ಚಿತ್ರ:1-3-ಬಿಡಿಆರ್ 7
ಬೀದರ್ ಹೊರವಲಯದ ಭಾಲ್ಕಿ ರಸ್ತೆಯಲ್ಲಿನ ಜಗದ್ಗುರು ಪಂಚಾಚಾಧಿರ್ಯರ ಪುಣ್ಯಾಶ್ರಮದಲ್ಲಿಭಾನುವಾರ ಜಗದ್ಗುರು ರೇಣುಕಾಚಾರ್ಯರ ಜಯಂತಿ ಆಧಿಚಧಿರಿಧಿಸಧಿಲಾಧಿಯಿಧಿತು.
ರೇಣುಕಾಚಾರ್ಯರ ರುದ್ರಾಭಿಷೇಕ
ಬೀದರ್ : ನಗರ ಹೊರವಲಯದಲ್ಲಿರುವ ಬೀದರ್ -ಭಾಲ್ಕಿ ರಸ್ತೆಯಲ್ಲಿನ ಜಗದ್ಗುರು ಪಂಚಾಚಾರ್ಯ ಪುಣ್ಯಾಶ್ರಮದಲ್ಲಿಭಾನುವಾರ ಜಗದ್ಗುರು ರೇಣುಕಾಚಾರ್ಯರ ಜಯಂತಿ ಕಾರ್ಯಕ್ರಮ ಜರುಗಿತು.
ಬೆಳಗ್ಗೆ 7ಕ್ಕೆ ಜಗದ್ಗುರು ರೇಣುಕಾಚಾರ್ಯರ ರುದ್ರಾಭಿಷೇಕ ಜರುಗಿತು. ಯರನಳ್ಳಿಯ ವೇದಮೂರ್ತಿ ಶಿವಕುಮಾರ ಸ್ವಾಮಿ ಅವರು ರುದ್ರಾಭಿಷೇಕ ನಡೆಸಿಕೊಟ್ಟರು. ಶ್ರೀ ರೇಣುಕ ಮಹೇಶ್ವರ ಪತ್ತಿನ ಸೌಹಾರ್ದ ಸಹಕಾರಿಯ ಉಪಾಧ್ಯಕ್ಷ ಶ್ರೀಕಾಂತ ಸ್ವಾಮಿ ಸೋಲಾಪುರ ಸಹಸ್ರ ನಾಮಾವಳಿ ಪಠಿಸಿದರು. ಡಾಕುಳಗಿ ಧಿಶ್ರೀ ಮಠದ ಪೂಜ್ಯ ಚನ್ನಬಸವಾನಂದ ಸ್ವಾಮೀಜಿ ಸಾನ್ನಿಧ್ಯವಹಿಸಿ ಮಾತನಾಡಿ, ಜಗದ್ಗುರು ರೇಣುಕಾಚಾರ್ಯರು ಜಾತಿ, ಮತ, ಪಂಥ ಬೇಧಗಳನ್ನು ಮರೆತು ಎಲ್ಲಧರ್ಮೀಯರಿಗೆ ಆದಿ ಗುರುವಾಗಿರುವರು ಎಂದರು.
ಶ್ರೀ ಜಗದ್ಗುರು ಪಂಚಾಚಾರ್ಯ ಪುಣಾಶ್ರಮದ ಸಂಚಾಲಕರಾದ ವೇದಮೂರ್ತಿ ಷಣ್ಮುಖಯ್ಯ ಸ್ವಾಮಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ಶಿವಶರಣಪ್ಪ ವಾಲಿ ಮಾತನಾಡಿದರು.
ಶ್ರೀ ರೇಣುಕ ಮಹೇಶ್ವರ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತದ ಅಧ್ಯಕ್ಷ ಮಹೇಶ್ವರಸ್ವಾಮಿ, ನಿರ್ದೇಶಕರಾದ ಕಾರ್ತಿಕಸ್ವಾಮಿ ಮಠಪತಿ, ಪತ್ರಕರ್ತ ಶಿವಕುಮಾರಸ್ವಾಮಿ, ಪ್ರಮುಖರಾದ ಸಂಗಮೇಶ ಬಿರಾದಾರ, ನಾಗಯ್ಯಸ್ವಾಮಿ ಎಕಲರ ಇಧಿದ್ದಧಿರು.

