ಇಂದು ದ್ವಿತೀಯ ಹಂತ | 4ರಂದು ಮಂಜೇಶ್ವರದಲ್ಲಿಪರಿಶೀಲನೆ
ವಿಕ ಸುದ್ದಿಲೋಕ ಕಾಸರಗೋಡು
ರಾಷ್ಟ್ರೀಯ ಹೆದ್ದಾರಿಯು ಷಟ್ಪಥ ಆಗಿದ್ದು, ಮಳೆಗಾಲದಲ್ಲಿಸರ್ವಿಸ್ ರಸ್ತೆಯಲ್ಲಿನೀರು ನಿಲ್ಲುವ ಸ್ಥಳಗಳನ್ನು ಗುರುತಿಸಲು ಮತ್ತು ಪರಿಹಾರ ಕಲ್ಪಿಸಲು ತಪಾಸಣೆ ಆರಂಭಗೊಂಡಿದೆ.
ತಲಪಾಡಿ-ಚೆಂಗಳ ರೀಚ್ ಪೂರ್ತಿಗೊಳಿಸಿದ ಊರುಳುಂಗಾಲ್ ಸೊಸೈಟಿ, ಚೆಂಗಳ-ನೀಲೇಶ್ವರ ರೀಚ್ ನ ಕಾಮಗಾರಿ ನಡೆಸುವ ಮೇಘ ಕಂಪನಿ ಎಂಬಿವುಗಳ ಪ್ರತಿನಿಧಿಗಳು, ಸಂಬಂಧಪಟ್ಟ ಸ್ಥಳೀಯಾಡಳಿತ ಸಂಸ್ಥೆಗಳ ಕಾರ್ಯದರ್ಶಿ, ಸಹಾಯಕ ಎಂಜಿನಿಯರ್ ಗಳು, ಅಧ್ಯಕ್ಷರು, ವಾರ್ಡು ಸದಸ್ಯರು ಅಥವಾ ಕೌನ್ಸಿಲರ್ ಗಳು, ತಾಂತ್ರಿಕ ಮಾನಿಟರಿಂಗ್ ಸಮಿತಿ ಅಧಿಕಾರಿಗಳು ತಪಾಸಣೆಯಲ್ಲಿಭಾಗವಹಿಸಿದ್ದರು.
ಶುಕ್ರವಾರ ಚೆಮ್ನಾಡ್ , ಉದುಮ, ಪಳ್ಳಿಕ್ಕೆರೆ, ಪುಲ್ಲೂರು-ಪೆರಿಯ ಅಜಾನೂರು ಪಂಚಾಯಿತಿಗಳನ್ನೊಳಗೊಂಡ ಭಾಗಗಳಲ್ಲಿತಪಾಸಣೆ ನಡೆಯಿತು.
ತೆಕ್ಕಿಲ್ , ಚಟ್ಟಂಚಾಲ್ , ಪೊಯಿನಾಚಿ, ಮಾವುಂಗಾಲ್ ಮೈಲಾಟಿ, ಬಟ್ಟತ್ತೂರು, ಪೆರಿಯಾಟಡ್ಕ, ಕುಣಿಯ, ಪೆರಿಯ, ಕೊಡವಲಂ, ಮೂಲಕಂಡ ಭಾಗಗಳ ಸರ್ವಿಸ್ ರಸ್ತೆಯಲ್ಲಿಮತ್ತು ಪರಿಸರಗಳಲ್ಲಿನೀರು ಕಟ್ಟಿ ನಿಲ್ಲುವ ಸಮಸ್ಯೆಗಳನ್ನು ಜನಪ್ರತಿನಿಧಿಗಳು, ನಾಗರಿಕರು ವಿವರಿಸಿದರು.
ರಾಷ್ಟ್ರೀಯ ಹೆದ್ದಾರಿಗೆ ಹಸ್ತಾಂತರಿಸಿದ ಸ್ಥಳದಲ್ಲಿನೀರು ಕಟ್ಟಿ ನಿಲ್ಲುವ ಸಮಸ್ಯೆಯನ್ನು ಗುತ್ತಿಗೆ ಕಂಪನಿಯ ಹೊಣೆಗಾರಿಕೆಯಲ್ಲಿಪರಿಹರಿಸಲಾಗುವುದು. ಆದರೆ ಮಿಕ್ಕ ಭಾಗಗಳಲ್ಲಿಉಂಟಾಗುವ ಈ ಸಮಸ್ಯೆಯಲ್ಲಿಪರಿಹಾರ ಕೈಗೊಳ್ಳಲಾಗದು ಎಂದು ಗುತ್ತಿಗೆ ಕಂಪನಿ ತಿಳಿಸಿದೆ.
ಕಳೆದ ಮಳೆಗಾಲದಲ್ಲಿಹಲವಾರು ಸ್ಥಳಗಳಲ್ಲಿನೀರು ಕಟ್ಟಿ ನಷ್ಟ ಸಂಭವಿಸಿದ್ದು, ಸರ್ವಿಸ್ ರಸ್ತೆಗಳು ಹದಗೆಟ್ಟಿತ್ತು.
ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿಇತ್ತೀಚೆಗೆ ನಡೆದ ಸಭೆಯಲ್ಲಿನೀರು ಕಟ್ಟಿ ನಿಲ್ಲುವ ಸಮಸ್ಯೆಯನ್ನು ಮಳೆಗಾಲಕ್ಕೆ ಮುನ್ನ ಪರಿಹರಿಸಲು ನಿರ್ದೇಶನ ನೀಡಲಾಗಿದೆ. ಆಯಾ ಸ್ಥಳೀಯಾಡಳಿತ ಸಂಸ್ಥೆಗಳು ನೀರು ಕಟ್ಟಿ ನಿಲ್ಲುವ ಸ್ಥಳಗಳನ್ನು ಗುರುತಿಸಿ ಪರಿಹಾರಕ್ಕೆ ನಿರ್ದೇಶಿಸಬೇಕಿದೆ. ಇದರಂತೆ ಸ್ಥಳೀಯಾಡಳಿತ ಸಂಸ್ಥೆಗಳು ತಯಾರಿಸುವ ಕಾಮಗಾರಿಯ ರೂಪುರೇಷೆಯನ್ನು ಅಂಗೀಕರಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಮುಂದಿನ ಕ್ರಮ ಕೈಗೊಳ್ಳಲಿದೆ. ಸ್ಥಳೀಯಾಡಳಿತ ಸಂಸ್ಥೆಗಳ ನೇತೃತ್ವದಲ್ಲಿಜೂನ್ ನೊಳಗೆ ಕಾಮಗಾರಿಗಳನ್ನು ಪೂರ್ತಿಗೊಳಿಸಲು ಉದ್ದೇಶಿಸಲಾಗಿದೆ.
ಇಂದು ತಪಾಸಣೆ:
ದ್ವಿತೀಯ ಹಂತದ ತಪಾಸಣೆಯು ಮಾ. 2ರಂದು ಮಾವುಂಗಾಲ್ ಜಂಕ್ಷನ್ ನಿಂದ ಆರಂಭಗೊಳ್ಳಲಿದೆ. ಕಾಞಂಗಾಡು, ನೀಲೇಶ್ವರ ನಗರಸಭೆಗಳು, ಚೆರುವತ್ತೂರು, ಪಿಲಿಕ್ಕೋಡು ಪಂಚಾಯಿತಿ ವ್ಯಾಪ್ತಿಯಲ್ಲಿನ ಸಮಸ್ಯೆಗಳನ್ನು ಪರಿಶೀಲಿಸಲಾಗುವುದು.
ತೃತೀಯ ಹಂತದ ತಪಾಸಣೆಯು ಮಾ.4ರಂದು ಬೆಳಗ್ಗೆ 10 ಗಂಟೆಗೆ ಮಂಜೇಶ್ವರ ಜಂಕ್ಷನ್ ನಿಂದ ಆರಂಭಗೊಳ್ಳಲಿದೆ. ಮಂಜೇಶ್ವರ, ಮಂಗಲ್ಪಾಡಿ, ಕುಂಬಳೆ, ಮೊಗ್ರಾಲ್ ಪುತ್ತೂರು, ಕಾಸರಗೋಡು ನಗರಸಭೆ, ಚೆಂಗಳ ಎಂಬೆಡೆಗಳಲ್ಲಿತಂಡ ತಪಾಸಣೆ ನಡೆಸಲಿದೆ.
ಚಿತ್ರ: 28ಕೆಎಸ್ ಎಲ್ ತಪಾಸಣೆ-
ರಾಷ್ಟ್ರೀಯ ಹೆದ್ದಾರಿಯ ಬಟ್ಟತ್ತೂರಿನಲ್ಲಿನಡೆದ ಸಂಯುಕ್ತ ತಪಾಸಣೆ.

