ವಸತಿ ಶಾಲಾ ಸಂಕೀರ್ಣ ನಿರ್ಮಾಣಕ್ಕೆ ಶಂಕುಸ್ಥಾಪನೆ

Contributed bypramod.harikant@timesofindia.com|Vijaya Karnataka

ಕಾರವಾರ ತಾಲೂಕಿನ ಬಾಡ ಹೋಬಳಿಯಲ್ಲಿರುವ ಬಿ.ಆರ್‌. ಅಂಬೇಡ್ಕರ್‌ ಬಾಲಕಿಯರ ವಸತಿ ಶಾಲಾ ಸಂಕೀರ್ಣದ ನೂತನ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿತು. ಶಾಸಕ ಸತೀಶ ಕೃಷ್ಣ ಸೈಲ್‌ ಅವರು ಕಾಮಗಾರಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಹಲವು ಗಣ್ಯರು ಉಪಸ್ಥಿತರಿದ್ದರು. ಇದು ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ಅನುಕೂಲವಾಗಲಿದೆ.

foundation laid for new residential school complex mla satish krishna saile

ವಸತಿ ಶಾಲಾ ಸಂಕೀರ್ಣ ನಿರ್ಮಾಣಕ್ಕೆ ಶಂಕುಸ್ಥಾಪನೆ

ವಿಕ ಸುದ್ದಿಲೋಕ ಕಾರವಾರ

ಕಾರವಾರ ತಾಲೂಕಿನ ಬಾಡ ಹೋಬಳಿಯ ಬಿ.ಆರ್ . ಅಂಬೇಡ್ಕರ್ ಬಾಲಕಿಯರ ವಸತಿ ಶಾಲಾ ಸಂಕೀರ್ಣದ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಕರ್ನಾಟಕ ರಾಜ್ಯ ಮಾರ್ಕೆಟಿಂಗ್ ಕಮ್ಯುನಿಕೇಷನ್ ಆ್ಯಂಡ್ ಅಡ್ವಟೈರ್ ಸ್ ಮೆಂಟ್ ಲಿ. ಅಧ್ಯಕ್ಷ, ಶಾಸಕ ಸತೀಶ ಕೃಷ್ಣ ಸೈಲ್ ಶಂಕುಸ್ಥಾಪನೆ ನೆರವೇರಿಸಿದರು.

ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶ ವೈ.ಕೆ. ಉಮೇಶ, ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಎನ್ . ನಾಯ್ಕ, ಕಾರವಾರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ರಾಜೇಂದ್ರ ರಾಣೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಚಂದ್ರಶೇಖರ ಬಿ., ಅಸ್ನೋಟಿ ಗ್ರಾಮ ಪಂಚಾಯಿತಿ ಪಿಡಿಒ ಪ್ರವೀಣ ಗಾವಸ ಮತ್ತಿತರರು ಇದ್ದರು.

ವಸತಿ ಶಾಲೆಯ ಪ್ರಭಾರ ಪ್ರಾಂಶುಪಾಲೆ ಪರಮೇಶ್ವರಿ ಡಿ. ಗೌಡ ಸ್ವಾಗತಿಸಿದರು. ಶಿಕ್ಷಕ್ಷಿ ಶ್ವೇತಾ ಗೌಡ ನಿರೂಪಿಸಿದರು. ಹೇಮಾ ಎಸ್ . ಗಾಂವಕರ್ ವಂದಿಸಿದರು.

ಫೋಟೊ

2ಪ್ರಮೋದ5

ಕಾರವಾರದಲ್ಲಿವಸತಿ ಶಾಲಾ ಸಂಕೀರ್ಣ ಕಟ್ಟಡ ಕಾಮಗಾರಿಗೆ ಶಾಸಕ ಸತೀಶ ಸೈಲ್ ಶಂಕುಸ್ಥಾಪನೆ ಮಾಡಿದರು.