(ವಿಕ ವಿಶೇಷ)
ಖಾಲಿ ಜಾಗಗಳೂ ವ್ಯಸನಿಗಳ ಅಡ್ಡ | ಶಾಲಾ-ಕಾಲೇಜು ಆವರಣಗಳಲ್ಲೂಹೆಂಡಾವರ್ತನೆ!
ಮಲ್ಲಿಕಾರ್ಜುನ ತಳವಾರ ಬೆಳಗಾವಿ
ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿವ್ಯವಸ್ಥಿತಗಾಗಿ ಕುಳಿತು ಮದ್ಯ ಸೇವಿಸಲು ಬಾರ್ ಗಳಿದ್ದರೂ ಸಾರ್ವಜನಿಕ ಜಾಗಗಳಲ್ಲಿಮದ್ಯ ಸೇವನೆ ಹಾಗೂ ಗಾಂಜಾ ಎಳೆತದ ಚಟ ಈಚೆಗೆ ಹೆಚ್ಚಾಗುತ್ತಿದೆ. ಯುವಜನರ ಈ ದುರ್ವರ್ತನೆಗೆ ಆಕ್ರೋಶ ವ್ಯಕ್ತವಾಗುತ್ತಿದೆ.
ಮನೆ ಅಥವಾ ನಿರ್ದಿಷ್ಟ ಸ್ಥಳ ಹೊರತು ಸಾರ್ವಜನಿಕ ಜಾಗಗಳಲ್ಲಿಮದ್ಯ ಸೇವಿಸುವುದು ಅಪರಾಧ. ಈ ಬಗ್ಗೆ ತಿಳಿವಳಿಕೆ ಇದ್ದವರು ಹಾಗೂ ಇಲ್ಲದವರೂ ಕಾನೂನು ಉಲ್ಲಂಘಿಸಿ ಎಲ್ಲೆಂದರಲ್ಲಿಕುಳಿತು ಮದ್ಯ ಸೇವಿಸುತ್ತಿದ್ದಾರೆ. ಮೋಜು-ಮಸ್ತಿಯ ಹೆಸರಿನಲ್ಲಿಅಪಾಯಕ್ಕೆ ದೂಡಬಹುದಾದ ವ್ಯಸನಗಳನ್ನು ನಿಯಂತ್ರಣ ಮಾಡಲಾಗದೇ ಯುವ ಸಮುದಾಯ ಹೀಗೆಲ್ಲವರ್ತಿಸುತ್ತಿರುವುದು ಸೀಮಿತ ಸಿಬ್ಬಂದಿ ಹೊಂದಿರುವ ಪೊಲೀಸ್ ಇಲಾಖೆಗೂ ತಲೆನೋವಾಗಿ ಪರಿಣಮಿಸಿದೆ. ಈ ತೆರನಾದ ವರ್ತನೆಯನ್ನು ಹೆಚ್ಚಾಗಿ ಯುವಜನರು ಹಾಗೂ ವಿದ್ಯಾರ್ಥಿಗಳೇ ಹೊಂದಿರುವುದು ಪಾಲಕ ಸಮುದಾಯವನ್ನು ಆತಂಕಕ್ಕೀಡು ಮಾಡಿದೆ.
ಶಾಲಾ-ಕಾಲೇಜುಗಳನ್ನೂ ಬಿಡುತ್ತಿಲ್ಲ:
ಸಾರ್ವಜನಿಕ ಜಾಗಗಳಲ್ಲಿಅಷ್ಟೇ ಅಲ್ಲದೆ ಶಾಲಾ-ಕಾಲೇಜು ಆವರಣಗಳೂ ಕುಡುಕರ ಅಡ್ಡೆಗಳಾಗುತ್ತಿರುವುದು ಅತ್ಯಂತ ವಿಷಾದನೀಯ. ಅವಧಿ ಮುಗಿದ ನಂತರ ಶಾಲೆ-ಕಾಲೇಜು ಆವರಣಗಳು ಜನಸಂಚಾರವಿಲ್ಲದಂತಾಗುತ್ತವೆ. ಈ ವೇಳೆ ಆವರಣಕ್ಕೆ ಕಾಲಿಡುವ ನಶಾಚರಿಗಳು ಅಲ್ಲೇ ಮದ್ಯ ಸೇವಿಸುತ್ತಾರೆ. ಕೌಂಪೌಂಡ್ ಇಲ್ಲದ, ಗೇಟ್ ಇಲ್ಲದ ಹಾಗೂ ಭದ್ರತಾ ಸಿಬ್ಬಂದಿ ಇಲ್ಲದ ಶಾಲೆ-ಕಾಲೇಜುಗಳನ್ನು ಇವರು ಗುರಿ ಮಾಡಿಕೊಳ್ಳುತ್ತಾರೆ. ಯಾರಾದರೂ ಪ್ರಶ್ನಿಸಿದರೆ ಕುಡಿದ ಮತ್ತಿನಲ್ಲಿಅವರನ್ನೇ ದಬಾಯಿಸುತ್ತಾರೆ.
ಎಲ್ಲೆಂದರಲ್ಲಿಟೆಟ್ರಾ ಪ್ಯಾಕ್ :
ಸಾರ್ವಜನಿಕ ಸ್ಥಳದಲ್ಲಿಮದ್ಯ ಸೇವನೆ ಮಾಡುವುದಷ್ಟೇ ಅಲ್ಲದೆ ಖಾಲಿ ಟೆಟ್ರಾ ಪ್ಯಾಕ್ ಹಾಗೂ ಪ್ಲಾಸ್ಟಿಕ್ ಗ್ಲಾಸ್ , ಕುರುಕಲು ತಿನಿಸಿನ ಖಾಲಿ ಪಾಕೀಟುಗಳನ್ನು ಎಲ್ಲೆಂದರಲ್ಲಿಚೆಲ್ಲುತ್ತಿರುವುದು ಸ್ವಚ್ಛತೆ ಸವಾಲಾಗಿದೆ. ಪ್ಲಾಸ್ಟಿಕ್ ಇಲ್ಲವಾಗಿಸುತ್ತೇವೆ ಎಂದು ಸರಕಾರ ಎಷ್ಟೇ ಎದೆ ತಟ್ಟಿಕೊಂಡರೂ ನಿಯಂತ್ರಣ ಕಷ್ಟವಾಗುತ್ತಿದೆ. ಈ ಮಧ್ಯೆ ಕುಡುಕರ ಅಶಿಸ್ತಿನ ಪರಿಣಾಮ ಪ್ಲಾಸ್ಟಿಕ್ ಎಂಬ ಪೆಡಂಭೂತ ಪರಿಸರ ಸೇರುತ್ತಿದೆ.
ಪ್ರವಾಸಿ ತಾಣಗಳಲ್ಲಿಅಶಿಸ್ತು:
ಪ್ರವಾಸ ಎನ್ನುವುದು ಮುದ ನೀಡುವ ಪ್ರಕ್ರಿಯೆಯಾದರೆ ಮದ್ಯ ಸೇವಿಸುವವರಿಗೆ ಪ್ರವಾಸಿ ತಾಣಗಳೇ ಪಬ್ಲಿಕ್ ಪಾರ್ಟಿ ಮಾಡುವ ಜಾಗಗಳಾಗಿ ಕಾಣುತ್ತಿವೆ. ಬೆಳಗಾವಿ ಜಿಲ್ಲೆಯ ಬಹುತೇಕ ಜಲಪಾತ ಹಾಗೂ ಗುಡ್ಡಗಾಡು ಪ್ರದೇಶದ ಪ್ರೇಕ್ಷಣೀಯ ಸ್ಥಳಗಳಲ್ಲಿಹಾಗೂ ಅಕ್ಕಪಕ್ಕದ ಜಾಗದಲ್ಲಿಖಾಲಿ ಬಾಟಲ್ ಹಾಗೂ ಟೆಟ್ರಾ ಪ್ಯಾಕ್ ರಾಶಿ ಕಾಣುತ್ತದೆ. ಮದ್ಯಪ್ರಿಯರ ಈ ವರ್ತನೆ ಇತರೆ ಪ್ರವಾಸಿಗರಿಗೆ ಇದು ಮುಜುಗರದ ಜತೆಗೆ ಕಿರಿಕಿರಿ ಉಂಟು ಮಾಡುತ್ತಿದೆ. ಅಲ್ಲಿನ ಭದ್ರತಾ ಸಿಬ್ಬಂದಿ ತಿಳಿಹೇಳಿದರೂ ವ್ಯಸನಿಗಳು ಕೇಳುವ ಪರಿಸ್ಥಿತಿಯಲ್ಲಿಇರುವುದಿಲ್ಲ. ಹೀಗಾಗಿ ಕೆಲವೊಮ್ಮೆ ವಾಗ್ವಾದ, ಹೊಡೆದಾಟ ನಡೆದ ಉದಾಹರಣಗಳಿವೆ.
ಹೊಲದ ಬದುವುಗಳಲ್ಲೂಗುಂಪು:
ನಗರ ಹಾಗೂ ಗ್ರಾಮೀಣ ಪ್ರದೇಶಗಳ ಹೊರವಲಯಗಳಲ್ಲಿಕುಡುಕರ ಹಾವಳಿ ಮಿತಿಮೀರಿದೆ. ಗರಿಷ್ಠ ಮಾರಾಟ ದರ (ಎಂಆರ್ ಪಿ) ಅಂಗಡಿಗಳಲ್ಲಿಮದ್ಯ ಮಾರಾಟಕ್ಕೆ ಮಾತ್ರ ಅವಕಾಶವಿದೆ. ಹೀಗಾಗಿ ಅಲ್ಲಿಂದ ಮದ್ಯ ಖರೀದಿಸುವ ಜನರು ಕುಡಿಯಲು ಮಾತ್ರ ಜನಸಂಚಾರ ಕಡಿಮೆ ಇರುವ ಹಾಗೂ ಜನಸಂಚಾರವೇ ಇಲ್ಲದ ಜಾಗಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಹೊಲದ ಬದು, ನಿರ್ಮಾಣ ಹಂತದ ಬಡಾವಣೆಗಳು, ಹಳೆಯ ಕಟ್ಟಡಗಳು, ರಸ್ತೆ ಪಕ್ಕದಿಂದ ಕೊಂಚ ದೂರ ಇರುವ ಜಾಗ, ಸೇತುವೆಗಳು ಹಾಗೂ ಕೆರೆ ದಡಗಳಲ್ಲಿಠಿಕಾಣಿ ಹೂಡುತ್ತಾರೆ.
ಅಪರಾಧ ಚಟುವಟಿಕೆ ಸಾಧ್ಯತೆ:
ಸಾರ್ವಜನಿಕ ಜಾಗಗಳಲ್ಲಿಮದ್ಯ ಸೇವಿಸುವುದೇ ಅಪರಾಧ ಆಗಿರುವಾಗ ಕುಡಿದ ನಂತರವೂ ಕೆಲವೊಮ್ಮೆ ಅಪರಾಧಿಕ ಚಟುವಟಿಕೆಗಳು ಸಂಭವಿಸುತ್ತವೆ. ಕುಡಿದು ವಾಹನ ಓಡಿಸುವುದು, ರಸ್ತೆ ಸಂಚಾರದಲ್ಲಿತಂಟೆ-ತಕರಾರು, ಪರಸ್ಪರ ಗಲಾಟೆ, ವಾಗ್ವಾದಗಳು ನಡೆಯುತ್ತಿವೆ. ನಶೆಯಲ್ಲಿದಾರಿಹೋಕರೊಂದಿಗೆ ಕೆದರಿ ಜಗಳ ಮಾಡುವ ಪ್ರವೃತ್ತಿಯೂ ಕಂಡುಬರುತ್ತಿದೆ. ಕುಡಿಯುವ ಮುನ್ನವೇ ಪೂರ್ವನಿರ್ಧರಿತ ಹಾಗೂ ಸ್ಥಳದಲ್ಲೇ ಉಂಟಾಗುವ ಕೆಲ ವಾದಸರಣಿಗಳು ವಿಕೋಪಕ್ಕೆ ಹೋಗಿ ಪ್ರಾಣಾಘಾತ ಉಂಟು ಮಾಡುವ ಕೃತ್ಯಗಳೂ ನಡೆಯುತ್ತವೆ.
* ಬಾಕ್ಸ್
ಹೆಚ್ಚಬೇಕಿದೆ ಪೊಲೀಸ್ ಬೀಟ್
ರಾತ್ರಿ ಸಮಯದಲ್ಲಿಪೊಲೀಸರು ಬೀಟ್ ವ್ಯವಸ್ಥೆಯಡಿ ಪಬ್ಲಿಕ್ ಡ್ರಿಂಕ್ಸ್ ತಡೆಗೆ ಪ್ರಯತ್ನಿಸುತ್ತಿದ್ದಾರೆ. ಆದರೆ, ಗ್ರಾಮೀಣ ಪ್ರದೇಶಗಳಲ್ಲಿಬೀಟ್ ವ್ಯವಸ್ಥೆ ಪರಿಣಾಮಕಾರಿಯಾಗಿಲ್ಲ. ಹೀಗಾಗಿ ಎಲ್ಲೆಂದರಲ್ಲಿಮದ್ಯ ಸೇವನೆ ನಡೆದಿದೆ. ಕುಡಿದು ಅಸಭ್ಯವಾಗಿ ವರ್ತಿಸುವುದು, ಕಿರುಚಾಡುವುದು, ಜನರಿಗೆ ಕಿರಿಕ್ ಮಾಡುವ ಪ್ರವೃತ್ತಿ ಹೆಚ್ಚುತ್ತಿದೆ. ಹಾಗಾಗಿ, ಗ್ರಾಮೀಣ ಭಾಗದಲ್ಲಿಕಡ್ಡಾಯವಾಗಿ ಬೀಟ್ ವ್ಯವಸ್ಥೆ ಜಾರಿಗೆ ತರಬೇಕು ಎನ್ನುವುದು ಪ್ರಜ್ಞಾವಂತರ ಆಗ್ರಹ.
* ಕ್ವೋಟ್
ಸಾರ್ವಜನಿಕ ಸ್ಥಳಗಳಲ್ಲಿಮದ್ಯಪಾನ ಮಾಡುವವರ ವಿರುದ್ಧ ವಿಶೇಷ ಕಾರ್ಯಾಚರಣೆ ಮೂಲಕ ಕ್ರಮ ಜರುಗಿಸಲಾಗುತ್ತಿದೆ. ನಾಗರಿಕರ, ಜವಾಬ್ದಾರಿ ಮತ್ತು ಶಿಸ್ತು ಹೆಚ್ಚುತ್ತದೆ. ಅನೇಕ ಸಭೆಗಳಲ್ಲಿಹಿರಿಯ ನಾಗರಿಕರು, ವಿಶೇಷವಾಗಿ ಮಹಿಳೆಯರು, ಈ ಸಮಸ್ಯೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಅವರ ಭದ್ರತೆಗಾಗಿ ಮುಂದೆಯೂ ಇಂತಹ ಕಾರ್ಯಾಚರಣೆ ನಡೆಯಲಿವೆ.
-ಭೂಷಣ ಬೋರಸೆ | ನಗರ ಪೊಲೀಸ್ ಆಯುಕ್ತರು, ಬೆಳಗಾವಿ
(ಎಐ ಚಿತ್ರ)

