*ಡ್ರೋನ್ ಮೂಲಕ ಬಾಳæ ಪæäೕಷಣೆ ಮಡಿಕೈ ತೋಟದಲ್ಲಿಡ್ರೋನ್ ಮೂಲಕ ಪರೀಕ್ಷಾರ್ಥ ಗೊಬ್ಬರ ಪ್ರಯೋಗ

Contributed bycrastalp19@gmail.com|Vijaya Karnataka

ಮಡಿಕೈ ಬಾಳೆ ತೋಟದಲ್ಲಿ ಡ್ರೋನ್‌ ಮೂಲಕ ಗೊಬ್ಬರ ಪ್ರಯೋಗ ಯಶಸ್ವಿಯಾಗಿದೆ. ಮೂವರು ಕಾರ್ಮಿಕರ ಒಂದು ದಿನದ ಕೆಲಸವನ್ನು ಡ್ರೋನ್‌ ಕೇವಲ ಇಪ್ಪತ್ತು ನಿಮಿಷಗಳಲ್ಲಿ ಪೂರ್ಣಗೊಳಿಸಿದೆ. ಇದು ಸಮಯ ಮತ್ತು ಶ್ರಮವನ್ನು ಉಳಿಸುತ್ತದೆ. ಕೃಷಿ ವಿಜ್ಞಾನ ಕೇಂದ್ರವು ಈ ಹೊಸ ತಂತ್ರಜ್ಞಾನವನ್ನು ರೈತರಿಗೆ ಪರಿಚಯಿಸಿದೆ. ಭತ್ತದ ಗದ್ದೆಗಳಲ್ಲೂ ಈ ಹಿಂದೆ ಡ್ರೋನ್‌ ಬಳಸಲಾಗಿತ್ತು. ಇದು ಕೃಷಿಯಲ್ಲಿ ಉತ್ಪಾದನಾ ದಕ್ಷತೆ ಹೆಚ್ಚಿಸಲು ಸಹಕಾರಿ.

successful fertilizer experiment in banana plantation using drone technology

ಕಾಸರಗೋಡು: ಮೂವರು ಕಾರ್ಮಿಕರು ಒಂದು ದಿನಪೂರ್ತಿ ಮಾಡಬೇಕಾದ ಕೆಲಸವನ್ನು ಡ್ರೋನ್ ಮೂಲಕ ಕೇವಲ ಇಪ್ಪತ್ತು ನಿಮಿಷಗಳಲ್ಲಿ ಕೆಲಸ ಮುಗಿಸಬಹುದಾಗಿದೆ. ಮಡಿಕೈಯ ಬಾಳೆತೋಟದಲ್ಲಿ ಜಿಲ್ಲಾ ಕೃಷಿವಿಜ್ಞಾನ ಕೇಂದ್ರ ಪರೀಕ್ಷಣಾರ್ಥ ನಡೆಸಿದ ಗೊಬ್ಬರ ಪ್ರಯೋಗ ಕೃಷಿಕರಲ್ಲಿನೂತನ ಅರಿವು, ಕುತೂಹಲ ಮೂಡಿಸಿತು. ಬೆಳೆ ಹೆಚ್ಚಳಕ್ಕಾಗಿ ಉಪಯೋಗಿಸುವ ಗೊಬ್ಬರ ಮಿಶ್ರಣವನ್ನು ಪರೀಕ್ಷಣಾರ್ಥ ಡ್ರೋನ್ ಮೂಲಕ ಪ್ರಯೋಗಿಸಲಾಯಿತು.

ಕೇರಳ ಕೃಷಿ ವಿಶ್ವವಿದ್ಯಾಲಯವು ಬನಾನ ಸಂಪೂರ್ಣ ಮಲ್ಟಿಪ್ಲಸ್ ಎಂಬ ಮಿಶ್ರಣವನ್ನು ಅಭಿವೃದ್ಧಿಪಡಿಸಿದೆ. ಬಾಳೆನೆಟ್ಟು ದ್ವಿತೀಯ ತಿಂಗಳಿನಿಂದ ಎರಡು ತಿಂಗಳ ಕಾಲಾವಧಿಯಲ್ಲಿಮಿಶ್ರಣವನ್ನು ಎಲೆಗಳಿಗೆ ಸಿಂಪಡಿಸಬೇಕು ಎಂದು ಕೃಷಿ ವಿಶ್ವವಿದ್ಯಾಲಯ ನಿರ್ದೇಶಿಸುತ್ತದೆ. ಪೋಷಕಾಂಶಗಳ ಕೊರತೆ ಕಾರಣ ಬಾಳೆ ಎಲೆಗಳು ಸುರುಟುವುದು ಮೊದಲಾದವುಗಳನ್ನು ಪ್ರತಿರೋಧಿಸಲು ಇದರಿಂದ ಸಾಧ್ಯವಾಗಲಿದೆ.

ಸಾಧಾರಣವಾಗಿ ಒಂದು ಎಕರೆ ತೋಟದಲ್ಲಿ ಗೊಬ್ಬರ ಪ್ರಯೋಗಿಸಲು 250ರಿಂದ 300 ಲೀಟರ್ ನಷ್ಟು ನೀರು ಬೇಕಾಗುತ್ತದೆ.

ಡ್ರೋನ್ ಮೂಲಕವಾದರೆ ಕೇವಲ 25 ಲೀಟರ್ ನೀರು ಸಾಕಾಗುತ್ತದೆ. ಒಂದು ಎಕರೆ ತೋಟದಲ್ಲಿಬಾಳೆಗಳೆಡೆಯಿಂದ ನಡೆದು ಗೊಬ್ಬರ ಪ್ರಯೋಗಿಸಲು ಮೂವರು ಕಾರ್ಮಿಕರ ಒಂದು ದಿನದ ದುಡಿಮೆಯು ಅನಿವಾರ್ಯವಾಗಿದೆ. ಆದರೆ ಡ್ರೋನ್ ಮೂಲಕ ಹದಿನೈದರಿಂದ ಇಪ್ಪತ್ತು ನಿಮಿಷಗಳೊಳಗೆ ಪೂರ್ತಿಗೊಳಿಸಲು ಸಾಧ್ಯವಾಗುತ್ತದೆ.

ಡ್ರೋನ್ ತಂತ್ರಜ್ಞಾನವನ್ನು ಪ್ರೋತ್ಸಾಹಿಸುವುದರ ಅಂಗವಾಗಿ ಐಸಿಸಿಆರ್ -ಸಿಪಿಸಿಆರ್ ಐಯ ಅಧೀನದಲ್ಲಿಕಾರಾರ ಯಚರಿಸುತ್ತಿರುವ ಕೃಷಿ ವಿಜ್ಞಾನ ಕೇಂದ್ರ(ಕೆವಿಕೆ) ಕೃಷಿಕರೊಂದಿಗೆ ನೂತನ ಕೃಷಿ ಆಶಯಗಳನ್ನು ಹಂಚಿಕೊಳ್ಳುತ್ತಿದೆ. ಮೊದಲು ಜಿಲ್ಲೆಯ ಭತ್ತದ ಗದ್ದೆಗಳಲ್ಲಿಡ್ರೋನ್ ತಂತ್ರಜ್ಞಾನ ಉಪಯೋಗಿಸಿ ಪರೀಕ್ಷಣಾ ಕೀಟನಾಶಕ ಪ್ರಯೋಗ ನಡೆಸಲಾಗಿತ್ತು.ಅಡಕೆ ತೋಟಗಳಲ್ಲಿಅಪಾರವಾಗಿ ಕಂಡುಬರುವ ಎಲೆಚುಕ್ಕೆ ರೋಗ ಪ್ರತಿರೋಧಕ್ಕೆ ಕೃಷಿ ವಿಜ್ಞಾನ ಕೇಂದ್ರವು ತಯಾರಿ ನಡೆಸುತ್ತಿದೆ.

ನೌಕರರ ಕೊರತೆ ಎದುರಿಸುತ್ತಿರುವ ಕೃಷಿ ವಲಯದಲ್ಲಿ ಸಮಯ,ಲಾಭ ಖಚಿತ ಪಡಿಸಿಕೊಳ್ಳಲು ನೂತನ ತಂತ್ರಜ್ಞಾನಗಳ ಮುನ್ನಡೆಯು ಅಗತ್ಯವಾಗಿದೆ ಎಂದು ಕೆವಿಕೆಯ ಹಾರ್ಟಿಕಲ್ಚರ್ ವಿಭಾಗ ಸಬ್ ಜೆಟಿಕ್ ಮ್ಯಾಟರ್ ತಜ್ಞ ಡಾ.ಬೆಂಜಮಿನ್ ಮ್ಯಾಥ್ಯೂ ಹೇಳಿದ್ದಾರೆ. ಉತ್ಪದನಾ ದಕ್ಷತೆಯೊಂದಿಗೆ ಉತ್ಪಾದನಾ ಖರ್ಚು ಕಡಿಮೆ ಮಾಡಲು ನೂತನ ತಂತ್ರಜ್ಞಾನಗಳು ಅನಿವಾರ ್ಯ ಎಂದು ಕೆವಿಕೆ ಮುಖ್ಯಸ್ಥ ಡಾ.ಟಿ.ಎಸ್ .ಮನೋಜ್ ಕುಮಾರ್ ಹೇಳಿದ್ದಾರೆ.

ಮಡಿಕೈ ಮಣಕ್ಕಡವ್ ನಲ್ಲಿನಡೆದ ಪರೀಕ್ಷಣಾರ್ಥ ಗೊಬ್ಬರ ಪ್ರಯೋಗವನ್ನು ಪಂಚಾಯಿತಿ ಅಧ್ಯಕ್ಷ ಪಿ. ಪ್ರಕಾಶನ್ ಉದ್ಘಾಟಿಸಿದರು.ಮಡಿಕೈ ಕೃಷಿ ಅಧಿಕಾರಿ ಪ್ರಮೋದ್ , ಕೆವಿಕೆ ವಿಜ್ಞಾನಿಗಳು, ತಾಂತ್ರಿಕ ತಜ್ಞರು ನೇತೃತ್ವ ವಹಿಸಿದ್ದರು.

.....

ಚಿತ್ರ: 3ಕೆಎಸ್ ಎಲ್ ಮಡಿಕೈ-

ಮಡಿಕೈಯಲ್ಲಿಡ್ರೋನ್ ಉಪಯೋಗಿಸಿ ಪರೀಕ್ಷಾರ್ಥ ಗೊಬ್ಬರ ಪ್ರಯೋಗವನ್ನು ನಡೆಸಲಾಯಿತು.