ಅಪರಾಧ ಪ್ರಕರಣಗಳಲ್ಲಿಅಪ್ರಾಪ್ತರ ಸಂಖ್ಯೆ ಹೆಚ್ಚಳ

Contributed bygururaja.jd@gmail.com|Vijaya Karnataka

ಶಿವಮೊಗ್ಗ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಅಪ್ರಾಪ್ತರ ದುರ್ಬಳಕೆ ಹೆಚ್ಚುತ್ತಿದೆ. ಅಪ್ರಾಪ್ತರು ಮಾದಕವಸ್ತು ಸೇವಿಸಿ ಹಿಂದೂ ಯುವಕರನ್ನು ಹತ್ಯೆ ಮಾಡುತ್ತಿದ್ದಾರೆ. ಪೊಲೀಸರು ಕ್ರಮ ಕೈಗೊಳ್ಳಲು ಕಾನೂನು ತೊಡಕು ಎದುರಾಗುತ್ತಿದೆ. 2025-26ರ ಸಾಲಿನಲ್ಲಿ ಬಾಲಾಪರಾಧಿಗಳ ಪ್ರಮಾಣ ಜಿಲ್ಲೆಯಲ್ಲಿ ಶೇ.15ರಷ್ಟು ಹೆಚ್ಚಾಗಿದೆ. ಈ ಬಗ್ಗೆ ಸರಕಾರ ಗಮನಹರಿಸಬೇಕು ಎಂದು ಶಾಸಕ ಎಸ್‌.ಎನ್‌. ಚನ್ನಬಸಪ್ಪ ಆಗ್ರಹಿಸಿದ್ದಾರೆ.

increase of 50 in the number of minors involved in crime cases in the state

ವಿಕ ಸುದ್ದಿಲೋಕ ಶಿವಮೊಗ್ಗ ಜಿಲ್ಲೆಸೇರಿದಂತೆ ರಾಜ್ಯದಲ್ಲಿಅಪ್ರಾಪ್ತರ ದುರ್ಬಳಕೆ ಆಗುತ್ತಿದ್ದು, ಎನ್ ಐಎನಿಂದ ಇದರ ಸಮಗ್ರ ತನಿಖೆ ನಡೆಸಬೇಕು ಎಂದು ಶಾಸಕ ಎಸ್ .ಎನ್ . ಚನ್ನಬಸಪ್ಪ$ಆಗ್ರಹಿಸಿದರು. ಗುರುವಾರ ಪತ್ರಿಕಾಗೋಷ್ಠಿಯಲ್ಲಿಮಾತನಾಡಿದ ಅವರು, ಅಪ್ರಾಪ್ತ ವಯಸ್ಸಿನ ಮುಸ್ಲಿಂ ಮಕ್ಕಳೆ ಮಾದಕವಸ್ತು, ಗಾಂಜಾ ಸೇವಿಸಿ ಹಿಂದೂ ಯುವಕರನ್ನು ಹತ್ಯೆ ಮಾಡುವ ಕೃತ್ಯ ಹೆಚ್ಚುತ್ತಿವೆ. ಅದಕ್ಕೆ ಇತ್ತೀಚೆಗೆ ಊರಗಡೂರಿನಲ್ಲಿನಡೆದ ವಿದ್ಯಾರ್ಥಿ ಸಂಕೇತ್ ಹತ್ಯೆಯೆ ನಿದರ್ಶನ ಎಂದರು. ಅಪ್ರಾಪ್ತರು ಎನ್ನುವ ಕಾರಣಕ್ಕಾಗಿ ಪೊಲೀಸರು ಇವರ ವಿರುದ್ಧ ಕ್ರಮ ಕೈಗೊಳ್ಳಲು ಆಗುತ್ತಿಲ್ಲ. ಇದಕ್ಕೆ ಕಾನೂನು ತೊಡಕು ಎದುರಾಗುತ್ತಿದೆ. ರಕ್ಷಣಾ ಇಲಾಖೆಯೂ ಅಸಹಾಯಕವಾಗಿದೆ. ಅಪ್ರಾಪ್ತರು ಕೊಲೆ ಮಾಡಿದರೂ ಅವರಿಗೆ ಶಿಕ್ಷೆಯಾಗುತ್ತಿಲ್ಲ. ಸರಕಾರ ಈ ಗಂಭೀರತೆಯತ್ತ ಗಮನಹರಿಸಬೇಕು ಎಂದು ಆಗ್ರಹಿಸಿದರು. 2025-26ರ ಸಾಲಿನಲ್ಲೆ ಬಾಲಾಪ ರಾಧಿಗಳ ಪ್ರಮಾಣ ಜಿಲ್ಲೆಯಲ್ಲಿಶೇ.15ರಷ್ಟು ಹೆಚ್ಚಾಗಿದೆ. ಅದರಲ್ಲಿಮಾದಕವಸ್ತು ಸೇವನೆ, ಕಳವು ಪ್ರಕರಣ ಹೆಚ್ಚಿದೆ. ಶೇ.50ಕ್ಕಿಂತ ಹೆಚ್ಚಿನ ಪ್ರಕರಣ ಗಳಲ್ಲಿಎಸ್ ಎಸ್ ಎಲ್ ಸಿಗಿಂತ ಕಡಿಮೆ ಓದಿದವರು ಇದ್ದಾರೆ. ಬಾಲಾಪರಾಧಿಗಳಿಂದ ನಡೆದ ಒಟ್ಟು 67 ಪ್ರಕರಣಗಳಲ್ಲಿಪೋಕ್ಸೊ 24, ಕೊಲೆ 1, ಕೊಲೆ ಯತ್ನ 19, ದರೋಡೆ 3, ಗಾಂಜಾ ಸೇವನೆ-ಮಾರಾಟ 4, ಕಳವು ಮತ್ತು ಡಕಾಯಿತಿ 5 ಹಾಗೂ ಇನ್ನಿತರ ಪ್ರಕರಣ ಗಳಿವೆ. ಇದನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು ಎಂದರು. ಬಿಜೆಪಿ ಜಿಲ್ಲಾಧ್ಯಕ್ಷ ಎನ್ .ಕೆ. ಜಗದೀಶ್ , ಪ್ರಮುಖರಾದ ಮೋಹನ್ ರೆಡ್ಡಿ, ದೀನ್ ದಯಾಳ್ , ಕೆ.ಜಿ. ಕುಮಾರಸ್ವಾಮಿ ಇದ್ದರು.