ಆಕಸ್ಮಿಕ ಬೆಂಕಿಯಿಂದ ಮನೆ ಭಸ್ಮ, ವೃದ್ಧೆಗೆ ಗಾಯ

Contributed byvarunakumarad987@gmail.com|Vijaya Karnataka

ಕುಂಸಿ ಸಮೀಪದ ಚಿಕ್ಕದಾನವಂದಿಯಲ್ಲಿ ಗುರುವಾರ ಬೆಳಿಗ್ಗೆ ಬೆಂಕಿ ಅವಘಡ ಸಂಭವಿಸಿದೆ. ಇದರಿಂದ ಮನೆ ಸಂಪೂರ್ಣ ಸುಟ್ಟು ಹೋಗಿದೆ. ವೃದ್ಧೆ ನಾಗಮ್ಮ (65) ಅವರಿಗೆ ಗಾಯಗಳಾಗಿವೆ. ಕಾಲಿನ ಸ್ವಾಧೀನ ಕಳೆದುಕೊಂಡಿದ್ದ ನಾಗಮ್ಮ ಹೊರಬರಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಅವರನ್ನು ಮೆಗ್ಗಾನ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಊರಿನವರು ಬೆಂಕಿ ನಂದಿಸಿದರು. ಅಗ್ನಿ ಶಾಮಕ ದಳ ತನಿಖೆ ನಡೆಸಿದೆ.

house consumed by accidental fire 65 year old elderly woman injured

ವಿಕ ಸುದ್ದಿಲೋಕ ಕುಂಸಿ ಸಮೀಪದ ಚಿಕ್ಕದಾನವಂದಿಯಲ್ಲಿಗುರುವಾರ ಬೆಳಗ್ಗೆ ಆಕಸ್ಮಿಕ ಬೆಂಕಿ ಬಿದ್ದು ಮನೆ ಭಸ್ಮವಾಗಿದ್ದು, ವೃದ್ಧೆ ನಾಗಮ್ಮ (65) ಅವರ ಮೈ ಕೈ ಸಂಪೂರ್ಣ ಸುಟ್ಟಿದೆ. ನಾಗಮ್ಮ ಮಗ ಶಿವಕುಮಾರ್ ಜತೆ ವಾಸವಿದ್ದರು. ಶಿವಕುಮಾರ್ ಹಾಗೂ ಆತನ ಪತ್ನಿ ಬುಧವಾರ ಹಬ್ಬಕ್ಕೆಂದು ಊರಿಗೆ ಹೋಗಿದ್ದು, ಗುರುವಾರ ಬೆಳಗ್ಗೆ ಈ ಘಟನೆ ನಡೆದಿದೆ. ನಾಗಮ್ಮ ಇತ್ತೀಚೆಗೆ ಕಾಲಿನ ಸ್ವಾಧೀನ ಕಳೆದುಕೊಂಡಿದ್ದು, ಬೆಂಕಿ ಹೊತ್ತಿದ ಬಳಿಕ ಹೊರ ಬರಲು ಪ್ರಯತ್ನಿಸಿದ್ದಾರೆ. ಅಷ್ಟರಲ್ಲಾಗಲೇ ಮನೆಗೆ ಸಂಪೂರ್ಣ ಬೆಂಕಿ ಆವರಿಸಿಕೊಂಡಿದ್ದು, ಹೊರಬರಲಾಗದೆ ನಾಗಮ್ಮ ಅವರ ಮೈ ಕೈ ಸಂಪೂರ್ಣ ಸುಟ್ಟುಹೋಗಿದೆ. ಗಾಯಾಳುವನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಊರಿನವರೆಲ್ಲರೂ ಸೇರಿ ಬೆಂಕಿ ನಂದಿಸಿದ್ದು, ನಂತರ ಸ್ಥಳಕ್ಕೆ ಬಂದ ಅಗ್ನಿ ಶಾಮಕ ದಳ ಸಿಬ್ಬಂದಿ ತನಿಖೆ ನಡೆಸಿದ್ದಾರೆ. ಸ್ಥಳಕ್ಕೆ ಆರ್ ಐ, ವಿಎ ಹಾಗೂ ಪಿಡಿಒ ಭೇಟಿ ನೀಡಿದ್ದರು.