ವೆಂ.ಸುನೀಲ್ ಕುಮಾರ್ ಕೋಲಾರ ಖ್ಠ್ಞಜ್ಝಿ.k್ಠಞa್ಟ14ಃಠಿಜಿಞಛಿsಟ್ಛಜ್ಞಿdಜಿa.್ಚಟಞ ರಾಜ್ಯದ ವಿವಿಧ ಕೈಗಾರಿಕಾ ಪ್ರದೇಶಗಳ ಆಸ್ತಿ ತೆರಿಗೆ ಸಂಗ್ರಹ ವಿಚಾರ ಕೆಐಎಡಿಬಿ ಹಾಗೂ ಗ್ರಾಪಂಗಳ ನಡುವಿನ ಸಮರಕ್ಕೆ ಕಾರಣ ವಾಗಿದ್ದು, ಕಂಪನಿಗಳು ತೆರಿಗೆಯನ್ನು ಯಾರಿಗೆ ಪಾವತಿಸಬೇಕೆಂದು ಗೊತ್ತಾಗದೇ ಸಂದಿಗ್ಧ ಪರಿಸ್ಥಿತಿಗೆ ಸಿಲುಕಿವೆ. ತಮ್ಮ ವ್ಯಾಪ್ತಿಯಲ್ಲಿನ ಕೈಗಾರಿಕಾ ಪ್ರದೇಶ ಗಳಲ್ಲಿನ ಕೈಗಾರಿಕೆಗಳಿಂದ ತೆರಿಗೆ ಸಂಗ್ರಹಕ್ಕೆ ಗ್ರಾಪಂಗಳು ಮುಂದಾಗಿವೆ. ಮತ್ತೊಂದೆಡೆ ತೆರಿಗೆ ಯನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ (ಕೆಐಎಡಿಬಿ) ಪಾವತಿಸಬೇಕೆಂದು ವರ್ಷದ ಹಿಂದೆಯೇ ಕೆಐಎಡಿಬಿ ಅಧಿಸೂಚನೆ ಹೊರಡಿಸಿದೆ. ಅಷ್ಟೇ ಅಲ್ಲದೇ, ಕೈಗಾರಿಕೆಗಳಿಗೆ ತೆರಿಗೆಯನ್ನು ಗ್ರಾಪಂಗಳಿಗೆ ಪಾವತಿಸದಂತೆ ಸೂಚನೆ ನೀಡಿದೆ. ಆದರೆ, ಗ್ರಾಪಂಗಳು ಮಾತ್ರ ತೆರಿಗೆ ಪಾವತಿಸುವಂತೆ ಕೈಗಾರಿಕೆಗಳ ಹಿಂದೆ ಬಿದ್ದಿದ್ದು, ರಾಜ್ಯದ 17 ಕೈಗಾರಿಕಾ ಪ್ರದೇಶಗಳಲ್ಲಿನ ಕೈಗಾರಿಕೆಗಳು ತೆರಿಗೆಯನ್ನು ಯಾರಿಗೆ ಪಾವತಿಸಬೇಕೆಂಬ ಸ್ಪಷ್ಟತೆಯಿಲ್ಲದ ಕಾರಣ ಇದುವರೆಗೂ ತೆರಿಗೆ ಪಾವತಿ ಮಾಡಿಲ್ಲ. ಗೊಂದಲ ಮೂಡಿದ್ದು ಏಕೆ?: ಕಳೆದ ಆರ್ಥಿಕ ವರ್ಷದವರೆಗೂ ತೆರಿಗೆ ಸಂಗ್ರಹ ದಲ್ಲಿಯಾವುದೇ ಗೊಂದಲ ಇರಲಿಲ್ಲ. ತಮ್ಮ ವ್ಯಾಪ್ತಿಯಲ್ಲಿನ ಕೈಗಾರಿಕೆಗಳಿಂದ ಗ್ರಾಪಂಗಳು ತೆರಿಗೆ ಸಂಗ್ರಹಿಸುತ್ತಿದ್ದವು. ಬೃಹತ್ ಹೂಡಿಕೆ ಪ್ರದೇಶಗಳು ಹಾಗೂ ಕೈಗಾರಿಕಾ ಪ್ರದೇಶಗಳನ್ನು ಸ್ಥಾಪಿಸಲು, ನಿಯಂತ್ರಿಸಲು ಮತ್ತು ನಿರ್ವಹಿಸಲು ಸರಕಾರ ವಿಶೇಷ ಹೂಡಿಕೆ ಪ್ರದೇಶ
(ಎಸ್ ಐಆರ್ ) ಕಾಯಿದೆ ಜಾರಿಗೆ ತಂದು ರಾಜ್ಯದಲ್ಲಿಹೆಚ್ಚು ಆದಾಯ ತರುವ 17 ಕೈಗಾರಿಕಾ ಪ್ರದೇಶಗಳನ್ನು ಎಸ್ ಐಆರ್ ವ್ಯಾಪ್ತಿಗೆ ತಂದಿತ್ತು. ಅಷ್ಟೇ ಅಲ್ಲದೇ, ಎಸ್ ಐಆರ್ ಗಳ ಸಂಪೂರ್ಣ ಜವಾ ಬ್ದಾ ರಿ ಯನ್ನು ಕೆಐಎಡಿಬಿಗೆ ವಹಿಸಿ 2025ರ ಏಪ್ರಿಲ್ 1ರಿಂದ ಜಾರಿಗೆ ಬರುವಂತೆ 17 ಎಸ್ ಐಆರ್ ವ್ಯಾಪ್ತಿಯ ಆಸ್ತಿಗಳ ಮೌಲ್ಯ ಮಾಪನ, ತೆರಿಗೆ ವಿಧಿಸುವುದು ಹಾಗೂ ಸಂಗ್ರಹವನ್ನು ಕೆಐಎ ಡಿಬಿಯ ಪ್ರಾದೇಶಿಕ ಅಭಿವೃದ್ಧಿ ಪ್ರಾಧಿಕಾರಕ್ಕೆ ವಹಿಸಲಾಗಿತ್ತು. ಸಂಗ್ರಹವಾಗುವ ಒಟ್ಟು ತೆರಿಗೆಯಲ್ಲಿಶೇ.30ರಷ್ಟನ್ನು ಗ್ರಾಪಂ ಗಳಿಗೆ ನೀಡುವು ದಾಗಿ ಕಾಯಿಧಿದೆಯಲ್ಲಿತಿಳಿಸಲಾಗಿತ್ತು. ಅಧಿಕಾರ ಮೊಟಕು: ಮಾಹಿತಿಯಿಲ್ಲ!: ಪಂಚಾಯತ್ ರಾಜ್ ಕಾಯ್ದೆಯ ಅನುಸಾರ ಗ್ರಾಪಂ ವ್ಯಾಪ್ತಿಯಲ್ಲಿರುವ ಆಸ್ತಿಗಳಿಂದ ತೆರಿಗೆ ಸಂಗ್ರಹ ಮಾಡುವ ಅಧಿಕಾರ ಕೇವಲ ಗ್ರಾಪಂ ಗಳಿಗೆ ಮಾತ್ರವೇ ಇದೆ. ಆದರೆ, ಕೆಐಎಡಿಬಿ ಎಸ್ ಐಆರ್ ಗಳನ್ನು ರಚಿಸಿ ತೆರಿಗೆ ಸಂಗ್ರಹ ಅಧಿಕಾರ ನೀಡಿರುವ ಬಗ್ಗೆ ರಾಜ್ಯ ಸರಕಾರ ದಿಂದ ಗ್ರಾಪಂಗಳು ಹಾಗೂ ಜಿಲ್ಲಾಪಂಚಾ ಯಿ ತಿಗಳಿಗೆ ಮಾಹಿತಿ ಬಂದಿಲ್ಲ. ಹೀಗಾಗಿ ಸರಕಾರದಿಂದ ಆದೇಶ ಬರುವವರೆಗೆ ತೆರಿಗೆ ಸಂಗ್ರಹಿಸುತ್ತೇವೆ ಎನ್ನುತ್ತಾರೆ ಜಿಪಂ ಹಿರಿಯ ಅಧಿಕಾರಿಗಳು.

