾ ರಥೋತ್ಸವವನ್ನು ಕಣ್ತುಂಬಿಕೊಂಡರು. ರಥಕ್ಕೆ ಹಣ್ಣು , ದವನ ಎಸೆದು ತಮ್ಮ ಹರಕೆ ತೀರಿಸಿದರು.
ಪ್ರಧಾನ ಅರ್ಚಕ ರಾಮಕೃಷÜ್ಣ ಅವರ ನೇತೃತ್ವದಲ್ಲಿಬೆಳಗ್ಗೆಯಿಂದಲೇ ಲಕ್ಷ್ಮಿ ವೆಂಕಟೇಶ್ವರ ಹಾಗೂ ಪದ್ಮಾವತಿಗೆ ವಿಶೇಷÜ ಪೂಜೆ ನಡೆಯಿತು. ಹನೂರು ಸೇರಿದಂತೆ ಲೊಕ್ಕನಹಳ್ಳಿ, ಉದ್ದನೂರು, ಬೆಳ್ತೂರು, ಮಹಾಲಿಂಗನಕಟ್ಟೆ ಹಾಗೂ ಇತರ ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿಭಕ್ತರು ಪಾಲ್ಗೊಂಡಿದ್ದರು.
ಬಿಗಿ ಬಂದೋಬಸ್ ್ತ: ಅಹಿತಕರ ಘಟನೆಗಳು ಸಂಭವಿಸದಂತೆ ಹನೂರು ಪೊಲೀಸರು ಸೂಕ್ತ ಬಂದೋಬಸ್ ್ತ ವ್ಯವಸ್ಥೆ ಕಲ್ಪಿಸಿ ಬಿಗಿ ಪಹರೆ ಕೈಗೊಂಡಿದ್ದರು.
ಅನ್ನದಾಸೋಹ : ರಥೋತ್ಸವದಲ್ಲಿಪಾಲ್ಗೊಂಡ ಭಕ್ತರಿಗೆ ಪ್ರಸಾದ, ಅನ್ನದಾಸೋಹ, ಮಜ್ಜಿಗೆ ಹಾಗೂ ಪಾನಕವನ್ನು ದೇವಾಲಯ ಆಡಳಿತ ಮಂಡಳಿ ವತಿಯಿಂದ ವಿತರಿಸಲಾಯಿತು.
ಯುವ ಮುಖಂಡ ನವನೀತ್ ಗೌಡ, ಅರ್ಚಕರಾದ ವಾಸು, ವಿಷÜು್ಣ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಅಊಓ01ಊಓಖ01
ಪೋಟೊ:01ಹನೂರು ತಾಲೂಕಿನ ಶಿರಗೋಡು ಗ್ರಾಮದ ಲಕ್ಷ್ಮಿ ವೆಂಕಟೇಶ್ವರ ದೇವಾಲಯದಲ್ಲಿಭಾನುವಾರ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿರಥೋತ್ಸವ ಜರುಗಿತು.

