‘ಲಯನ್ಸ್ ಕ್ಲಬ್ ನಿಂದ ಸಮಾಜ ಮುಖಿ ಕಾರ್ಯ’
ವಿಕ ಸುಧಿದ್ದಿಧಿಲೋಧಿಕ ಮಸ್ಕಿ
‘‘ಪಟ್ಟಣದ ಲಯನ್ಸ್ ಕ್ಲಬ್ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಬಡಜನರಿಗೆ ನೆರವಾಗಿದೆ,’’ ಎಂದು ಲಯನ್ಸ್ ಕ್ಲಬ್ ಮುಖ್ಯಸ್ಥ ಮೋಹನ್ ಕುಮಾರ್ ಹೇಳಿದರು.
ಇಲ್ಲಿಯ ಎನ್ ಎಂಜಿ ಫಂಕ್ಷನ್ ಹಾಲ್ ಬಳಿ ಆಯೋಜಿಸಿದ್ದ ಲಯನ್ಸ್ ಕ್ಲಬ್ ವಿಭಾಗೀಯ ಮಟ್ಟದ ಸಮಾವೇಶಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದರು.
‘‘ಕಣ್ಣು ತಪಾಸಣೆ, ಆರೋಗ್ಯ ಶಿಬಿರಗಳನ್ನು ಏರ್ಪಡಿಸುವ ಮೂಲಕ ಲಯನ್ಸ್ ಕ್ಲಬ್ ಬಡಜನರಿಗೆ ಅನುಕೂಲ ಮಾಡಿದೆ,’’ ಎಂದರು.
ಶಾಸಕ ಬಸನಗೌಡ ತುರುವಿಹಾಳ ಮಾತನಾಡಿ, ಲಯನ್ಸ್ ಕ್ಲಬ್ ಆಯೋಜಿಸಿದ ನೇತ್ರ ಚಿಕಿತ್ಸಾ ಶಿಬಿರಗಳು ಅನೇಕ ಜನರ ಬಾಧಿಳಿಧಿಗೆ ಬೆಳಕು ನೀಡಿವೆ,’ಧಿ’ ಎಂದರು.
ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಮಾತನಾಡಿ, ‘ಧಿ‘ಲಯನ್ಸ್ ಕ್ಲಬ್ ಸಮಾಜಮುಖಿ ಕೆಲಸಗಳ ಜತೆ ಶಾಲೆ ಆರಂಭಿಸುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿಸಾಧನೆ ಮಾಡಿದೆ,’ಧಿ’ ಎಂದರು.
ಲಯನ್ ಶ್ರೀನಿವಾಸ, ಶಿವಸಿಂಧನೂರು, ಲಯನ್ಸ್ ಕ್ಲಬ್ ಅಧ್ಯಕ್ಷ ವಿರೇಶ ಹಿರೇಮಠ, ಡಾ.ಮಲ್ಲಿಕಾರ್ಜುನ ಇತ್ಲಿಮಾತನಾಡಿದರು. ಡಾ.ಶಿವಶರಣಪ್ಪ, ಡಾ.ದಿವಟರ್ , ರಾಜೇಶ್ ಬಳ್ಳಾರಿ, ನಾಗರಾಜ ಕಂಬಾರ, ಬಿಎಲ್ ಶೆಟ್ಟಿ, ಶ್ರೀನಿವಾಸ ರೆಡ್ಡಿ ಬಳ್ಳಾರಿ, ಪ್ರಕಾಶ ಹೊಸಪೇಟ, ಪರಮೇಶ್ವರಪ್ಪ ಕೊಪ್ಪಳ, ಶಿವುಕುಮಾರ ಗಂಗಾವತಿ, ಡಾ.ತೇಜಧಿಸ್ವಿನಿ ಇದ್ದರು.
* ಆರ್ ಸಿಎಚ್ 1 ಎಂಎಸ್ಕೆ ಫೋಟೋ 01
ಮಸ್ಕಿಯ ಫಂಕ್ಷನ್ ಹಾಲ್ ಬಳಿ ನಡೆದ ಲಯನ್ಸ್ ಕ್ಲಬ್ ವಿಭಾಗೀಯ ಸಮಾವೇಶಕ್ಕೆ ಗಣ್ಯರು ಚಾಲನೆ ನೀಡಿದರು.

