ಸವಾಲುಗಳೇ ಇಂದಿನ ಯಶಸ್ಸಿಗೆ ಭದ್ರ ಬುನಾದಿ

Contributed byshekargraphics1@gmail.com|Vijaya Karnataka

ISRO scientist Dr. R. Srinivas stated that the challenges faced by the Indian Space Research Organisation are the foundation for its current global success. He recalled ISRO's journey from a small church in Kerala to achievements like Chandrayaan and Mangalyaan. Dr. Srinivas highlighted the hard work of scientists transporting rocket parts on cycles and bullock carts.

challenges are the solid foundation of todays success isro scientist dr r srinivas

ಇಸ್ರೋ ವಿಜ್ಞಾನಿ ಡಾ. ಆರ್ . ಶ್ರೀನಿವಾಸ್ ಸ್ಫೂರ್ತಿದಾಯಕ ನುಡಿ

ವಿಕ ಸುದ್ದಿಲೋಕ ಹುಳಿಯಾರು

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅತ್ಯಂತ ಕಠಿಣ ಹಾದಿಯನ್ನು ದಾಟಿ ಇಂದು ಜಾಗತಿಕ ಮಟ್ಟದಲ್ಲಿಅಗ್ರಗಣ್ಯ ಸಂಸ್ಥೆಯಾಗಿ ಬೆಳೆದು ಬಂದಿದೆ. ನಮಗೆ ಎದುರಾಗಿದ್ದ ಸವಾಲುಗಳೇ ಇಂದಿನ ಯಶಸ್ಸಿಗೆ ಭದ್ರ ಬುನಾದಿಯಾಗಿದೆ ಎಂದು ಹೈದರಾಬಾದಿನ ಇಸ್ರೋ ವಿಜ್ಞಾನಿ ಡಾ. ಆರ್ . ಶ್ರೀನಿವಾಸ್ ಹೇಳಿದ್ದಾರೆ.

ಹೋಬಳಿಯ ದೊಡ್ಡಬಿದರೆಯ ಜೆಸಿಎಂ ಇಂಟರ್ ನ್ಯಾಷನಲ್ ಶಾಲೆಯಲ್ಲಿರಾಷ್ಟ್ರೀಯ ವಿಜ್ಞಾನ ದಿನಾಚರಣೆ ಪ್ರಯುಕ್ತ ತಾರಾ ಫೌಂಡೇಶನ್ ನಿಂದ ಹಮ್ಮಿಕೊಂಡಿದ್ದ ಬಾಹ್ಯಾಕಾಶ ವಿಜ್ಞಾನ ಜಾಗೃತಿ ಕಾರ ್ಯಕ್ರಮಕ್ಕೆ ಚಾಲನೆ ನೀಡಿದ ಅವರು, ಶಾಲೆಯಲ್ಲಿಆಯೋಜಿಸಿದ್ದ ವಿಜ್ಞಾನ ಪ್ರದರ್ಶನ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ವೇಳೆ ವಿದ್ಯಾರ್ಥಿಗಳಿಗೆ ವೈಜ್ಞಾನಿಕ ಪ್ರೇರಣೆಯ ಮಾತುಗಳನ್ನಾಡಿದ ಅವರು, 1963ರಲ್ಲಿಕೇರಳದ ತುಂಬಾದಲ್ಲಿರುವ ಒಂದು ಸಣ್ಣ ಚರ್ಚ್ನಲ್ಲಿಆರಂಭವಾದ ಭಾರತದ ಬಾಹ್ಯಾಕಾಶ ಪಯಣ, ಇಂದು ಚಂದ್ರಯಾನ ಮತ್ತು ಮಂಗಳಯಾನದಂತಹ ಬೃಹತ್ ಸಾಧನೆಗಳನ್ನು ಮಾಡಿದೆ ಎಂದು ಹೆಮ್ಮೆಯಿಂದ ಸ್ಮರಿಸಿದರು. ಆರಂಭದಲ್ಲಿವಿಜ್ಞಾನಿಗಳು ರಾಕೆಟ್ ಬಿಡಿಭಾಗಗಳನ್ನು ಸೈಕಲ್ ಮತ್ತು ಎತ್ತಿನ ಬಂಡಿಗಳ ಮೇಲೆ ಸಾಗಿಸುತ್ತಿದ್ದ ಶ್ರಮವನ್ನು ಸ್ಮರಿಸಿದ ಅವರು, ಅಂದಿನ ಆ ಸವಾಲುಗಳೇ ಇಂದಿನ ಜಾಗತಿಕ ಯಶಸ್ಸಿಗೆ ಭದ್ರ ಬುನಾದಿಯಾಗಿವೆ ಎಂದರು.

ರಾಕೆಟ್ ಗಳು ಭೂಮಿಯಿಂದ ಉಪಗ್ರಹಗಳನ್ನು ನಿಗದಿತ ಕಕ್ಷೆಗೆ ತಲುಪಿಸಲು ಸಾರಿಗೆ ವಾಹನಗಳಂತೆ ಹೇಗೆ ಕೆಲಸ ಮಾಡುತ್ತವೆ ಎಂಬ ಬಗ್ಗೆ ಸರಳವಾಗಿ ವಿವರಿಸಿದ ಅವರು, ವಿವಿಧ ಮಾದರಿಯ ರಾಕೆಟ್ ಉಡಾವಣೆ, ಸ್ಯಾಟಲೈಟ್ ಅಪ್ಲಿಕೇಶನ್ ಸೆಂಟರ್ ನ ಕಾರ ್ಯವೈಖರಿ ಹಾಗೂ ರಿಮೋಟ್ ಸೆನ್ಸಿಂಗ್ ಉಪಗ್ರಹಗಳ ಮೂಲಕ ಸಿಗುವ ಹವಾಮಾನ ವರದಿ ಮತ್ತು ಸಂವಹನ ಸೇವೆಗಳ ಪ್ರಾಮುಖ್ಯತೆಯನ್ನು ಮನವರಿಕೆ ಮಾಡಿಕೊಟ್ಟರು.

ಸ್ಟೂಡೆಂಟ್ ಔಟ್ ರೀಚ್ ಯೋಜನೆಗಳ ಬಗ್ಗೆ ಮಾಹಿತಿ ನೀಡಿದ ಅವರು, ಭವಿಷ್ಯದ ವಿಜ್ಞಾನಿಗಳಾಗಲು ಇಂದಿನಿಂದಲೇ ಕುತೂಹಲ ಮತ್ತು ಸಂಶೋಧನಾ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದು ಕರೆ ಆರ್ . ಶ್ರೀನಿವಾಸ್ ಕರೆ ನೀಡಿದರು.

ತಾರಾ ಫೌಂಡೇಶನ್ ನ ವಿಶ್ವೇಶ್ವರಯ್ಯ ಮಾತನಾಡಿ, ಕೇವಲ ಮಾಹಿತಿ ಸಂಗ್ರಹಣೆಗಿಂತ ಅದನ್ನು ಜ್ಞಾನವಾಗಿ ಪರಿವರ್ತಿಸಿ ಪ್ರಬುದ್ಧತೆ ಸಾಧಿಸುವ ಮೂಲಕ ‘ಜೀನಿಯಸ್ ’ ಆಗಿ ರೂಪುಗೊಳ್ಳಬೇಕು. ನಮ್ಮ ರಕ್ತದಲ್ಲೇ ಇರುವ ಜ್ಞಾನದ ಶಕ್ತಿಯಿಂದಾಗಿ ಇಂದು ಜಗತ್ತಿನ ಪ್ರತಿಷ್ಠಿತ ಸಂಸ್ಥೆಗಳಲ್ಲಿಭಾರತೀಯರೇ ವಿಜ್ಞಾನಿಗಳಾಗಿ, ಪ್ರೊಫೆಸರ್ ಗಳಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.

ಸಂಸ್ಥೆಯ ಅಧ್ಯಕ್ಷರಾದ ಜೆ.ಸಿ. ಮಾಧುಸ್ವಾಮಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿವಿದ್ಯಾರ್ಥಿಗಳಿಗಾಗಿ ರಂಗೋಲಿ ಸ್ಪರ್ಧೆ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿತಾರಾ ಫೌಂಡೇಶನ್ ನ ಸುರೇಶ್ , ಬಸವರಾಜು, ಜೆಸಿಎಂ ಇಂಟರ್ ನ್ಯಾಷನಲ್ ಸ್ಕೂಲ್ ಮುಖ್ಯಸ್ಥ ನಿರಂಜನ ಆರಾಧ್ಯ, ಪ್ರಿನ್ಸಿಪಾಲ್ ರಘು, ಕಾಡಶೆಟ್ಟಿಹಳ್ಳಿ ಸತೀಶ್ , ತಾಲೂಕು ಪಂಚಾಯಿತಿ ಮಾಜಿ ಸದಸ್ಯ ವಸಂತ್ ಕುಮಾರ್ , ಪಟ್ಟಣ ಪಂಚಾಯಿತಿ ಸದಸ್ಯೆ ಬಿ.ಬಿ. ಫಾತಿಮಾ ಸೇರಿದಂತೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿಭಾಗವಹಿಸಿದ್ದರು.

ಪೋಟೋ 01 ಹೆಚ್ ಯು ಎಲ್ ಇಸ್ರೋ ಶ್ರೀನಿವಾಸ್ : ಹೋಬಳಿಯ ದೊಡ್ಡಬಿದರೆಯ ಜೆಸಿಎಂ ಇಂಟರ್ ನ್ಯಾಷನಲ್ ಶಾಲೆಯಲ್ಲಿರಾಷ್ಟ್ರೀಯ ವಿಜ್ಞಾನ ದಿನಾಚರಣೆಯಲ್ಲಿಪಾಲ್ಗೊಂಡಿದ್ದ ಹೈದರಾಬಾದಿನ ಇಸ್ರೋ ವಿಜ್ಞಾನಿ ಡಾ. ಆರ್ . ಶ್ರೀನಿವಾಸ್ ಅವರನ್ನು ಶಾಲೆಯಿಂದ ಸನ್ಮಾನಿಸಲಾಯಿತು.

ಓದಲೇ ಬೇಕಾದ ಸುದ್ದಿ