ಕೆಎಸ್ ಆರ್ ಟಿಸಿಯ ನೂತನ ಬಸ್ ಸೇವೆ ಆರಂಭ

Contributed bycrastalp19@gmail.com|Vijaya Karnataka

KSRTC has introduced new bus services from Kanhangad. A superfast service to Kottayam and a fast passenger service to Kasaragod have been launched. The Kottayam service departs Kanhangad in the evening and reaches Kottayam the next morning. The Kasaragod service travels via Chandragiri bridge.

ksrtcs new bus service launch kannangad co tayyam superfast service brings fast connectivity to kasaragod

ಕಾಸರಗೋಡು: ಕೆಎಸ್ ಆರ್ ಟಿಸಿ ಕಾಞಂಗಾಡ್ ಡಿಪೋದಿಂದ ಹೊಸದಾಗಿ ಪ್ರಾರಂಭಿಸಲಾದ ಕಾಞಂಗಾಡ್ - ಕೊಟ್ಟಾಯಂ ಸೂಪರ್ ಫಾಸ್ಟ್ ಸರ್ವಿಸ್ ಮತ್ತು ಕಾಞಂಗಾಡ್ - ಕಾಸರಗೋಡು ಫಾಸ್ಟ್ ಪ್ಯಾಸೆಂಜರ್ ಸವೀರ್ ಸ್ ಅನ್ನು ಕಾಞಂಗಾಡ್ ಡಿಪೋದಲ್ಲಿ ಶಾಸಕ ಇ. ಚಂದ್ರಶೇಖರನ್ ಉದ್ಘಾಟಿಸಿದರು.

ಕಾಞಂಗಾಡ್ - ಕೊಟ್ಟಾಯಂ ಸೂಪರ್ ಫಾಸ್ಟ್ ಸರ್ವಿಸ್ ಸಂಜೆ 7 ಗಂಟೆಗೆ ಕಾಞಂಗಾಡ್ ನಿಂದ ಹೊರಟು ಕಣ್ಣೂರು, ಕೋಝಿಕ್ಕೋಡ್ , ತ್ರಿಶೂರ್ , ಮೂವಾಟ್ಟುಪುಯ, ತೋಡುಪುಯ ಮತ್ತು ಪಾಲಾ ಮೂಲಕ ತೆರಳಿ ಬೆಳಗ್ಗೆ 8.10ಕ್ಕೆ ಕೊಟ್ಟಾಯಂ ತಲುಪಲಿದೆ. ಸಂಜೆ 5.30ಕ್ಕೆ ಕೊಟ್ಟಾಯಂನಿಂದ ಹೊರಡುವ ಬಸ್ ¸ಳಗ್ಗೆ 6.40 ಕ್ಕೆ ಪಾಲಾ, ತೋಡುಪುಯ, ಮೂವಾಟ್ಟುಪುಯ, ತ್ರಿಶೂರ್ , ಕೋಝಿಕ್ಕೋಡ್ ಮತ್ತು ಕಣ್ಣೂರು ಮೂಲಕ ಕಾಞಂಗಾಡ್ ತಲುಪಲಿದೆ.

ಕೊಟ್ಟಾಯಂ ಸೂಪರ್ ಫಾಸ್ಟ್ ಸೇವೆ ಸಂಜೆ 7 ಗಂಟೆಗೆ ಕಾಞಂಗಾಡ್ ನಿಂದ ಪ್ರಾರಂಭವಾಗಲಿದೆ. ಚಂದ್ರಗಿರಿ ಸೇತುವೆ ಮೂಲಕ ಹೋಗುವ ಫಾಸ್ಟ್ ಪ್ಯಾಸೆಂಜರ್ ಲಿಂಕ್ ಬಸ್ ಪ್ರಸ್ತುತ ಕಾಞಂಗಾಡ್ , ಪೂಚೆಕಾಡ್ , ಬೇಕಲಕೋಟೆ ಮೇಲ್ಪರಂಬ ಮತ್ತು ಕಾಸರಗೋಡಿನಲ್ಲಿ ಸ್ಟಾಪ್ ಹೊಂದಿದೆ.

ಅಲ್ಲದೆ ಕಾಞಂಗಾಡ್ ನಿಂದ ಎರಡು ಹೊಸ ಟ್ರಿಪ್ ಗಳನ್ನು ಪ್ರಾರಂಭಿಸಲಾಗಿದೆ. ಸಂಜೆ 7.15 P ಅದು ಒಡಯಂಚಾಲ್ ಮತ್ತು ಕೋಳಿಚ್ಚಾಲ್ ಮೂಲಕ ಬಂದಡ್ಕ ತಲುಪುತ್ತದೆ ಮತ್ತು ಬೆಳಗ್ಗೆ 4.30 ಕ್ಕೆ, ಬಂದಡ್ಕದಿಂದ ಕುತ್ತಿಕೋಲ್ ಮತ್ತು ಚುಳ್ಳಿಕ್ಕೆರೆ ಮೂಲಕ ಕಾಞಂಗಾಡಿಗೆ ಪರಶುರಾಮ್ ಎಕ್ಸ್ ಪ್ರೆಸ್ ನೊಂದಿಗೆ ಸಂಪರ್ಕ ಹೊಂದಿದೆ.

ಈ ಸರ್ವಿಸ್ ಬೆಳಗ್ಗೆ 11.45 ಕ್ಕೆ ಕಾಞಂಗಾಡ್ ನಿಂದ ಜಿಲ್ಲಾಆಸ್ಪತ್ರೆ, ಕಾತ್ತಿರಪೊಯಿಲ್ , ಅಡ್ಕಂ ಮೂಲಕ ಪರಪ್ಪಕ್ಕೆ ಹೊರಟು ಮಧ್ಯಾಹ್ನ 1.20 ಕ್ಕೆ ಪರಪ್ಪದಿಂದ ಬಿರಿಕುಲಂ, ನೆಲ್ಲಿಯಡ್ಕ, ನೀಲೇಶ್ವರ, ಚಂದ್ರಗಿರಿ ಸೇತುವೆ ಮೂಲಕ ಕಾಸರಗೋಡಿಗೆ ಹಿಂತಿರುಗಲಿದೆ. ಕಾಞಂಗಾಡ್ ಡಿಪೋದಲ್ಲಿನಡೆದ ಉದ್ಘಾಟನಾ ಸಮಾರಂಭದಲ್ಲಿಸಹಾಯಕ ಸಾರಿಗೆ ಅಧಿಕಾರಿ ಆಲ್ವಿನ್ ಟಿ. ಕ್ಸೇವಿಯರ್ ಅಧ್ಯಕ್ಷತೆ ವಹಿಸಿದ್ದರು. ಸೂಪರಿಂಟೆಂಡೆಂಟ್ ಕೆ. ಸರಿತಾ, ನಾನಾ ಸಂಘಟನೆಗಳ ಪ್ರತಿನಿಧಿಗಳು ಮತ್ತು ನೌಕರರು ಮಾತನಾಡಿದರು. ಸಹಾಯಕ ಡಿಪೋ ಎಂಜಿನಿಯರ್ ವಿ. ಎಚ್ . ದಾಮೋದರನ್ ಪ್ರಯಾಣಿಕರನ್ನು ಸ್ವಾಗತಿಸಿದರು.

ಚಿತ್ರ: 28ಕೆಎಸ್ ಎಲ್ ಬಸ್ಸು- ಹೊಸದಾಗಿ ಆರಂಭವಾದ ಎರಡು ಸರ್ವಿಸ್ ಗಳ ಮೊದಲ ಪ್ರಯಾಣವನ್ನು ಶಾಸಕ ಇ. ಚಂದ್ರಶೇಖರನ್ ಧ್ವಜ ಬೀಸಿ ಚಾಲನೆ ನೀಡಿದರು.