ಫೋಟೊ: 28ಸುರ್ 1:
ಸುರಪುರ ಕಡ್ಲಪ್ಪನವರ ನಿಷ್ಠಿ ವಿರಕ್ತ ಮಠದಲ್ಲಿಶ್ರೀರಕ್ಷೆ ಪ್ರಶಸ್ತಿಯನ್ನು ಧಿನಾನಾ ರಂಗಗಳಲ್ಲಿಸಾಧನೆಗೈದ ಸಾಧಕರಿಗೆ ಪ್ರದಾನ ಮಾಡಲಾಯಿತು.
* ಸಾಧಕರಿಗೆ ಶ್ರೀರಕ್ಷೆ ಪ್ರಶಸ್ತಿ ಪ್ರದಾನ | ಕೆವೈಡಿಸಿಸಿ ಬ್ಯಾಂಕ್ ನಿರ್ದೇಶಕ ಸಜ್ಜನ್ ಹೇಳಿಕೆ
ಮಠ, ಮಂದಿರಗಳಿಂದ ಜ್ಞಾನ, ಸಂಸ್ಕಾರ
ವಿಕ ಸುದ್ದಿಲೋಕ ಸುರಪುರ
ಮಠ, ಮಂದಿರಗಳು ಮಾನವ ಕುಲಕ್ಕೆ ಜ್ಞಾನ, ಸಂಸ್ಕಾರ, ಶಾಂತಿ, ನೆಮ್ಮದಿ ನೀಡುವ ಹಾಗೂ ಶೈಕ್ಷಣಿಕ, ಧಾರ್ಮಿಕ ಹಾಗೂ ಸಾಮೂಹಿಕ ಪರಿಕಲ್ಪನೆಗಳನ್ನು ಬಿತ್ತುವ ತಾಣಗಳು ಎಂದು ಕಲಬುರಗಿ-ಯಾದಗಿರಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಸುರೇಶ್ ಸಜ್ಜನ್ ಅಭಿಪ್ರಾಯಪಟ್ಟರು.
ಇಲ್ಲಿಯ ಕಡ್ಲಪ್ಪನವರ ನಿಷ್ಠಿ ವಿರಕ್ತ ಮಠದಲ್ಲಿಲಿಂ.ಮಲ್ಲಿಕಾರ್ಜುನ ಮಹಾಸ್ವಾಮೀಜಿಯ ಸುವರ್ಣ ಪುಣ್ಯ ಸ್ಮರಣೋತ್ಸವ, ಮಠದ ಪೀಠಾಧಿಪತಿ ಪ್ರಭುಲಿಂಗ ಸ್ವಾಮೀಜಿಯ ಷಷ್ಠಬ್ದಿ ಸಮಾರಂಭ ಹಾಗೂ ರಜತ ಪಟ್ಟಾಧಿಕಾರ ಮಹೋತ್ಸವ ನಿಮಿತ್ತ ಏರ್ಪಡಿಸಿದ್ದ ಅಭಿನಂದನಾ ಗ್ರಂಥ ಲೋಕಾರ್ಪಣೆ ಮತ್ತು ಸಾಧಕರಿಗೆ ಶ್ರೀರಕ್ಷೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿಮಾತನಾಡಿದರು.
ಧರ್ಮ, ಪೂಜೆ, ಅಧ್ಯಾತ್ಮಿಕತೆ , ನಂಬಿಕೆ ಮತ್ತು ಆಚರಣೆ ಜೀವನದಲ್ಲಿಮಹತ್ವದ ಪಾತ್ರ ವಹಿಸುತ್ತದೆ. ಇವು ಸಮಾಜದಲ್ಲಿಶಾಂತಿ, ಸಹಿಷ್ಣುತೆ ಮತ್ತು ಸಾಮರಸ್ಯ ಉತ್ತೇಜಿಸುತ್ತವೆ. ಮಠ-ಮಂದಿರಗಳಲ್ಲಿನಡೆಯುವ ದೈವಾನ್ವೀತ ಸಂದೇಶ ಸಾರುವ ಪುರಾಣ ಪ್ರವಚನ ಮನುಷ್ಯನ ಮಾನಸಿಕ ಸಮತೋಲನ ಕಾಪಾಡಿ, ಆತ್ಮಶುದ್ಧೀಕರಣದ ಜತೆಗೆ ಅಧ್ಯಾತ್ಮಿಕತೆ ಬೆಳೆಸುತ್ತವೆ. ನಮ್ಮ ಪೂರ್ವಜರು ನಡೆ, ನುಡಿ, ಸಂಸ್ಕಾರ ರೂಢಿಸಲೆಂದು ಮಠ, ಮಂದಿರಗಳಲ್ಲಿಹಿಂದಿನಿಂದಲೂ ಪುರಾಣ-ಪುಣ್ಯಕಥೆಗಳನ್ನು ಆಯೋಜಿಸುತ್ತಾ ಬಂದಿದ್ದಾರೆ ಎಂದರು.
ಚಡಚಣದ ವಿರಕ್ತ ಮಠದ ಷಡಕ್ಷರಿ ಸ್ವಾಮೀಜಿ, ವಡವಡಗಿ ನಂದಿ ಮಠದ ವೀರಸಿದ್ದ ಸ್ವಾಮೀಜಿ ಧಿಆಧಿಶೀಧಿರ್ವಧಿಚನ ನೀಡಿದರು. ಪ್ರಭುಲಿಂಗ ಸ್ವಾಮೀಜಿಯ ಅಭಿನಂದನಾ ಗ್ರಂಥ ಲೋಕಾರ್ಪಣೆ ಗೊಳಿಸಲಾಯಿತು. ಯಡ್ರಾಮಿಯ ಸಿದ್ದಲಿಂಗ ಸ್ವಾಮೀಜಿ ಶರಣರ ಜೀವನ ದರ್ಶನ ಪ್ರವಚನ ನಡೆಸಿಕೊಟ್ಟರು. ಶ್ರೀಮಠದ ಪ್ರಭುಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪ್ರಮುಖರಾದ ರಾಮನಗೌಡ ಸುಬೇದಾರ್ , ಶಂಕರ ನಾಯಕ, ಮಹೇಶ್ ಪಾಟೀಲ್ , ಸಿದ್ದನಗೌಡ ಪಾಟೀಲ್ , ನಾರಾಯಣ ಸಿಂಗಾಡೆ, ಸುಗೂರೇಶ ಮಡ್ಡಿ, ಕೃಷ್ಣಾರೆಡ್ಡಿ ಮುದ್ನೂರು ಇಧಿದ್ದರು. ಪ್ರಕಾಶ ಅಂಗಡಿ ಪ್ರಾಸ್ತಾವಿಕ ಮಾತನಾಡಿದರು. ಸಿದ್ದಲಿಂಗಯ್ಯ ಶಾಸ್ತ್ರೀ ನಿರೂಪಿಸಿ, ವಂದಿಸಿದರು.
* ಬಾಕ್ಸ್
ಸಾಧಕರಿಗೆ ಶ್ರೀರಕ್ಷೆ
ಸುರೇಶ ಸಜ್ಜನ್ (ಸಹಕಾರ ಕ್ಷೇತ್ರ), ಹಣಮಂತ ಈರಗೋಟ ನರಸಿಂಗಪೇಟೆ (ಜಾನಪದ), ಮಲ್ಲಿಕಾರ್ಜುನ ಸತ್ಯಂಪೇಟೆ (ಎಂ.ಡಿ.ನಂಜುಂಡಸ್ವಾಮಿ ಪ್ರಶಸ್ತಿ ಪುರಸ್ಕೃತ), ಲಕ್ಷತ್ರ್ಮಣ ಗುತ್ತೇದಾರ್ (ಜಾನಪದ ಲೋಕ ಸಿರಿ ಪ್ರಶಸ್ತಿ ಪುರಸ್ಕೃತ), ಜಾವೇದ್ ಹುಸೇನ್ (ಜಿಲ್ಲಾರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ) ಇವರಿಗೆ ಶ್ರೀರಕ್ಷೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
=ಧಿ=ಧಿ=ಧಿ=ಧಿ=ಧಿ=ಧಿ=
* ಋುಣ ತೀರಿಸಲಾಗದ
ಅನೇಕ ಸೇವೆ ಸಲ್ಲಿಸಿದರು ಸಹ ಈ ಜಗತ್ತಿನಲ್ಲಿತಾಯಿ ಮತ್ತು ಗುರುವಿನ ಋುಣ ತೀರಿಸಲು ಸಾಧ್ಯವಿಲ್ಲ. ಮಲೀನಗೊಂಡಿರುವ ಮನಸ್ಸುಗಳನ್ನು ಸ್ವಚ್ಛಗೊಳಿಸಿ, ದೈವ ಜ್ಞಾನದ ಬೀಜ ಬಿತ್ತಿ, ಮಾರ್ಗದರ್ಶನ, ಬೆಳಕು ನೀಡಬಲ್ಲವರೇ ಗುರು. ಪ್ರಭುಲಿಂಗ ಶ್ರೀಗಳು ಸರಳ ಸಕಾರ ಮೂರ್ತಿ, ಅಪರೂಪದ ಮಾತೃ ವಾತ್ಸಲ್ಯದ ಗುರುಗಳು. ನಮ್ಮಂಥಹ ಕಿರಿಯ ಸ್ವಾಮಿಗಳ ಬಗ್ಗೆ ಅಪಾರ ಪ್ರೀತಿ, ವಿಶ್ವಾಸವಿದೆ. ಇಂತವರನ್ನು ನೋಡುವುದು ಬಹಳ ಅಪರೂಪ ಮತ್ತು ವಿರಳ. ಶ್ರೀ ಮಠವನ್ನು ಸಮೃದ್ಧವಾದ ಶ್ರೀ ಮಠವನ್ನು ನಿರ್ಮಾಣ ಮಾಡುವುದರಲ್ಲಿಪರಮ ಪೂಜ್ಯ ಕಾರ್ಯ ಶ್ಲಾಘನೀಯ. ಇಂತಹ ಪೂಜ್ಯರು ತಮಗೆ ಸಿಕ್ಕಿರುವುದು ನಿಜವಾಗಿಯು ಸುದೈವ. ಇಡೀ ಸಮಾಜಕ್ಕಾಗಿ, ಸಮಾಜದಲ್ಲಿರುವ ಜನರ ಒಳಿತಿಗಾಗಿ ತಮ್ಮ ಆರವತ್ತು ವಸಂತಗಳನ್ನು ಪೂಜ್ಯರು ಸವಿಸಿದ್ದಾರೆ. ಅಂತಹ ಪೂಜ್ಯರಿಗೆ ಋುಣ ತೀರಿಸುವ ಕೆಲಸ ಮಾಡಿದ್ದೀರಿ. ಷಷ್ಠಬಿ ಸಮಾರಂಭ ಅರ್ಥ ಪೂರ್ಣವಾಗಿದೆ ಎಂದು ಬಳ್ಳಾರಿಯ ಸಿದ್ಧಬಸವ ಸ್ವಾಮೀಜಿ ನುಡಿದರು.

