ಆದೇಶ ಎತ್ತಿಹಿಡಿದ ಹೈಕೋರ್ಟ್

Contributed bysrikanth.g@timesgroup.com|Vijaya Karnataka

ಚೆಕ್‌ ಬೌನ್ಸ್‌ ಪ್ರಕರಣದಲ್ಲಿ ಮೂಡಿಗೆರೆಯ ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರಿಗೆ ಹೈಕೋರ್ಟ್‌ ಷರತ್ತು ವಿಧಿಸಿದೆ. ವಿಚಾರಣಾಧೀನ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್‌ ಎತ್ತಿ ಹಿಡಿದಿದೆ. ಎಂಟು ಪ್ರಕರಣಗಳಲ್ಲಿ ಒಟ್ಟಾರೆ 1.38 ಕೋಟಿ ರೂ.ಗಳನ್ನು ದೂರುದಾರರಿಗೆ ಪಾವತಿಸಬೇಕು. ಇಲ್ಲವಾದಲ್ಲಿ ಪ್ರತಿ ಪ್ರಕರಣಕ್ಕೆ ತಲಾ 6 ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕು. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ತೀರ್ಪನ್ನು ಹೈಕೋರ್ಟ್‌ ಎತ್ತಿ ಹಿಡಿದಿದೆ.

high court lifts order jds leader declared guilty

ವಿಕ ಸುದ್ದಿಲೋಕ ಬೆಂಗಳೂರು ಚೆಕ್ ಬೌನ್ಸ್ ಪ್ರಕರಣದಲ್ಲಿಮೂಡಿಗೆರೆಯ ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರನ್ನು ಅಪರಾಧಿ ಎಂದು ಘೋಷಿಸಿದ್ದ ವಿಚಾರಣಾಧೀನ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲ ಯದ ತೀರ್ಪು ಪ್ರಶ್ನಿಸಿ ಎಂ.ಪಿ.ಕುಮಾರಸ್ವಾಮಿ ಸಲ್ಲಿ ಸಿದ್ದ ಕ್ರಿಮಿನಲ್ ಮರುಪರಿಶೀಲನಾ ಅರ್ಜಿ ಯನ್ನು ನ್ಯಾಯ ಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ವಜಾಗೊಳಿಸಿದೆ. ವಿಸ್ತೃತ ಆದೇಶ ಇನ್ನಧಿಷ್ಟೇ ಪ್ರಕಟವಾಗ ಬೇಕಿದೆ. ಪ್ರತ್ಯೇಕ ಎಂಟು ಪ್ರಕರಣಗಳಲ್ಲಿಒಟ್ಟಾರೆ 1.38 ಕೋಟಿ ರೂ.ಧಿಗಧಿಳನ್ನು ದೂರುದಾರರಿಗೆ ಪಾವತಿಸಬೇಕು. ಇಲ್ಲವಾದಲ್ಲಿಪ್ರತಿ ಪ್ರಕರಣಕ್ಕೆ ತಲಾ 6 ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕು ಎಂದು ಮ್ಯಾಜಿಸ್ಪ್ರೇಟ್ ನ್ಯಾಯಾಲಯ 2023ರ ಫೆ.13ರಂದು ತೀರ್ಪು ನೀಡಿತ್ತು. ಅಲ್ಲದೆ, ಪ್ರತಿ ಪ್ರಕರಣದಲ್ಲಿತಲಾ 5 ಸಾವಿರ ರೂ.ಗಧಿಳಂತೆ ಸರಕಾರಕ್ಕೆ ವೆಚ್ಚದ ರೂಪದಲ್ಲಿಒಟ್ಟು 40 ಸಾವಿರ ರೂ. ಪಾವತಿಸ ಬೇಕೆಂದು ನ್ಯಾಯಾಲಯ ಆದೇಶ ಮಾಡಿತ್ತು. ಅದರಲ್ಲಿದೂರುದಾರ ಹೂವಪ್ಪಗೌಡರಿಗೆ 1,38,25,000 ರೂ. ಪಾವತಿಸ ಬೇಕಿದೆ. ಈ ತೀರ್ಪನ್ನು ಜನಪ್ರತಿನಿಧಿ ಗಳ ನ್ಯಾಯಾಲಯವು 2023ರ ಜು.19ಕ್ಕೆ ಕಾಯಂಗೊಳಿಸಿತ್ತು. ಪ್ರಕರಣದ ಹಿನ್ನೆಲೆ: ದೂರುದಾರ ಹೂವಪ್ಪ ಗೌಡ ಮತ್ತು ಕುಮಾರಸ್ವಾಮಿ ಪರಿಚಿತ ರಾಗಿದ್ದು, ಕುಮಾರಸ್ವಾಮಿ ವೈಯಕ್ತಿಕ ತುರ್ತಿಗಾಗಿ 1,66,70,000 ರೂ. ಸಾಲ ಪಡೆದಿದ್ದರು. ಅದಕ್ಕಾಗಿ 2017ರಲ್ಲಿ80 ಲಕ್ಷ, 85 ಲಕ್ಷ ಮತ್ತು 1.7 ಲಕ್ಷ ರೂ.ಧಿಗಳ ಚೆಕ್ ಗಳನ್ನು ಹೂವಪ್ಪಗೌಡರಿಗೆ ನೀಡಿದ್ದರು. ನಗದು ಮಾಡಲು ಚೆಕ್ ಗಳನ್ನು ಬ್ಯಾಂಕ್ ಗೆ ಸಧಿಲ್ಲಿಧಿಸಿಧಿದಾಗ ಅವು ಬೌನ್ಸ್ ಆಗಿದ್ದವು. ಹೀಗಾಗಿ, ಹೂವಪ್ಪಗೌಡರು ಕುಮಾರಸ್ವಾಮಿಗೆ ಡಿಮ್ಯಾಂಡ್ ನೋಟಿಸ್ ನೀಡಿದ್ದರು. ಆಗ, ಹಣ ಹಿಂದಿರುಗಿಸಲು ಸಿದ್ಧವಾಗಿರುವುದಾಗಿ ತಿಳಿಸಿದ್ದರು. ಆದರೆ, ಹಣ ಹಿಂದಿರುಗಿಸದ ಹಿನ್ನೆಲೆಯಲ್ಲಿಹೂವಪ್ಪಗೌಡರು ಕುಮಾರ ಸ್ವಾಮಿ ವಿರುದ್ಧ ಮೂರು ಖಾಸಗಿ ದೂರು ದಾಖಲಿಸಿದ್ದರು. ಇದೇ ವೇಳೆಗೆ 2018ರ ವಿಧಾನಸಭೆ ಚುನಾವಣೆ ಬಂದ ಹಿನ್ನೆಲೆಯಲ್ಲಿಪ್ರಕರಣ ಇತ್ಯರ್ಥಪಡಿಸಿ ಕೊಳ್ಳಲು ಕುಮಾರಸ್ವಾಮಿ ಮುಂದಾಗಿ, ಸದ್ಯ 1,40,00,000 ಪಾವತಿಸಲಾಗುವುದು. ಉಳಿದ ಮೊಧಿತ್ತಧಿವನ್ನು ಬಳಿಕ ನೀಡುವುದಾಗಿ ಹೇಳಿ ಹಣ ಪಾವತಿ ಮಾಡಿದ್ದರು. ಹೀಗಾಗಿ, ಹೂವಪ್ಪಗೌಡ ದಾವೆಗಳನ್ನು ಹಿಂಪಡೆದಿದ್ದರು. ಆದರೆ, ನಂತರ ಹಣ ಪಾವತಿ ಮಾಡದ ಹಿನ್ನೆಲೆಯಲ್ಲಿಕುಮಾರಸ್ವಾಮಿ ವಿರುದ್ಧ ಹೂವಪ್ಪಗೌಡರು ಎಂಟು ಪ್ರತ್ಯೇಕ ಪ್ರಕರಣ ದಾಖಲಿಸಿದ್ದರು.