ಸೈಬರ್ ಕ್ರೈಂ ಜಾಗೃತಿಗೆ ಮ್ಯಾರಥಾನ್

Contributed bygururaja.jd@gmail.com|Vijaya Karnataka

ಶಿವಮೊಗ್ಗದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ 'ನಮ್ಮ ಪೊಲೀಸ್ ನಮ್ಮ ಹೆಮ್ಮೆ' ಕಾರ್ಯಕ್ರಮ ಆಯೋಜಿಸಿತ್ತು. 'ಸೈಬರ್‌ ಕ್ರೈಂ ಜಾಗೃತಿ'ಯೊಂದಿಗೆ ಫಿಟ್ನೆಸ್ ಮತ್ತು ಡ್ರಗ್ಸ್ ಮುಕ್ತ ಕರ್ನಾಟಕ ಸಂದೇಶ ಸಾರಲಾಯಿತು. ಡಿಎಆರ್ ಕವಾಯತು ಮೈದಾನದಿಂದ 5ಕೆ ಮತ್ತು 10ಕೆ ಮ್ಯಾರಥಾನ್‌ ಓಟ ನಡೆಯಿತು. ಪೊಲೀಸ್ ಅಧಿಕಾರಿ, ಸಿಬ್ಬಂದಿ ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.

marathon in shivamogga for cyber crime awareness

ಶಿವಮೊಗ್ಗ: ಜಿಲ್ಲಾಪೊಲೀಸ್ ಇಲಾಖೆಯಿಂದ ಭಾನುವಾರ ‘ನಮ್ಮ ಪೊಲೀಸ್ ನಮ್ಮ ಹೆಮ್ಮೆ’ ಶೀರ್ಷಿಕೆಯಡಿ ‘ಫಿಟ್ನೆಸ್ ಫಾರ್ ಆಲ್ ’, ‘ ಡ್ರಗ್ ಮುಕ್ತ ಕರ್ನಾಟಕ ’ ಮತ್ತು ‘ಸೈಬರ್ ಕ್ರೈಂ ಜಾಗೃತಿ’ ಧ್ಯೇಯ ವಾಕ್ಯದಲ್ಲಿಡಿಎಆರ್ ಕವಾಯತು ಮೈದಾನದಿಂದ 5ಕೆ ಮತ್ತು 10ಕೆ ಮ್ಯಾರಥಾನ್ ಓಟ ನಡೆಯಿತು. ಪೊಲೀಸ್ ಅಧಿಕಾರಿ, ಸಿಬ್ಬಂದಿ ಮತ್ತು ನಗರದ ಸಾರ್ವಜನಿಕರು ಭಾಗವಹಿಸಿದ್ದ ಮ್ಯಾರಥಾನ್ ಗೆ ಜಿಲ್ಲಾರಕ್ಷಣಾಧಿಕಾರಿ ಬಿ.ನಿಖಿಲ್ ಚಾಲನೆ ನೀಡಿದರು. 5ಕೆ ಮತ್ತು 10ಕೆ ವಿಭಾಗದ ಮೊದಲ ಮೂರು ಸ್ಥಾನ ಪಡೆದ ವಿಜೇತರಿಗೆ ನಗದು ಬಹುಮಾನ ಮತ್ತು ಪ್ರಶಸ್ತಿ ಪ್ರದಾನ ಮಾಡಲಾಯಿತು. ಮೊದಲ 50 ಸ್ಥಾನ ಪಡೆದ ಪುರುಷ ಮತ್ತು ಮಹಿಳಾ ವಿಭಾಗದ ಸ್ಪರ್ಧಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಜಿಲ್ಲಾಹೆಚ್ಚುವರಿ ರಕ್ಷಣಾಧಿಕಾರಿಗಳಾದ ರಮೇಶ್ ಕುಮಾರ್ , ಎ.ಜಿ.ಕಾರಿಯಪ್ಪ ಸೇರಿದಂತೆ ಮತ್ತಿತರರಿದ್ದರು.