ಶಿವಮೊಗ್ಗ : ಇಲಿಯಾಜ್ ನಗರದ ಫಾತಿಮಾ ರಸ್ತೆ ಹತ್ತಿರ ಸ್ಕೂಟಿ ನಿಲ್ಲಿಸಿಕೊಂಡು ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ದೊಡ್ಡಪೇಟೆ ಪೊಲೀಸರು ಬಂಧಿಸಿದ್ದಾರೆ. ಸವಾಯಿಪಾಳ್ಯದ ಮೊಹಮ್ಮದ್ ಅಹಮ್ಮದ್ ಅಜರುದ್ದೀನ್ ಅಲಿಯಾಸ್ ಫುಕು (28) ಎಂಬಾತನನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇನ್ನೊಬ್ಬ ಆರೋಪಿ ವಾದಿ ಎ ಹುದಾ ನಿವಾಸಿ ವಸೀಮ್ ಅಕ್ರಂ ಅಲಿಯಾಸ್ ಸೈಲೆಂಟ್ (24) ತಲೆಮರೆಸಿಕೊಂಡಿದ್ದು, ಪತ್ತೆಗಾಗಿ ತಂಡ ರಚಿಸಲಾಗಿದೆ.ಆರೋಪಿತರಿಂದ 2.66 ಕೆಜಿ
ತೂಕದ ಒಣ ಗಾಂಜಾ, ಸ್ಕೂಟಿಯನ್ನು ವಶಕ್ಕೆ ಪಡೆಯಲಾಗಿದೆ. ಫುಕು ವಿರುದ್ಧ ದೊಡ್ಡಪೇಟೆಯಲ್ಲಿಐದು ಮತ್ತು ತುಂಗಾನಗರ ಠಾಣೆಯಲ್ಲಿವಿವಿಧ ಕಲಂಗಳಡಿ ಒಟ್ಟು ಆರು ಪ್ರಕರಣಗಳು ದಾಖಲಾಗಿವೆ.

