ಆಭರಣ ಟ್ರೆಂಡ್ (ಸ್ಲಗ್ )
ಬಂಗಾರದ ಗುಂಡಲ್ಲಿಒಡವೆ ವಯ್ಯಾರ
ಇಂಟ್ರೊ
ನಟಿ ರಶ್ಮಿಕಾ ಮಂದಣ್ಣ ಅವರ ಮದುವೆ ಆಭರಣ ಲುಕ್ ಮುಂಬರುವ ಮದುವೆ ಸೀಸನ್ ನಲ್ಲಿಟ್ರೆಂಡ್ ಸೃಷ್ಟಿಸುವ ಸಾಧ್ಯತೆ ಇದೆ.
ಶುಭಾ ವಿಕಾಸ್
ಕಂಠವನ್ನು ಬಿಗಿದಪ್ಪಿದ ಚೋಕರ್ , ಎಳೆ ಎಳೆಯಾಗಿ ಇಳಿಬಿಟ್ಟ ಹಾರಗಳ ನಡುವೆ ಕಂಗೊಳಿಸುವ ಬಂಗಾರದ ಪದಕ, ಜುಮುಕಿಯೊಂದಿಗೆ ಹೊರಟು ಕೂದಲಿಗೆ ಸಿಕ್ಕಿಕೊಂಡು ಜೋತಾಡುವ ಕೆನ್ನೆ ಸರಪಳಿ, ಬೈತಲೆ ಮೇಲಿನಿಂದ ನಗುವ ಆಭರಣದ ನಡುವೆ ನಟಿ ರಶ್ಮಿಕಾ ಮಂದಣ್ಣರ ಮದುಮಗಳ ಲುಕ್ ಈಗ ಎಲ್ಲೆಡೆ ಸಂಚಲನ ಮೂಡಿಸಿದೆ. ಅವರು ತಮ್ಮ ಮದುವೆಯಲ್ಲಿಧರಿಸಿದ್ದ ಸಾಂಪ್ರದಾಯಿಕ ಆಭರಣಗಳು ಗಮನ ಸೆಳೆದಿದ್ದು, ಈ ಇಡೀ ಲುಕ್ ನಲ್ಲಿಹೈಲೈಟ್ ಆಗಿದ್ದು ಚಿನ್ನದ ಗುಂಡುಗಳು. ಈ ಮೂಲಕ ಮುಂಬರುವ ಮದುವೆ ಸೀಸನ್ ನಲ್ಲಿಬಂಗಾರದ ಗುಂಡುಗಳ ಆಭರಣ ಇನ್ನಷ್ಟು ಸದ್ದು ಮಾಡುವ ಸಾಧ್ಯತೆ ಇದೆ ಎಂದಿದ್ದಾರೆ ಆಭರಣ ವಿನ್ಯಾಸಕರು ಹಾಗೂ ಮಾರಾಟಗಾರರು.
ಗುಂಡಿನ ಸರ ಸೊಬಗು
ಮದುವೆಯಂದು ರಶ್ಮಿಕಾ ಧರಿಸಿದ್ದ ಆಭರಣಗಳಲ್ಲಿಪ್ರಮುಖವಾದದ್ದು ಸರ. ಇದು ಸಾಂಪ್ರದಾಯಿಕ ದಕ್ಷಿಣ ಭಾರತದ ಶೈಲಿಯಲ್ಲಿದ್ದು, ಇದನ್ನು ಅವರು ಚಿನ್ನದ ಚೋಕರ್ ಜೊತೆಗೆ ಲೇಯರ್ ಮಾಡಿಕೊಂಡಿದ್ದರು. ಕೆನ್ನೆ ಸರಪಳಿಯು ಅವರ ಬ್ರೈಡಲ್ ಲುಕ್ ನ ಆಕರ್ಷಕ ಭಾಗವಾಗಿತ್ತು. ಅವರು ಧರಿಸಿದ್ದ ದೊಡ್ಡ ಚಿನ್ನದ ಜುಮುಕಿಗೆ ಸುಂದರವಾದ ಚಿನ್ನದ ಸರಪಳಿಗಳನ್ನು ಜೋಡಿಸಲಾಗಿತ್ತು. ಇವು ಅವರ ಮುಖದ ಸೌಂದರ್ಯವನ್ನು ಹೆಚ್ಚಿಸಿದ್ದವು. ಒಟ್ಟಿನಲ್ಲಿರಶ್ಮಿಕಾ ತಮ್ಮ ಮದುವೆಯ ದಿವಸಕ್ಕೆ ದಕ್ಷಿಣ ಭಾರತದ ಸಾಂಪ್ರದಾಯಿಕ ಹೆರಿಟೇಜ್ ಗುಂಡಿನ ಸರ ಆಯ್ಕೆ ಮಾಡಿದ್ದು ವಿಶೇಷ. ಇದು ಸಣ್ಣ ಮತ್ತು ಮಧ್ಯಮ ಗಾತ್ರದ ಚಿನ್ನದ ಗುಂಡುಗಳನ್ನು ಪೋಣಿಸಿ ಮಾಡಿದ ಸರವಾಗಿ ಹಳೆಯ ಕಾಲದಲ್ಲಿರಾಜಮನೆತನದ ಮಹಿಳೆಯರು ಧರಿಸುತ್ತಿದ್ದ ಶೈಲಿ ನೆನಪಿಸಿದೆ. ರವಿಕೆಯ ಮೇಲಿದ್ದ ಜುವೆಲ್ಲರಿ ವಿನ್ಯಾಸ, ಸೊಂಟದ ಪಟ್ಟಿ ಹೀಗೆ ಅವರ ಮೈಯನ್ನು ಅಲಂಕರಿಸಿದ್ದ ಆಭರಣಗಳಲ್ಲಿಬಂಗಾರದ ಗುಂಡುಗಳು ಹೊಳೆಯುತ್ತಿದ್ದವು. ಅವರ ಈ ಮದುವೆ ಲುಕ್ ವೆಡ್ಡಿಂಗ್ ಸ್ಟೈಲನ್ನು ಇನ್ನಷ್ಟು ಉತ್ತೇಜಿಸಿದೆ.
ಹೊಸ ಶೈಲಿ
ರಶ್ಮಿಕಾ ಮಂದಣ್ಣರಂತಹ ಪ್ರಭಾವಿ ನಟಿಯರು ಸಾಂಪ್ರದಾಯಿಕ ಆಭರಣಗಳನ್ನು ಧರಿಸಿದಾಗ ಅದು ಮಾರುಕಟ್ಟೆಯಲ್ಲಿದೊಡ್ಡ ಸಂಚಲನ ಮೂಡಿಸುತ್ತದೆ. ಈಗ ಅವರು ತಮ್ಮ ಮದುವೆಗೆ ಧರಿಸಿದ್ದ ಗುಂಡಿನ ಸರ ಮುಂಬರುವ ಮದುವೆ ಸಮಾರಂಭಗಳಲ್ಲಿ ಟ್ರೆಂಡ್ ಆಗುವ ಎಲ್ಲಾಲಕ್ಷಣಗಳಿವೆ. ಈ ಹಿಂದೆಯೂ ಗುಂಡಿನ ಸರಗಳು ಇದ್ದವು. ಈಗಲೂ ಚಾಲ್ತಿಯಲ್ಲಿದೆ. ಆದರೆ ಇತ್ತೀಚೆಗೆ ಬಂಗಾರದ ಬೆಲೆ ಏರಿಕೆ ಕೂಡ ಆಭರಣದ ಮೇಲೆ ಪ್ರಭಾವ ಬೀರಿದ್ದು, ಕಡಿಮೆ ತೂಕದ ಅರಗಿನ ಗುಂಡಿನ ಹಾರ, ಚೋಕರ್ಸ್ನತ್ತ ಗಮನ ಹರಿಸಿದ್ದಾರೆ ಗ್ರಾಹಕರು ಎಂಬುದು ಆಭರಣ ವ್ಯಾಪಾರಿಗಳ ಅಭಿಪ್ರಾಯ.
ಆಕರ್ಷಕ ಲುಕ್
ವಿಭಿನ್ನ ಆಕಾರಗಳ ಆಭರಣದಲ್ಲಿಮಿಳಿತವಾಗುವ ಗುಂಡುಗಳು ನೋಡುವುದಕ್ಕೆ ಸರಳವಾಗಿ ಕಂಡರೂ, ಅವುಗಳನ್ನು ಸಾಲಾಗಿ ಜೋಡಿಸಿದಾಗ ಒಡವೆ ವಿಶೇಷ ಕಳೆ ಪಡೆಯುತ್ತದೆ ಮತ್ತು ಒಂದು ರೀತಿಯ ರಾಜಮನೆತನದ ಲುಕ್ ನೀಡುತ್ತದೆ. ಚಿನ್ನದ ಮಣಿಗಳು ದುಂಡಗಿರುವ ಕಾರಣ ಅವುಗಳ ಮೇಲೆ ಬೀಳುವ ಬೆಳಕು ಎಲ್ಲಾದಿಕ್ಕುಗಳಿಗೂ ಸಮನಾಗಿ ಪ್ರತಿಫಲಿಸುತ್ತದೆ. ಇದರಿಂದ ಆಭರಣ ಹೊಳೆಯುವಂತೆ ಮತ್ತು ಕಣ್ಣಿಗೆ ಎದ್ದು ಕಾಣುವಂತೆ ಮಾಡುತ್ತದೆ. ಗುಂಡಿನ ಸರಗಳನ್ನು ಒಂದೇ ಎಳೆಯಾಗಿ ಹಾಕುವ ಬದಲು ಎರಡ್ಮೂರು ಎಳೆಗಳಲ್ಲಿಧರಿಸಿದಾಗ ಅದು ಕುತ್ತಿಗೆ ಪೂರ್ತಿ ಆವರಿಸಿಕೊಳ್ಳುತ್ತದೆ. ಇದು ಭಾರಿ ಆಭರಣ ಧರಿಸಿದಂತಹ ಭವ್ಯ ನೋಟ ನೀಡುತ್ತದೆ. ಬಂಗಾರ ಮಾತ್ರವಲ್ಲದೆ, ಕೃತಕ ಆಭರಣಗಳಲ್ಲೂಗುಂಡು ವಿಶೇಷ ಸ್ಥಾನ ಪಡೆದಿದೆ. ಇತ್ತೀಚಿನ ದಿನಗಳಲ್ಲಿಇದನ್ನು ಕೇವಲ ಸೀರೆಗೆ ಮಾತ್ರವಲ್ಲದೆ, ಇಂಡೋ-ವೆಸ್ಟರ್ನ್ ಉಡುಪುಗಳಿಗೂ ಮ್ಯಾಚ್ ಮಾಡಲಾಗುತ್ತಿದೆ. ಇದು ಯುವತಿಯರನ್ನು ಹೆಚ್ಚು ಆಕರ್ಷಿಸುತ್ತಿದೆ.
ಕೋಟ್
ಗುಂಡಿನ ಸರಗಳಲ್ಲಿವಿಭಿನ್ನ ವಿನ್ಯಾಸಗಳು ಇತ್ತೀಚೆಗೆ ಖ್ಯಾತವಾಗಿವೆ. ಇವುಗಳಿಗೆ ಆ್ಯಂಟಿಕ್ ಪೆಂಡೆಂಟ್ ಸಂಯೋಜನೆ ಗ್ರ್ಯಾಂಡ್ ಲುಕ್ ನೀಡುತ್ತದೆ. ಮದುಮಗಳ ಅಲಂಕಾರದಲ್ಲಿಗುಂಡಿನ ಲೇಯರ್ ್ಡ ಹಾರ ಅಥವಾ ಚೋಕರ್ಸ್ ವಿಶೇಷ ಕಳೆ ನೀಡುತ್ತದೆ.
ಶ್ರೀಧರ್ ಕೆ. | ಆಭರಣ ವಿನ್ಯಾಸಕ

