ಬದಿಯಡ್ಕ : ಕಾಶ್ಮೀರದಿಂದ ಕನ್ಯಾಕುಮಾರಿಯ ತನಕ ಸಂಚರಿಸುವ ರಾಮನವಮಿ ರಥಯಾತ್ರೆ ಮಂಗಳವಾರ ಬೆಳಗ್ಗೆ ಬದಿಯಡ್ಕಕ್ಕೆ ಆಗಮಿಸಿದ್ದು ಹಾರಾರ್ಪಣೆ ಮಾಡಿ ಬರಮಾಡಿಕೊಳ್ಳಲಾಯಿತು. ಎಂ. ಸುಧಾಮ ಗೋಸಾಡ ಸ್ವಾಗತಿಸಿದರು. ರಥಯಾತ್ರೆಯ ಧ್ಯೇಯೋದ್ದೇಶದ ಬಗ್ಗೆ ರವೀಶ ತಂತ್ರಿ ಕುಂಟಾರು ದಿಕ್ಸೂಚಿ ಭಾಷಣವನ್ನು ಮಾಡಿದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ., ಸದಸ್ಯ ಬಾಲಕೃಷ್ಣ ಶೆಟ್ಟಿ ಕೆ., ಪ್ರಮುಖರಾದ ಉದನೇಶ್ವರ ಬದಿಯಡ್ಕ, ನಾರಾಯಣ ಭಟ್ ಮೈರ್ಕಳ, ಆನಂದ ಪೆರಡಾಲ, ಗಂಗಾಧರ ಪಳ್ಳತ್ತಡ್ಕ ಮತ್ತಿತರರು ಉಪಸ್ಥಿತರಿದ್ದರು. ಮಹೇಶ್ ವಳಕುಂಜ ವಂದಿಸಿದರು.
ಚಿತ್ರ: 03 ಬಿಎ ರಥ

