ಕಲಬುರಗಿ ನಿವಾಸಿಗಳ ನೆರವಿಗೆ ಸಹಾಯವಾಣಿ

Contributed bybhrahmanand.arali@timesgroup.com|Vijaya Karnataka

Kalaburagi district administration has launched emergency helplines for its residents caught in the ongoing conflict in the Middle East and other war-torn nations. Families of those affected can contact the provided numbers to share information. The district administration assures guidance and assistance to those in distress.

kalaburagi residents emergency helpline numbers announced

(ಜಿಲ್ಲಾಧಿಕಾರಿ ಚಿತ್ರ ಬಳಸಿ)

**

*ಮಧ್ಯಪ್ರಾಚ್ಯ ಹಾಗೂ ಕೊಲ್ಲಿದೇಶಗಳಲ್ಲಿಯುದ್ಧ

ಕಲಬುರಗಿ ನಿವಾಸಿಗಳ ನೆರವಿಗೆ ಸಹಾಯವಾಣಿ

ವಿಕ ಸುದ್ದಿಲೋಕ ಕಲಬುರಗಿ

ಮಧ್ಯಪ್ರಾಚ್ಯ ಹಾಗೂ ಕೊಲ್ಲಿದೇಶಗಳಲ್ಲಿಯುದ್ಧದ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ, ಅಲ್ಲಿನೆಲೆಸಿರುವ ಜಿಲ್ಲೆಯ ನಿವಾಸಿಗಳ ನೆರವಿಗಾಗಿ ಜಿಲ್ಲಾಡಳಿತದಿಂದ ತುರ್ತು ಸಹಾಯವಾಣಿ ಸಂಖ್ಯೆಗಳನ್ನು ಪ್ರಕಟಿಸಿದೆ ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ತಿಳಿಸಿದ್ದಾರೆ.

ಮಧ್ಯಪ್ರಾಚ್ಯ ದೇಶಗಳಲ್ಲಿಜಿಲ್ಲೆಯ ಹಲವರು ಸಿಲುಕಿಕೊಂಡಿರುವ ಮಾಹಿತಿಯಿದೆ. ಅಲ್ಲಿರುವ ನಿವಾಸಿಗಳು ಆಯಾ ದೇಶದ ಭಾರತೀಯ ರಾಯಭಾರ ಕಚೇರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು. ಕೇಂದ್ರ ವಿದೇಶಾಂಗ ಸಚಿವಾಲಯದ ‘ಸಾರಥಿ ಸಹಾಯತಾ’ ಪೋರ್ಟಲ್ ನಲ್ಲಿಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು ಹಾಗೂ ಸರಕಾರದ ಸೂಚನೆಗಳನ್ನು ಪಾಲಿಸಬೇಕು ಎಂದು ತಿಳಿಸಿದ್ದಾರೆ.

ಯುದ್ಧ ಪೀಡಿತ ದೇಶಗಳಲ್ಲಿಜಿಲ್ಲೆಯ ಯಾರಾದರೂ ಸಿಲುಕಿಕೊಂಡಿದ್ದಲ್ಲಿ, ಅವರ ಕುಟುಂಬದವರು ಅಥವಾ ಸಂಬಂಧಿಕರು ಈ ಕೆಳಗಿನ ಸಂಖ್ಯೆಗಳಿಗೆ ಕರೆ ಮಾಡಿ ಮಾಹಿತಿ ನೀಡಬಹುದಾಗಿದೆ. ಸಂಕಷ್ಟದಲ್ಲಿರುವವರಿಗೆ ಸೂಕ್ತ ಮಾರ್ಗದರ್ಶನ ಹಾಗೂ ನೆರವು ನೀಡಲು ಜಿಲ್ಲಾಡಳಿತ ಸನ್ನದ್ಧವಾಗಿದೆ ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದ್ದಾರೆ.

**

ಜಿಲ್ಲಾ ಮಟ್ಟದ ಸಹಾಯವಾಣಿಗಳು:

* ಜಿಲ್ಲಾ ವಿಪತ್ತು ನಿಯಂತ್ರಣ ಕೊಠಡಿ: 08472-278677

* ಪೊಲೀಸ್ ಕಂಟ್ರೋಲ್ ರೂಂ: 9480805500, 9480803500

* ಇತರ ಸಂಖ್ಯೆಗಳು: 08472-263604, 228112