ಕಾಸರಗೋಡು: ಜಿಲ್ಲಾಯೋಜನಾ ಸಮಿತಿ ಸಭಾಂಗಣದಲ್ಲಿಮಂಗಳವಾರ ನಡೆದ ಜಿಲ್ಲಾಯೋಜನಾ ಸಮಿತಿ ಸಭೆಯಲ್ಲಿ38 ಸ್ಥಳೀಯಾಡಳಿತ ಸಂಸ್ಥೆಗಳ 2026-27ನೇ ವಾರ್ಷಿಕ ಯೋಜನೆಗಳಿಗೆ ಅಂಗೀಕಾರ ನೀಡಲಾಯಿತು.
ಜಿಲ್ಲಾಯೋಜನಾ ಸಮಿತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿಅಧ್ಯಕ್ಷತೆ ವಹಿಸಿದ ಜಿಲ್ಲಾಪಂಚಾಯಿತಿ ಅಧ್ಯಕ್ಷ ಸಾಬು ಅಬ್ರಹಾಂ ಸ್ಥಳೀಯ ಆರ್ಥಿಕ ಅಭಿವೃದ್ಧಿ ಸೇರಿದಂತೆ ಅಗತ್ಯ ಯೋಜನೆಗಳಿಗೆ ಅಂಗೀಕಾರ ನೀಡಿದರು.
ಸಮಾರಂಭದಲ್ಲಿ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಕೆ.ಇಂಬಶೇಖರ್ ಅವರನ್ನು ಬೀಳ್ಕೊಡಲಾಯಿತು. ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್ ಮಾತನಾಡಿ, ಸ್ಥಳೀಯಾಡಳಿತ ಸಂಸ್ಥೆಗಳ ಕಾರ ್ಯ ನಿರ್ವಹಣೆಗೆ ಜಿಲ್ಲಾಡಳಿತದ ಸಂಪೂರ್ಣ ಬೆಂಬಲ ಇರುತ್ತದೆ ಎಂದು ಅವರು ಹೇಳಿದರು. ಎಲ್ಲರ ಅಭಿಪ್ರಾಯಗಳನ್ನು ಆಲಿಸಿ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಂಡ ಬಳಿಕ ಮುಂದಿನ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಜಿಲ್ಲಾಯೋಜನಾ ಅಧಿಕಾರಿ ಟಿ.ರಾಜೇಶ್ ವರದಿ ಮಂಡಿಸಿದರು. 38 ಸ್ಥಳೀಯಾಡಳಿತ ಸಂಸ್ಥೆಗಳ ವಾರ್ಷಿಕ ಯೋಜನೆಗಳಿಗೆ ಅಂಗೀಕಾರ ನೀಡಲಾಯಿತು. ಕಾಸರಗೋಡು ಜಿಲ್ಲಾಪಂಚಾಯಿತಿ, ಪಿಲಿಕೋಡ್ ಪಂಚಾಯಿತಿ, ಕಾಞಂಗಾಡ್ ಬ್ಲಾಕ್ ಪಂಚಾಯಿತಿ, ಮಧೂರು ಪಂಚಾಯಿತಿ ಮತ್ತು ವಲಿಯಪರಂಬ ಪಂಚಾಯಿತಿಯ ವಾರ್ಷಿಕ ಯೋಜನೆಗಳಲ್ಲಿನ ತಿದ್ದುಪಡಿಗಳನ್ನು ಸಮಿತಿಯು ಪರಿಗಣಿಸಿ ಅನುಮೋದಿಸಿತು. ಅಜಾನೂರು ಪಂಚಾಯಿತಿ, ಮಂಜೇಶ್ವರ ಪಂಚಾಯಿತಿ ಮತ್ತು ವೆಸ್ಟ್ ಎಳೇರಿ ಪಂಚಾಯಿತಿನ ಆರೋಗ್ಯ ಅನುದಾನ ಯೋಜನೆಗಳಿಗೆ ಅಂಗೀಕಾರ ನೀಡಲಾಯಿತು.
ಚಿತ್ರ: 3ಕೆಎಸ್ ಎಲ್ ಸಭೆ-ಜಿಲ್ಲಾಯೋಜನಾ ಸಮಿತಿ ಸಭೆ

